‘ಟೊಮ್ಯಾಟೋ ಫ್ಲೂ’ನ ಸೋಂಕು ಹೆಚ್ಚಾಗುತ್ತಿರುವುದರಿಂದ ಕೇಂದ್ರ ಸರಕಾರದಿಂದ ಮಾರ್ಗದರ್ಶಕ ಸೂಚನೆಗಳು ಜ್ಯಾರಿಯಾಗಿವೆ

ನವದೆಹಲಿ – ದೇಶದಲ್ಲಿ ಕೇರಳದ ನಂತರ ಕರ್ನಾಟಕ, ತಮಿಳುನಾಡು ಮತ್ತು ಓಡಿಶಾ ರಾಜ್ಯಗಳಲ್ಲಿ ‘ಟೊಮ್ಯಾಟೋ ಫ್ಲೂ’ನ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿಯ ವರೆಗೆ ೮೨ ರೋಗಿಗಳ ನೋಂದಣಿಯಾಗಿದೆ. ಇವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದಾರೆ. ಈ ರೋಗದ ರೋಗಿಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಕೇಂದ್ರ ಸರಕಾರವು ಕೆಲವು ಮಾರ್ಗದರ್ಶಕ ಸೂಚನೆಗಳನ್ನು ಘೋಷಿಸಿದೆ.

ಯಾರಿಗಾದರೂ ಈ ರೋಗ ಉಂಟಾಗಿದ್ದರೆ ಅವರಿಗೆ ಮೊಟ್ಟಮೊದಲು ೫-೭ ದಿನಗಳಿಗಾಗಿ ಬೇರೆ ಇಡಬೇಕು. ಯಾರೂ ಆ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬರದಂತೆ ಕಾಳಜಿ ವಹಿಸಬೇಕು. ರೋಗಿಯು ಸಂಪೂರ್ಣ ವಿಶ್ರಾಂತಿಯಲ್ಲಿರಬೇಕು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ದ್ರವ ಪದಾರ್ಥವನ್ನು ಸೇವಿಸಬೇಕು. ಉಗುರುಬೆಚ್ಚಗಿನ ನೀರಿನ ಸ್ಪಂಜು ಹಚ್ಚುವುದರಿಂದ ತ್ವಚೆಯ ಉರಿ ಕಡಿಮೆಯಾಗುತ್ತದೆ. ಮಕ್ಕಳಿಗೆ ಸಾಧ್ಯವಿದ್ದರೆ ರುಮಾಲನ್ನು ಬಳಸಬೇಕು. ಇದರಿಂದ ಗಾಯವಾಗದಂತೆ ಕಾಳಜಿವಹಿಸಬೇಕು. ಶರೀರದ ಯಾವ ಭಾಗದಲ್ಲಿ ಗುಳ್ಳೆಗಳಾಗುತ್ತಿವೆಯೋ ಆ ಭಾಗದ ಮೇಲೆ ತುರಿಸಿಕೊಳ್ಳಬಾರದು. ಮಕ್ಕಳ ಬಟ್ಟೆಗಳನ್ನು ಚೆನ್ನಾಗಿ ತೊಳೆಯಬೇಕು ಮತ್ತು ಈ ಕಾಲದಲ್ಲಿ ಅವರು ಪೌಷ್ಟಿಕ ಆಹಾರ ನೀಡಬೇಕು.

‘ಟೊಮ್ಯಾಟೋ ಫ್ಲೂ’ ಅಂದರೆ ಎನು ?

‘ಟೊಮ್ಯಾಟೋ ಫ್ಲೂ’ ಆಗಿರುವ ರೋಗಿಯಲ್ಲಿ ಶರೀರ ಭಾರವೆನಿಸುವುದು, ಗಂಟು ನೋವು, ಜ್ವರ, ವಾಂತಿ, ಚರ್ಮದಲ್ಲಿ ಉರಿ ಇವು ಸಾಮಾನ್ಯ ಲಕ್ಷಣಗಳಾಗಿವೆ. ಚಿಕ್ಕ ಮಕ್ಕಳ ಮೈಮೇಲೆ ಕೆಂಪು ಬಣ್ಣದ ಗುಳ್ಳೆಗಳು ಬರುತ್ತವೆ ಹಾಗೂ ನಿಧಾನವಾಗಿ ಈ ಗುಳ್ಳೆಗಳು ದೊಡ್ಡದಾಗುತ್ತವೆ. ಸಾಮಾನ್ಯವಾಗಿ ಟೊಮೇಟೋನ ಆಕಾರದಲ್ಲಿಆಗುವುದರಿಂದ ‘ಟೊಮ್ಯಾಟೋ ಫ್ಲೂ’ ರೋಗವು ೧೦ ವರ್ಷದ ಒಳಗಿನ ಮಕ್ಕಳಲ್ಲಿ ಬರುತ್ತಿದ್ದರೂ ಇದರಿಂದ ದೊಡ್ಡವರಿಗೂ ಅಪಾಯವಿದೆ. ಈ ರೋಗಿಗಳ ಸಂಪರ್ಕಕ್ಕೆ ಬರುವ ವ್ಯಕ್ತಿಗೆ ಈ ರೋಗ ಉಂಟಾಗುವ ಅಪಾಯವಿದೆ. ಹಾಗೆಯೇ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೂ ಈ ರೋಗದಿಂದ ಅಪಾಯವಿದೆ.