ಮುಝಫ್ಫರನಗರ (ಉತ್ತರಪ್ರದೇಶ)ನಲ್ಲಿ ಒಬ್ಬ ಹಿಂದೂ ದರ್ಜಿಗೆ ಕನೈಯ್ಯಾಲಾಲನಂತೆ ಕೊಲ್ಲುವ ಬೆದರಿಕೆ

ನರೇಂದ್ರ ಕುಮಾರ ಸೈನಿ ಇವರೊಂದಿಗೆ ಚರ್ಚಿಸುತ್ತಿರುವ ಪೊಲೀಸ್ ಅಧಿಕಾರಿ

ಮುಝಫ್ಫರನಗರ(ಉತ್ತರಪ್ರದೇಶ) – ಇಲ್ಲಿಯ ಶಾಮಲಿ ರಸ್ತೆಯಲ್ಲಿರುವ ಗೋಶಾಲ ಮಾರುಕಟ್ಟೆಯಲ್ಲಿನ ನರೇಂದ್ರ ಕುಮಾರ ಸೈನಿ ಎಂಬ ದರ್ಜಿಯ ಅಂಗಡಿಗೆ ಒಂದು ಪತ್ರ ಕಳುಹಿಸಲಾಗಿದೆ. ಅದರಲ್ಲಿ, ‘ನೀನು ಒಬ್ಬ ದೊಡ್ಡ ದೇಶಭಕ್ತ ಆಗುತ್ತಿರುವೆ. ನೂಪುರ ಶರ್ಮಾ ಒಂದು ನೆಪ ಮಾತ್ರ, ಕನೈಯ್ಯಾಲಾಲ ನಂತೆ ನೀನು ನಮ್ಮ ಗುರಿಯಾಗಿರುವೆ. ನೀನು ಬದುಕುವುದಿಲ್ಲ. ಎಷ್ಟು ಓಡಲು ಸಾಧ್ಯ ಅಷ್ಟು ಓಡು’, ಎಂದು ಬೆದರಿಕೆ ನೀಡಲಾಗಿದೆ. ಇದರ ನಂತರ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬೆದರಿಕೆಯಿಂದ ಸೈನಿ ಮತ್ತು ಬೇರೆ ಹಿಂದೂ ಅಂಗಡಿದಾರರಲ್ಲಿ ಹೆದರಿಕೆಯ ವಾತಾವರಣ ನಿರ್ಮಾಣವಾಗಿದೆ. ಸೈನಿ ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಸಂಘಟನೆಗೆ ಸಂಬಂಧಪಟ್ಟವರಲ್ಲ ಹಾಗೂ ಅವರು ನೂಪುರ್ ಶರ್ಮಾ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಆದ್ದರಿಂದ ‘ಅವರಿಗೆ ಬೆದರಿಕೆ ಏಕೆ ನೀಡಲಾಗಿದೆ ?’, ಎಂದು ತಿಳಿದು ಬಂದಿಲ್ಲ. ಪೊಲೀಸರ ಪ್ರಕಾರ, ಇದು ಯಾರಾದರೂ ಪುಂಡಾಟಕ್ಕೆ ಮಾಡಿರುವ ಸಾಧ್ಯತೆ ಇರಬಹುದು ಎಂದು ಹೇಳಿದ್ದಾರೆ. ಸಿಸಿಟಿವಿ ಚಿತ್ರೀಕರಣದ ಆಧಾರದಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಹೇಳಿದರು.