ಟಿ. ರಾಜಾ ಸಿಂಹರವರ ಪುನಃ ಬಂಧನ

ಭಾಗ್ಯನಗರ (ತೆಲಂಗಾಣಾ) – ಭಾಗ್ಯನಗರದ ಪೊಲೀಸರು ಇಲ್ಲಿನ ಭಾಜಪದ ಅಮಾನತುಗೊಂಡ ಶಾಸಕ ಟಿ. ರಾಜಾ ಸಿಂಹರವರನ್ನು ಪುನಃ ಬಂಧಿಸಿದ್ದಾರೆ. ಅವರನ್ನು ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿದೆ. ೨ ದಿನಗಳ ಹಿಂದೆ ಅವರಿಗೆ ಮಹಂಮದ ಪೈಗಂಬರರವರ ಕಥಿತ ಅವಮಾನ ಮಾಡಿರುವ ವಿಷಯದಲ್ಲಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ನಂತರ ಜಾಮೀನಿನ ಮೇರೆಗೆ ಬಿಡಲಾಗಿತ್ತು. ಅನಂತರ ಅವರಿಗೆ ಆಗಸ್ಟ ೧೫ರಂದು ಮದ್ಯಾಹ್ನ ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿದೆ.

ಯಾರಾದರೂ ನನ್ನ ಧರ್ಮ ಹಾಗೂ ದೇಶದ ಬಗ್ಗೆ ಅಯೋಗ್ಯವಾಗಿ ಮಾತನಾಡುತ್ತಿದ್ದರೆ ನಾನು ಅವರದ್ದೇ ಭಾಷೆಯಲ್ಲಿ ಉತ್ತರಿಸುವೆನು ! – ಟಿ. ರಾಜಾ ಸಿಂಹ

ಈ ಬಂಧನದ ಮೊದಲು ಟಿ. ರಾಜಾ ಸಿಂಹರವರು ಒಂದು ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು ‘ಇಂದು ಅಥವಾ ನಾಳೆ ನನ್ನನ್ನು ಬಂಧಿಸಬಹುದು. ನಾನು ಇಷ್ಟೇ ಹೇಳಲು ಬಯಸುತ್ತೇನೆ, ಯಾರಾದರೂ ನನ್ನ ಧರ್ಮ ಹಾಗೂ ದೇಶದ ಬಗ್ಗೆ ಅಯೋಗ್ಯವಾಗಿ ಮಾತನಾಡುತ್ತಿದ್ದರೆ ನಾನು ಅವರದ್ದೇ ಭಾಷೆಯಲ್ಲಿ ಉತ್ತರಿಸುವೆನು; ಅದರ ಶಿಕ್ಷೆ ಏನೇ ಆಗಿರಲಿ. ಧರ್ಮಯುದ್ಧದಲ್ಲಿ ಪ್ರತಿಯೊಬ್ಬ ಹಿಂದೂವೂ ಎಂದಿನಂತೆಯೇ ನನ್ನೊಂದಿಗೆ ಇರುವರು ಎಂದು ಆಶಿಸುತ್ತೇನೆ, ಜಯ ಶ್ರೀರಾಮ !’ ಎಂದು ಹೇಳಿದರು.