ಪಾಕಿಸ್ತಾನವು ಪುನಃ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಗಡಿರೇಖೆಯಲ್ಲಿ ಉಗ್ರರ ನೆಲೆ ನಿರ್ಮಾಣ ಮಾಡಿದೆ

  • ಭಾರತದ ಸರ್ಜಿಕಲ್ ಸ್ಟ್ರೈಕ್ ಬಳಿಕ ಪಾಕಿಸ್ತಾನ ಹಿಂದಕ್ಕೆ ಸರಿದಿತ್ತು !

  • ಜಿಹಾದಿ ಭಯೋತ್ಪಾದಕರು ಭಾರತದಲ್ಲಿ ನುಸುಳುವ ಸಿದ್ಧತೆಯಲ್ಲಿ !

ನವದೆಹಲಿ – ಪಾಕಿಸ್ತಾನವು ಭಾರತದಲ್ಲಿ ನುಸುಳಲು ಕಾಶ್ಮೀರದ ಗಡಿ ರೇಖೆಯ ಸ್ವಲ್ಪ ಅಂತರದಲ್ಲಿ ಭಯೋತ್ಪಾದಕರ ನೆಲೆಯನ್ನು ಸ್ಥಳಾಂತರಗೊಳಿಸಿದೆ. ಭಾರತವು ಸರ್ಜಿಕಲ ಸ್ಟ್ರೈಕ್ ಮಾಡುವ ಮೊದಲು ಅವರು ಗಡಿ ರೇಖೆಯ ಹತ್ತಿರವೇ ಇದ್ದರು; ಆದರೆ ತದನಂತರ ಅವರು ಹಿಂದಕ್ಕೆ ಸರಿಸಲಾಯಿತು. ಈಗ ಅವರು ಪುನಃ ಗಡಿ ರೇಖೆಯ ಹತ್ತಿರ ತರಲಾಗಿದೆ. ಈ ನೆಲೆಯಲ್ಲಿ ಭಯೋತ್ಪಾದಕರನ್ನು ಭಾರತದಲ್ಲಿ ನುಸುಳಲು ಒಗ್ಗೂಡಿಸಲಾಗಿದೆ. ಈ ಭಯೋತ್ಪಾದಕ ನೆಲೆಯು ಲಷ್ಕರ-ಎ-ತೋಯ್ಬಾ, ಜೈಶ-ಎ-ಮಹಮ್ಮದ ಮತ್ತು ಹಿಜ್ಬುಲ ಮುಜಾಹಿದೀನ ಈ ಜಿಹಾದಿ ಭಯೋತ್ಪಾದಕ ಸಂಘಟನೆಗಳದ್ದಾಗಿದೆ. ಸಧ್ಯಕ್ಷೆ ಗಡಿಯ ಹತ್ತಿರದ ಎಲ್ಲ ನೆಲೆ ಪ್ರಶಿಕ್ಷಣ ಪಡೆದಿರುವ ಭಯೋತ್ಪಾದಕರಿಂದ ತುಂಬಿದೆ ಮತ್ತು ಅದು ನೇರವಾಗಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ’ ಕಡೆಯಿಂದ ನಡೆಸಲಾಗುತ್ತಿದೆ. ಪಾಕಿಸ್ತಾನದಲ್ಲಿರುವ ಜಿಹಾದಿ ಭಯೋತ್ಪಾದಕ ಸಂಘಟನೆಯು ಪಾಕಿಸ್ತಾನ ಸೈನ್ಯದ ಮೇಲೆ ಯುದ್ಧ ನಿರ್ಬಂದವನ್ನು ಉಲ್ಲಂಘಿಸಲು ಒತ್ತಡ ತರಲಾಗುತ್ತಿದೆ. ಆದ್ದರಿಂದ ಪಾಕಿಸ್ತಾನದಿಂದ ಜಮ್ಮೂ-ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯವನ್ನು ಹೆಚ್ಚಿಸುವ ಸಾಧ್ಯತೆಯಿದೆ.

೧. ಮೂಲಗಳು ನೀಡಿರುವ ಮಾಹಿತಿಯನುಸಾರ ಜಿಹಾದಿ ಭಯೋತ್ಪಾದಕರ ಬಳಿ ಭಾರತದಲ್ಲಿ ನುಸುಳಲು ಅನೇಕ ಪ್ರವೇಶ ಮಾರ್ಗಗಳಿವೆ.

೨. ಪಾಕಿಸ್ತಾನದ ಪೇಶಾವರ, ಬಹಾವಲಪುರ ಮತ್ತು ಮುಝಫ್ಫರಾಬಾದನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಶಿಕ್ಷಿತ ಭಯೋತ್ಪಾದಕರಿದ್ದಾರೆ. ಅವರು ನಾಂಗರಹಾರ ಮತ್ತು ಅಫಘಾನಿಸ್ತಾನದ ಇತರ ಗಡಿ ಪ್ರದೇಶದಿಂದ ಬಂದಿದ್ದಾರೆ. ಅವರಿಗೆ ತಾಲಿಬಾನವು ಅಫಘಾನಿಸ್ತಾನದಲ್ಲಿ ನುಸುಳಲು ಕೊಡದೇ ಇದ್ದರಿಂದ ಅವರು ಭಾರತ ವಿರೋಧಿ ಚಟುವಟಿಕೆಗಳಲ್ಲಿ ಸಹಭಾಗಿಗಳಾದರು. ಈಗ ಅವರಿಗೆ ಭಾರತದಲ್ಲಿ ನುಸುಳಲು ಪಾಕಿಸ್ತಾನ ಸೈನ್ಯ ಸಹಾಯ ಮಾಡುತ್ತಿದೆ.

೩. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮಾನಶೇರಾ, ಮುಝಫ್ಫರಾಬಾದ ಮತ್ತು ಕೋಟಲಿ ಈ ಪ್ರದೇಶದಲ್ಲಿ ಲಷ್ಕರ-ಎ-ತೋಯ್ಬಾ, ಜೈಶ-ಎ-ಮಹಮ್ಮದ, ಅಲ್-ಬದರ ಮತ್ತು ಹರಕತ-ಉಲ್-ಮುಜಾಹಿದೀನ ಈ ಜಿಹಾದಿ ಭಯೋತ್ಪಾದಕ ಸಂಘಟನೆಯು ಕ್ಯಾಂಪ ನಡೆಸುತ್ತಿದ್ದಾರೆ. ಮಾನಶೇರಾದ ಬಾಲಾಕೋಟ ಮತ್ತು ಗಢಿ ಹಬಿಬುಲ್ಲಾದಲ್ಲಿ ನೆಲೆ ಹೊಂದಿದೆ. ಮುಝಫ್ಫರಾಬಾದನಲ್ಲಿ ಚೆಲಾಬಂದಿ, ಶವಯಿನಾಲಾ, ಅಬ್ದುಲ್ಲಾ ಬಿನ್ ಮಸೂದ ಮತ್ತು ದುಲಯಿಯಲ್ಲಿ ನೆಲೆ ಹೊಂದಿದೆ. ಪಾಕಿಸ್ತಾನಿ ಸೈನ್ಯದ ಪಾಕಿಸ್ತಾನ ಆಕ್ರಮಿತ ಬ್ರಿಗೇಡ ಸೆನ್ಸಾ, ಕೊಟಲಿ, ಗುಲಪೂರ, ಫಾಗೋಶ ಮತ್ತು ಡುಬಗಿ ನೆಲೆಯ ಮೇಲಿನ ಚಟುವಟಿಕೆಗಳ ಕುರಿತು ಸಮನ್ವಯ ಸಾಧಿಸುತ್ತಿದೆ. ಈ ನೆಲೆ ಪ್ರಮುಖವಾಗಿ ಗಡಿಯ ಹತ್ತಿರ ೨-೩ ಕಿಲೋಮೀಟರನಲ್ಲಿ ಇರುವ ಭಾರತದ ಗುರೇಝ, ಕೇಲ, ನೀಲಮ್ ವ್ಯಾಲಿ, ತಂಗಧರ, ಉರಿ ಚಕೋಟಿ, ಗುಲಮರ್ಗ, ಪೂಂಛ, ರಾಜೌರಿ, ನೌಶೇರಾ ಮತ್ತು ಸುಂದರಬನಿ ಈ ಪ್ರದೇಶದಲ್ಲಿ ನುಸುಳಲು ಉಪಯೋಗಿಸಲಾಗಿದೆ.

ಪಾಕಿಸ್ತಾನವು ಡ್ರೋನ್‌ನ ಸಹಾಯದಿಂದ ಭಾರತದಲ್ಲಿ ೩೦೦ ಚಿಕ್ಕ ಶಸ್ತ್ರಾಸ್ತ್ರಗಳನ್ನು ಕಳುಹಿಸಿದೆ !

ಪಾಕಿಸ್ತಾನವು ಡ್ರೋನ್‌ನ ಸಹಾಯದಿಂದ ಸುಮಾರು ೩೦೦ ಚಿಕ್ಕ ಶಸ್ತ್ರಾಸ್ತ್ರಗಳನ್ನು ಭಾರತದಲ್ಲಿ ಕಳುಹಿಸಿದೆ. ಇಂತಹ ಸಮಯದಲ್ಲಿ ಗಡಿಯಲ್ಲಿರುವ ನೆಲೆಯಲ್ಲಿ ಒಗ್ಗೂಡಿರುವ ಭಯೋತ್ಪಾದಕರು ಭಾರತದಲ್ಲಿ ನುಸುಳಿದರೆ, ಪಾಕಿಸ್ತಾನಕ್ಕೆ ರಕ್ತಪಾತ ಮಾಡಲು ಉಪಯುಕ್ತವಾಗಲಿದೆ ಎಂದು ಮೂಲಗಳ ಹೇಳಿಕೆಯಾಗಿದೆ. ಈ ೩೦೦ ಚಿಕ್ಕ ಶಸ್ತ್ರಾಸ್ತ್ರಗಳು ಶ್ರೀನಗರ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ತಲುಪಿವೆ. ಸಧ್ಯಕ್ಕೆ ಶ್ರೀನಗರ ನಗರದಲ್ಲಿ ತೋಯಬಾ ಮತ್ತು ಜೈಶನ ಸುಮಾರು ೫೦ ವಿದೇಶಿ ಭಯೋತ್ಪಾದಕರು ಇದ್ದಾರೆ. ಅವರಿಗೆ ಅಲ್ಲಿ ಇಡಲಾಗಿದ್ದು, ಅವಕಾಶ ಸಿಕ್ಕ ಬಳಿಕ ಅವರು ಅವರಿಗೆ ತಿಳಿಸಿರುವ ರಕ್ತಪಾತವನ್ನು ನಡೆಸುವವರಿದ್ದಾರೆ.

ಸಂಪಾದಕೀಯ ನಿಲುವು

ಭಾರತವು ಆಕ್ರಮಣವಾದ ಬಳಿಕ ಸರ್ಜಿಕಲ್ ಸ್ಟ್ರೈಕ್ ನಂತಹ ಕಾರ್ಯಾಚರಣೆ ನಡೆಸಬಾರದು. ಅದರಿಂದ ಕೆಲವು ಕಾಲದ ವರೆಗೆ ಸ್ವಲ್ಪ ಪರಿಣಾಮ ಬೀರುತ್ತದೆ. ಆದ್ದರಿಂದ ಸಂಪೂರ್ಣ ಪಾಕಿಸ್ತಾನಕ್ಕೆ ಪಾಠ ಕಲಿಸಲು ಪ್ರಯತ್ನಿಸಬೇಕು !

ಈ ನೆಲೆಯಿಂದ ಉಗ್ರವಾದಿಗಳು ನುಸುಳುವ ಮೊದಲು ಭಾರತವೇ ಈ ನೆಲೆಯ ಮೇಲೆ ಆಕ್ರಮಣ ಸಾಧಿಸಿ ಅಲ್ಲಿಯ ಭಯೋತ್ಪಾದಕರನ್ನು ಕೊಲ್ಲಬೇಕು !