ಬಿಹಾರದಲ್ಲಿ ಆಢಳಿತಾರೂಢ ರಾಷ್ಟ್ರೀಯ ಜನತಾದಳದ ಮುಖಂಡನ ಮನೆಯ ಮೇಲೆ ಸಿಬಿಐ ದಾಳಿ

ಪಾಟಲಿಪುತ್ರ (ಬಿಹಾರ) – ರಾಷ್ಟ್ರೀಯ ಜನತಾದಳದ ಪ್ರಮುಖ ಲಾಲು ಪ್ರಸಾದ ಯಾದವ ಇವರ ಕಾರ್ಯಕಾಲದಲ್ಲಿ ನಡೆದಿರುವ ನೌಕರಿ ಹಗರಣದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳವು (ಸಿಬಿಐ) ಈ ಪಕ್ಷದ ಮುಖಂಡನ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಅಶಫಾಕ ಕರೀಮ್ ಮತ್ತು ಸುನೀಲ ಸಿಂಹ ಇವರ ಮನೆಯ ಸಹಿತ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಬಿಹಾರದ ನೂತನ ಸರಕಾರ ಬಹುಮತ ಪರೀಕ್ಷೆ ನಡೆಯಲಿದೆ. ಅದರ ಮೊದಲು ಈ ದಾಳಿ ನಡೆಸಿರುವದರ ಹಿಂದೆ ರಾಜಕೀಯ ಉದ್ದೇಶ ಇರುವುದೆಂದು ಟೀಕಿಸಲಾಗುತ್ತಿದೆ.

೧. ಸುನಿಲ ಸಿಂಗ ಇವರು, ಈ ದಾಳಿಗಳು ಉದ್ದೇಶಪೂರ್ವಕವಾಗಿ ನಡೆಸಲಾಗಿದೆ, ಈ ಕಾರ್ಯಾಚರಣೆಗೆ ಯಾವುದೇ ಅರ್ಥವಿಲ್ಲ, ನಮ್ಮನ್ನು ಹೆದರಿಸಿದರೆ ಶಾಸಕರು ಅವರ ಪರ ಮತದಾನ ಮಾಡುತ್ತಾರೆ ಎಂದು ಅವರಿಗೆ ಅನಿಸುತ್ತದೆ, ಎಂದು ಹೇಳಿದರು.

೨. ಶಾಸಕ ಮನೋಜ ಝಾ ಇವರು, ‘ಜಾರಿ ನಿರ್ದೆಶನಾಲಯ, ತೆರಿಗೆ ಇಲಾಖೆ ಅಥವಾ ಸಿಬಿಐನಿಂದ ಅಲ್ಲ, ಇದು ಭಾಜಪದಿಂದ ದಾಳಿ ನಡೆದಿದೆ. ಇಲಾಖೆಗಳು ಭಾಜಪದ ಅಂತರ್ಗತ ಕಾರ್ಯ ಮಾಡುತ್ತವೆ. ಭಾಜಪದ ಸಂಹಿತೆ ಮೇಲೆ ಈ ಕಾರ್ಯಾಲಯಗಳ ಕಾರ್ಯಚಟುವಟಿಕೆ ನಡೆಯುತ್ತದೆ. ಬಹುಮತ ಪರೀಕ್ಷೆ ಇದೆ ಮತ್ತು ಈಗ ಏನು ನಡೆಯುತ್ತಿದೆ ? ಈಗ ಇದರ ಪೂರ್ಣ ಅಂದಾಜು ಬಂದಿದೆ, ಎಂದು ಹೇಳಿದರು.