|
ಪ್ರಯಾಗರಾಜ – ಜನವರಿ 13 ರಿಂದ 16 ರವರೆಗೆ 7 ಕೋಟಿ ಭಕ್ತರು ಇಲ್ಲಿನ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಸರಕಾರ ಹೇಳಿಕೊಂಡಿದೆ. ಆದರೆ, ಈ ಅಂಕಿಅಂಶವನ್ನು ಸುಳ್ಳು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ ಟೀಕಿಸಿದ್ದಾರೆ. ಮಹಾ ಕುಂಭ ಮೇಳದಲ್ಲಿ ಭಕ್ತರ ಸಂಖ್ಯೆಯ ಬಗ್ಗೆ ಸರಕಾರ ಒದಗಿಸುವ ಪ್ರತಿಯೊಂದು ಮಾಹಿತಿಯೂ ಸುಳ್ಳಾಗಿದೆ. ಕೆಲವು ರೈಲುಗಳು ಖಾಲಿಯಾಗಿ ಓಡುತ್ತಿವೆ ಎಂದೂ ಅವರು ಹೇಳಿದರು. (ಸಮಾಜವಾದಿ ಪಕ್ಷ ಅಧಿಕಾರದಲ್ಲಿದ್ದಾಗ, ಫೆಬ್ರವರಿ 10, 2013 ರಂದು ಮೌನಿ ಅಮವಾಸ್ಯೆಯ ದಿನದಂದು, ಕುಂಭಮೇಳದಲ್ಲಿ ಭಕ್ತರ ಕಾಲ್ತುಳಿತ ಉಂಟಾಗಿ 36 ಭಕ್ತರು ಸಾವನ್ನಪ್ಪಿದರು. ಆ ಸಮಯದಲ್ಲಿ, ಅಂದಿನ ಸರಕಾರ ಮರಣ ಹೊಂದಿದ ಭಕ್ತರ ಶವಗಳ ದಹನಕ್ಕೂ ಸಹ ಯಾವುದೇ ಸಹಾಯ ನೀಡಿರಲಿಲ್ಲ. ಆದ್ದರಿಂದ, ಅಧಿಕಾರದಲ್ಲಿರುವಾಗ, ಕುಂಭಮೇಳದಲ್ಲಿ ಭಕ್ತರ ಜೀವದ ಬಗ್ಗೆ ಕಾಳಜಿ ವಹಿಸದೇ ಇರುವವರು, ಹಾಗೆಯೇ ಯಾವುದೇ ಸೌಲಭ್ಯವನ್ನು ಒದಗಿಸದೇ ಇದ್ದ ಅಖಿಲೇಶ ಯಾದವ ಅವರ ಸಮಾಜವಾದಿ ಪಕ್ಷವು ಹಿಂದೂದ್ವೇಷಿಯಾಗಿದೆಯೆಂದು ಎಂದು ಯಾರಾದರೂ ಹೇಳಿದರೆ ಅದರಲ್ಲಿ ತಪ್ಪೇನು ? – ಸಂಪಾದಕರು)
ಸರಕಾರಕ್ಕೆ ಯಾದವ ಅವರ ಪ್ರಮಾಣಪತ್ರದ ಅಗತ್ಯವಿಲ್ಲ ! – ಭಾಜಪ
ಈ ಕುರಿತು ದೆಹಲಿಯ ಚಾಂದನಿ ಚೌಕ್ ಪ್ರದೇಶದ ಭಾಜಪ ಸಂಸದ ಪ್ರವೀಣ ಖಂಡೇಲವಾಲ ಮಾತನಾಡಿ, ಸರಕಾರಕ್ಕೆ ಅಖಿಲೇಶ ಯಾದವ ಅವರ ಪ್ರಮಾಣಪತ್ರದ ಅಗತ್ಯವಿಲ್ಲ. ಅವರ ಹೇಳಿಕೆಗೆ ಯಾವುದೇ ಆಧಾರವಿಲ್ಲ. ಮಹಾ ಕುಂಭ ಮೇಳವು ಜನರಿಗೆ ಹೇಗೆ ಜನಪ್ರಿಯವಾಗುತ್ತಿದೆ ಎಂಬುದನ್ನು ಜಗತ್ತು ಗಮನಿಸುತ್ತಿದೆ. ಮಹಾಕುಂಭಕ್ಕೆ ದೇಶದಿಂದ ಮಾತ್ರವಲ್ಲದೆ ವಿದೇಶಗಳಿಂದಲೂ ಜನರು ಬರುತ್ತಿದ್ದಾರೆ.
ಮಹಾಕುಂಭದ ಕುರಿತು ಅಖಿಲೇಶ ಯಾದವ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಸರಕಾರದ ಸಚಿವ ದಯಾಶಂಕರ ಸಿಂಗ ಮಾತನಾಡಿ, ಜಗತ್ತಿನಲ್ಲಿ ಇದಕ್ಕಿಂತ ದೊಡ್ಡ ಧಾರ್ಮಿಕ ಕಾರ್ಯಕ್ರಮ ಇನ್ನೊಂದಿಲ್ಲ. ಇಷ್ಟೆಲ್ಲಾ ಹೇಳಿಕೆಗಳನ್ನು ನೀಡುವ ಮೂಲಕ ಅಖಿಲೇಶ ಯಾದವ ಏನನ್ನು ತೋರಿಸಲು ಬಯಸುತ್ತಿದ್ದಾರೆ ? ಎನ್ನುವುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು. ಮತಗಳ ರಾಜಕೀಯ ಆಗಬೇಕು; ಆದರೆ ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯ ವಿಷಯಕ್ಕೆ ಬಂದಾಗ, ನಾವೆಲ್ಲರೂ ಒಗ್ಗೂಡಿ ದೇಶವನ್ನು ಬಲಿಷ್ಠಗೊಳಿಸಲು ಪ್ರಯತ್ನಿಸಬೇಕು’, ಎಂದು ಹೇಳಿದರು.
ಯೋಗಿಯವರು ಮಾಡಿರುವುದು ಎಲ್ಲರಿಗೂ ಮಾಡಲು ಸಾಧ್ಯವಿಲ್ಲ ! – ಶ್ರೀ ಅನಿರುದ್ಧಾಚಾರ್ಯ ಮಹಾರಾಜರು

ಶ್ರೀ ಅನಿರುದ್ಧಾಚಾರ್ಯ ಮಹಾರಾಜರು ಮಾತನಾಡಿ, “ಸಂಪೂರ್ಣ ದೇಶವು ಮಹಾಕುಂಭದ ಪವಿತ್ರ ಹಬ್ಬವನ್ನು ಆಚರಿಸುತ್ತಿದೆ. ಮುಖ್ಯಮಂತ್ರಿ ಯೋಗಿಯವರು ಕೇವಲ 4 ತಿಂಗಳಲ್ಲಿ ಮಹಾಕುಂಭನಗರವನ್ನು ಸ್ಥಾಪಿಸಿದರು. ಭಕ್ತರಿಗೆ ಅಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ನಗರವನ್ನು ನಿರ್ಮಿಸುವುದು ಎಲ್ಲರ ಕೈಯಲ್ಲಿಲ್ಲ. ಯೋಗಿ ಮಾಡಿದ್ದು ಎಲ್ಲರಿಗೂ ಸಾಧ್ಯವಿಲ್ಲ. ಇಡೀ ಪ್ರದೇಶದಲ್ಲಿ ವ್ಯವಸ್ಥೆಯಲ್ಲಿ ಯಾವುದೇ ಕೊರತೆಯಿಲ್ಲ’, ಎಂದು ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇಂದು ಮೌನಿ ಅಮವಾಸ್ಯೆಯ ಸಿದ್ಧತೆಯನ್ನು ನೋಡಲಿದ್ದಾರೆ !
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಜನವರಿ 18 ರಂದು ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಲಿದ್ದಾರೆ. ಜನವರಿ 29 ರಂದು ನಡೆಯಲಿರುವ ಮೌನಿ ಅಮವಾಸ್ಯೆ ಸ್ನಾನದ ಸಿದ್ಧತೆಯನ್ನು ಅವರು ವೀಕ್ಷಿಸಲಿದ್ದಾರೆ. ಆ ದಿನ ಅಂದಾಜು 8-10 ಕೋಟಿ ಭಕ್ತರು ಸ್ನಾನ ಮಾಡುತ್ತಾರೆ ಎಂದು ಸರಕಾರ ಅಂದಾಜು ಮಾಡಿದೆ. ಯೋಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲಿದ್ದಾರೆ. ಯಾತ್ರಾ ಕ್ಷೇತ್ರದ ತಪಾಸಣೆಯನ್ನೂ ಮಾಡುವ ಸಾಧ್ಯತೆಯಿದೆ.
ತ್ರಿವೇಣಿ ಸಂಗಮದಲ್ಲಿ ಇಲ್ಲಿಯವರೆಗೆ 7 ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದ್ದಾರೆ !
ಯೋಗಿ ಆದಿತ್ಯನಾಥ ಸರಕಾರದ ಮಾಹಿತಿಯನುಸಾರ, ಮಹಾ ಕುಂಭ ಮೇಳ ಪ್ರಾರಂಭವಾದಾಗಿನಿಂದ, ಅಂದರೆ 4 ದಿನಗಳಲ್ಲಿ 7 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ.
🔴”The figure of 7 crore devotees for the #MahaKumbh2025 is false!” – Anti-Hindu Statement by Samajwadi Party Chief Akhilesh Yadav
🗣️ BJP hits back: “The government doesn’t need Yadav’s certification!”
📜 In 2013, under SP’s rule, Azam Khan—a known hardliner—was made in-charge… pic.twitter.com/b80mS5Z9gO
— Sanatan Prabhat (@SanatanPrabhat) January 17, 2025
ಸಂಪಾದಕೀಯ ನಿಲುವುಆಜಂ ಖಾನ ಒಬ್ಬ ಕಟ್ಟರವಾದಿ ಮುಸಲ್ಮಾನನಾಗಿದ್ದು, ಅವರು ಹಿಂದೂದ್ವೇಷಿಯಾಗಿದ್ದರು. ಆದರೂ 2013 ರಲ್ಲಿ, ಆಡಳಿತಾರೂಢ ಸಮಾಜವಾದಿ ಪಕ್ಷವು ಆಜಂ ಖಾನ ಅವರನ್ನು ಕುಂಭಮೇಳದ ಉಸ್ತುವಾರಿ ಸಚಿವರನ್ನಾಗಿ ನೇಮಿಸಿತ್ತು. ಅವರು ಕುಂಭಮೇಳದ ನಿಯೋಜನೆ ಸಮರ್ಪಕವಾಗಿ ಮಾಡಲು ವಿಫಲರಾದ ಕಾರಣ, ಕಾಲ್ತುಳಿತದಂತಹ ಘಟನೆ ಸಂಭವಿಸಿದವು ಮತ್ತು ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಲಾಗಲಿಲ್ಲ. ಆದ್ದರಿಂದ, ಹಿಂದೂಗಳ ಬಗ್ಗೆ ಯಾವಾಗಲೂ ದ್ವೇಷದ ನಿಲುವು ತೆಗೆದುಕೊಳ್ಳುವ ಅಖಿಲೇಶ ಯಾದವ ಅವರಿಗೆ ಮಹಾಕುಂಭದ ಬಗ್ಗೆ ಮಾತನಾಡುವ ಹಕ್ಕಿಲ್ಲ! |