‘ಟಿ. ರಾಜಾ ಸಿಂಹರವರನ್ನು ಸಿಕ್ಕಸಿಕ್ಕಲ್ಲಿ ಥಳಿಸಿರಿ ! (ಅಂತೆ)

ಕಾಂಗ್ರೆಸ್ಸಿನ ಶಾಸಕ ಫಿರೋಜ ಖಾನರಿಂದ ಮುಸಲ್ಮಾನರಿಗೆ ಬೆದರಿಕೆ !

ಭಾಗ್ಯನಗರ (ತೆಲಂಗಾಣಾ) – ಟಿ. ರಾಜಾ ಸಿಂಹರವರು ಓಲೈಕೆಯ ರಾಜಕಾರಣ ಮಾಡಲು ಇಚ್ಛಿಸುತ್ತಾರೆ. ಅವರನ್ನು ಜೈಲಿಗೆ ಕಳುಹಿಸಬೇಕು. ಟಿ. ರಾಜಾ ಸಿಂಹರವರು ತಮ್ಮ ಹೇಳಿಕೆಗಾಗಿ ಕ್ಷಮಾಯಾಚಿಸಬೇಕು ಹಾಗೂ ‘ಮಹಂಮದ ಪೈಗಂಬರ ಮುಸಲ್ಮಾನರ ಹೀರೋ ಆಗಿದ್ದಾರೆ’ ಎಂದು ಹೇಳಬೇಕು. ಅವರು ಹೀಗೆ ಮಾಡದಿದ್ದರೆ, ನಾನು ಪ್ರತಿಯೊಬ್ಬ ಮುಸಲ್ಮಾನರಿಗೂ ಭಾಗ್ಯನಗರದಲ್ಲಿ ರಾಜಾ ಸಿಂಹರವರು ಎಲ್ಲಿ ಭೇಟಿಯಾದರೂ ಅವರನ್ನು ಥಳಿಸಿರಿ ಎಂದು ಹೇಳುತ್ತೇನೆ. ನಾವು ಒಂದು ಬಾರಿ ಅಲ್ಲ ಸತತವಾಗಿ ಕಾನೂನನ್ನು ಕೈಗೆತ್ತಿಕೊಳ್ಳಬಲ್ಲೆವು, ಎಂಬ ಎಚ್ಚರಿಕೆಯನ್ನು ಕಾಂಗ್ರೆಸ್ಸಿನ ಶಾಸಕರಾದ ಫಿರೋಜ ಖಾನರವರು ನೀಡಿದ್ದಾರೆ. ಈ ಹಿಂದೆ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಗಳಾದ ರಾಶಿದ ಖಾನರವರು ರಾಜಾ ಸಿಂಹರವರನ್ನು ಬಂಧಿಸದಿದ್ದರೆ ಅವರ ಮನೆಯನ್ನು ಸುಟ್ಟುಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದರು.

ಸಂಪಾದಕೀಯ ನಿಲುವು

ಈ ರೀತಿಯಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಕರೆ ನೀಡಲಾಗುತ್ತಿರುವಾಗ ತೆಲಂಗಾಣಾ ಪೊಲೀಸರು ಅವರ ಮೇಲೆ ಕಾರ್ಯಾಚರಣೆಯನ್ನು ಮಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ ! ಯಾರಾದರೂ ಹಿಂದುತ್ವನಿಷ್ಠರು ಈ ರೀತಿಯಲ್ಲಿ ಕರೆ ನೀಡಿದ್ದರೆ ಅವರನ್ನು ತಕ್ಷಣ ಜೈಲಿಗೆ ಅಟ್ಟುತ್ತಿದ್ದರು !

‘ದೇಶದಲ್ಲಿನ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆ, ಎಂದು ಬೊಬ್ಬೆಹಾಕುವವರು ಈಗ ಎಲ್ಲಿದ್ದಾರೆ ?