ತಮಿಳುನಾಡಿನಲ್ಲಿ ‘ಜಲ್ಲಿಕಟ್ಟು’ಯಿಂದಾಗಿ 7 ಜನರು ಸಾವು: 400 ಜನರಿಗೆ ಗಾಯ, 2 ಎತ್ತುಗಳ ಸಾವು

ಚೆನ್ನೈ(ತಮಿಳುನಾಡು) – `ಪೊಂಗಲ’ ಹಬ್ಬದ ನಿಮಿತ್ತದಿಂದ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಜನವರಿ 16 ರಂದು ಆಯೋಜಿಸಿದ್ದ `ಜಲ್ಲಿಕಟ್ಟು’ ಉತ್ಸವದಲ್ಲಿ 7 ಜನರು ಸಾವನ್ನಪ್ಪಿದ್ದೂ 400 ಜನರು ಗಾಯಗೊಂಡಿದ್ದಾರೆ. ಪುದುಕ್ಕೊಟ್ಟೈ ಮತ್ತು ಶಿವಗಂಗೈನಲ್ಲಿ 2 ಎತ್ತುಗಳು ಸಾವನ್ನಪ್ಪಿವೆ. ಪ್ರಾಣ ಕಳೆದುಕೊಂಡ ಜನರಲ್ಲಿ ಹೆಚ್ಚಿನವರು ಕ್ರೀಡೆಯಲ್ಲಿ ಭಾಗವಹಿಸಿರಲಿಲ್ಲ, ಬದಲಾಗಿ ಗೂಳಿ ಮಾಲೀಕರು ಮತ್ತು ವೀಕ್ಷಕರಾಗಿದ್ದರು. ಈ ಉತ್ಸವದಲ್ಲಿ ಜನದಟ್ಟಣೆಯಲ್ಲಿ ಎತ್ತುಗಳನ್ನು ಓಡಿಸಲಾಗುತ್ತದೆ. ಈ ಕ್ರೀಡೆಯಲ್ಲಿ ರಾಜ್ಯಾದ್ಯಂತ 600 ಕ್ಕೂ ಹೆಚ್ಚು ಎತ್ತುಗಳು ಭಾಗವಹಿಸಿದ್ದವು.

ಜಲ್ಲಿಕಟ್ಟು ಎಂದರೇನು ?

ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯ ದಿನದಂದು ‘ಪೊಂಗಲ್’ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಅವರು ಹೊಸ ವರ್ಷವನ್ನು ಪ್ರಾರಂಭಿಸುತ್ತಾರೆ. 3 ದಿನ ನಡೆಯುವ ಹಬ್ಬದ ಕೊನೆಯ ದಿನದಂದು ಎತ್ತುಗಳನ್ನು ಪೂಜಿಸಲಾಗುತ್ತದೆ. ಅವುಗಳನ್ನು ಅಲಂಕರಿಸಲಾಗುತ್ತದೆ. ನಂತರ ಜಲ್ಲಿಕಟ್ಟು ಆಟ ಪ್ರಾರಂಭವಾಗುತ್ತದೆ. ಈ ಆಟವು ಪೊಂಗಲ್ ಹಬ್ಬದ ಒಂದು ಭಾಗವಾಗಿದೆ. ಈ ಕ್ರೀಡೆಯಲ್ಲಿ, ಒಂದು ಗೂಳಿಯನ್ನು ಜನದಟ್ಟಣೆಯಲ್ಲಿ ಬಿಡಲಾಗುತ್ತದೆ. ಈ ಕ್ರೀಡೆಯಲ್ಲಿ ಭಾಗವಹಿಸುವ ಜನರು ಗೂಳಿಯ ಭುಜ ಹಿಡಿದು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಗೂಳಿಯ ಭುಜವನ್ನು ಹೆಚ್ಚು ಹೊತ್ತು ಹಿಡಿದಿರುವವನು ವಿಜೇತನಾಗುತ್ತಾನೆ. ಜಲ್ಲಿಕಟ್ಟುವಿನ ಇತಿಹಾಸ 2 ಸಾವಿರ 500 ವರ್ಷಗಳಷ್ಟು ಹಳೆಯದು. ಜಲ್ಲಿಕಟ್ಟು ಎಂಬ ಹೆಸರು ಎರಡು ಪದಗಳಿಂದ ಬಂದಿದೆ: ಜಲ್ಲಿ (ಬೆಳ್ಳಿ ಮತ್ತು ಚಿನ್ನದ ನಾಣ್ಯಗಳು) ಮತ್ತು ಕಟ್ಟು (ಕಟ್ಟಿದ). ಜಲ್ಲಿಕಟ್ಟಿನಲ್ಲಿ ಒಂದು ಗೂಳಿ ಸತ್ತರೆ, ಆಟಗಾರರು ತಲೆ ಬೋಳಿಸಿಕೊಳ್ಳುತ್ತಾರೆ ಮತ್ತು ಅದರ ಅಂತ್ಯಸಂಸ್ಕಾರ ಮಾಡುತ್ತಾರೆ.