
ವಾಷಿಂಗ್ಟನ – ಭಾರತೀಯ ವಂಶದ ಅಮೇರಿಕನ ಸಂಸದ ರಾಜಾ ಕೃಷ್ಣಮೂರ್ತಿಯವರು ಇತ್ತೀಚೆಗೆ ಸಂಸತ್ತಿನಲ್ಲಿ ಜನವರಿ ತಿಂಗಳನ್ನು ‘ತಮಿಳು ಭಾಷೆ ಮತ್ತು ಪರಂಪರೆಯ ತಿಂಗಳು’ ಎಂದು ಆಚರಿಸುವ ಪ್ರಸ್ತಾಪವನ್ನು ಮಂಡಿಸಿದರು. ಪ್ರಸ್ತಾವನೆಯನ್ನು ಮಂಡಿಸಿದ ನಂತರ, ರಾಜಾ ಕೃಷ್ಣಮೂರ್ತಿ ‘ಎಕ್ಸ್’ ನಲ್ಲಿ ಒಂದು ಪೋಸ್ಟ್ ಪ್ರಸಾರ ಮಾಡಿದ್ದಾರೆ. ಅದರಲ್ಲಿ ಅವರು, “ಒಬ್ಬ ತಮಿಳು ಅಮೇರಿಕನ್ ಆಗಿ, ಅಮೇರಿಕಾ ಮತ್ತು ಪ್ರಪಂಚದಾದ್ಯಂತ ತಮಿಳು ಭಾಷೆ, ಪರಂಪರೆ ಮತ್ತು ಸಂಸ್ಕೃತಿಯನ್ನು ಗೌರವಿಸುವ ಈ ನಿರ್ಣಯವನ್ನು ಪರಿಚಯಿಸಲು ನನಗೆ ಹೆಮ್ಮೆಯಾಗುತ್ತದೆ” ಎಂದು ಬರೆದಿದ್ದಾರೆ.
1. ಪೊಂಗಲ್ ಮುಹೂರ್ತದಲ್ಲಿ ಮಂಡಿಸಲಾದ ಈ ಪ್ರಸ್ತಾವನೆಯನ್ನು ಬೆಂಬಲಿಸಲು 14 ಸಂಸದರ ಗುಂಪು ಕೂಡ ರಾಜಾರೊಂದಿಗೆ ಇತ್ತು. ಈ ಪ್ರಸ್ತಾವನೆಯನ್ನು ಬೆಂಬಲಿಸುವವರಲ್ಲಿ ಭಾರತೀಯ ಮೂಲದ 5 ಸಂಸದರು, ರೋ ಖನ್ನಾ, ಅಮಿ ಬೇರಾ, ಶ್ರೀ. ಠಾಣೇದಾರ, ಪ್ರಮೀಳಾ ಜಯಪಾಲ್ ಮತ್ತು ಸುಹಾಸ ಸುಬ್ರಮಣ್ಯಮ್ ಸೇರಿದ್ದಾರೆ, ಇತರ ಸಂಸದರಲ್ಲಿ ಇಲ್ಹಾನ ಉಮರ, ಜಾನ ನಿಕೋಲ ಮಲ್ಲಿಯೋಟಾಕಿಸ್, ಯವೆಟ್ ಕ್ಲಾರ್ಕ್, ಸಾರಾ ಜೇಕಬ್ಸ, ಡೆಬೊರಾ ರಾಸ್, ಡ್ಯಾನಿ ಡೇವಿಸ, ದಿನಾ ಟೈಟಸ್, ಡಾನ ಡೇವಿಸ ಮತ್ತು ಸಮ್ಮರ ಲೀ ಸೇರಿದ್ದಾರೆ.
2. ಸಂಸತ್ತಿನಲ್ಲಿ ಮಂಡಿಸಲಾದ ಪ್ರಸ್ತಾವನೆಯಲ್ಲಿ, ರಾಜಾ ಕೃಷ್ಣಮೂರ್ತಿ ಅವರು, ವಿಶ್ವಾದ್ಯಂತ ತಮಿಳು ಮಾತನಾಡುವವರ ಸಂಖ್ಯೆ 8 ಕೋಟಿ ಇದೆ. ಇವರಲ್ಲಿ 3 ಲಕ್ಷ 60 ಸಾವಿರ ಜನರು ಅಮೇರಿಕನ್ನರು ಆಗಿದ್ದಾರೆ. ತಮಿಳು ವಿಶ್ವದ ಅತ್ಯಂತ ಹಳೆಯ ಭಾಷೆ ಎಂದು ಸಂಸದರು ಹೇಳಿದ್ದಾರೆ.
3. `ತಮಿಳ ಅಮೇರಿಕನ್ಸ್ ಯುನೈಟೆಡ್’ ಅಮೇರಿಕದಲ್ಲಿ ತಮಿಳು ಭಾಷೆಯವರೊಂದಿಗೆ ಸಂಬಂಧ ಹೊಂದಿರುವ ಸಂಸ್ಥೆಯು ಈ ಪ್ರಸ್ತಾಪಕ್ಕಾಗಿ ರಾಜಾ ಕೃಷ್ಣಮೂರ್ತಿ ಅವರಿಗೆ ಧನ್ಯವಾದ ಅರ್ಪಿಸಿದೆ. `ಫೆಡರೇಶನ ಆಫ್ ತಮಿಳ ಸಂಗಮ ಆಫ್ ನಾರ್ಥ್ ಅಮೇರಿಕನ್’ ಈ ಸಂಘಟನೆಯೂ ಈ ಪ್ರಸ್ತಾಪವನ್ನು ಬೆಂಬಲಿಸಿದೆ.