ಭಾಗ್ಯನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ಹತ್ಯೆಗಾಗಿ ಪ್ರಚೋದನೆ ನೀಡುವ ಕಲಿಮುದ್ದೀನನ ಬಂಧನ

ಅಸದ್ದುದಿನ್ ಓವೈಸಿ ಮತ್ತು ಟಿ. ರಾಜಸಿಂಹ

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಗೋಶಾಮಹಲ ಮತದಾನ ಕ್ಷೇತ್ರದ ಭಾಜಪದ ಅಮಾನತುಗೊಂಡಿರುವ ಶಾಸಕ ಟಿ. ರಾಜಸಿಂಹ ಇವರು ಪೈಗಂಬರರ ಬಗ್ಗೆ ತಥಾಕಥಿತ ಅಪಮಾನದ ಬಗ್ಗೆ ಇಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮುಸಲ್ಮಾನರಿಂದ ಅಲ್ಲಲ್ಲಿ ಪ್ರತಿಭಟನೆಗಳು ಮಾಡಲಾಗುತ್ತಿದೆ. ಇಂತಹ ಆಂದೋಲನದ ಸಮಯದಲ್ಲಿ ಆಗಸ್ಟ್ ೨೪ ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರ ಹತ್ಯೆ ಮಾಡುವುದಕ್ಕೆ ಪ್ರಚೋದನೆ ನೀಡಿದ್ದ ಕಲೀಮುದ್ದೀನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಕಲೀಮುದ್ದಿನನ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಇದರಲ್ಲಿ ಅವನು, ‘ಕಡಿದು ಹಾಕಿ’ ಎಂದು ಹೇಳುತ್ತಿದ್ದಂತೆ ಸಮೂಹವು ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದವರನ್ನು’ ಎಂದು ಹೇಳುತ್ತಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ತಾಥಾಕಥಿತ ಅಸುರಕ್ಷಿತ ಮುಸಲ್ಮಾನರು ! ಈ ವಿಷಯದ ಬಗ್ಗೆ ಈಗ ಪ್ರಗತಿ(ಅಧೋಗತಿ)ಪರರು ಮತ್ತು ಜಾತ್ಯತೀತರು ಮಾತನಾಡುವರೇ ?

 

ಅಸದ್ದುದಿನ್ ಓವೈಸಿ ಇವರ ಒತ್ತಡದಿಂದ ಪೊಲೀಸರು ೯೦ ಗಲಬೆಕೋರ ಮತಾಂಧರ ಬಿಡುಗಡೆ !

ನಗರದಲ್ಲಿ ಮುಸಲ್ಮಾನರಿಂದ ಟಿ. ರಾಜಾ ಸಿಂಹ ಇವರ ವಿರುದ್ಧ ಆಂದೋಲನ ನಡೆಸುವಾಗ ಕೆಲವು ಸ್ಥಳಗಳಲ್ಲಿ ಹಿಂಸಾಚಾರವು ನಡೆದಿದೆ. ಅದೇ ರೀತಿ ಶಿರಚ್ಛೇದ ಮಾಡುವಂತೆ ಘೋಷಣೆಯನ್ನೂ ನೀಡಲಾಯಿತು. ಈ ಪ್ರಕರಣದಲ್ಲಿ ಪೊಲೀಸರು ೯೦ ಮತಾಂಧರನ್ನು ಬಂಧಿಸಿದ್ದರು. ಅದರ ನಂತರ ಇಲ್ಲಿಯ ಸಂಸದ ಅಸದುದ್ದಿನ್ ಓವೈಸಿ ಇವರಿಂದ ಪೊಲೀಸರ ಮೇಲೆ ಒತ್ತಡ ತಂದು ಅವರೆಲ್ಲರನ್ನು ಬಿಡುಗಡೆಗೊಳಿಸಲಾಗಿದೆ. ಈ ಕುರಿತು ಒಂದು ವಿಡಿಯೋ ಪ್ರಸಾರವಾಗುತ್ತಿದೆ. ಇದರಲ್ಲಿ ೯೦ ಜನರಲ್ಲಿ ಒಬ್ಬನು ರಾತ್ರಿ ಸಂಚಾರ ವಾಣಿಯ ಮೂಲಕ ಓವೈಸಿ ಜೊತೆಗೆ ಮಾತನಾಡುತ್ತಿರುವುದು. ಇದರಲ್ಲಿ ಅವನು ಓವೈಸಿ ಅವರಿಗೆ ಬಿಡುಗಡೆಗೊಳಿಸಲು ಪ್ರಯತ್ನಿಸಿದಕ್ಕೆ ಧನ್ಯವಾದ ಕೋರುತ್ತಿದ್ದಾನೆ ಮತ್ತು ಓವೈಸಿ ಅದನ್ನು ಒಪ್ಪಿಕೊಂಡಿರುವುದು ಕಾಣುತ್ತಿದೆ.

ಸಂಪಾದಕೀಯ ನಿಲುವು

ತೆಲಂಗಾಣದಲ್ಲಿ ‘ತೆಲಂಗಾಣ ರಾಷ್ಟ್ರ ಸಮಿತಿ’ಯ ಸರಕಾರ ಇದೆಯೇ ಅಥವಾ ಎಂ.ಐ.ಎಂ. ಪಕ್ಷದ ಸರಕಾರ ಇದೆಯೇ ? ಗಲಬೆಕೋರರ ಬಿಡುಗಡೆ ಮಾಡಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳುವುದಕ್ಕೆ ಹಿಂದೂ ಮತ್ತು ಅವರ ಸಂಘಟನೆಗಳು ಒತ್ತಾಯಿಸಬೇಕು !