ಬಾಂಗ್ಲಾದೇಶದಲ್ಲಿ ಮತಾಂಧರಿಂದ ಹಿಂದೂಗಳ ೮ ಮನೆಗಳು ಬೆಂಕಿಗಾಹುತಿ; ಅಂಗಡಿಗಳು ಧ್ವಂಸ

ಬಾಂಗ್ಲಾದೇಶದಲ್ಲಿ ಅಸುರಕ್ಷಿತ ಹಿಂದೂಗಳು !

ಕಿಶೋರಗಂಜ (ಬಾಂಗ್ಲಾದೇಶ) – ಬಾಂಗ್ಲಾದೇಶದ ಕಿಶೋರಗಂಜ ಜಿಲ್ಲೆಯ ಭೈರವ ಚಂಡಿಬ ಗ್ರಾಮದಲ್ಲಿ ಮತಾಂಧರು ರಾತ್ರಿಯಲ್ಲಿ ಹಿಂದೂಗಳ ಮನೆಯ ಮೇಲೆ ದಾಳಿ ನಡೆಸಿದರು. ಈ ದಾಳಿಯಲ್ಲಿ ಹಿಂದೂಗಳ ಎಂಟು ಮನೆಗೆ ಬೆಂಕಿ ಹಚ್ಚಲಾಯಿತು. ಇಲ್ಲಿಯ ಕೆಲವು ಅಂಗಡಿಗಳನ್ನೂ ಸಹ ಧ್ವಂಸ ಮಾಡಲಾಯಿತು. ಹಿಂದೂಗಳ ಮನೆಗಳನ್ನು ಸುಟ್ಟು ಹಾಕಿದ್ದರಿಂದ ಸಂತ್ರಸ್ತ ಹಿಂದೂ ಕುಟುಂಬಗಳು ನಿರ್ಗತಿಕರಾಗಿದ್ದಾರೆ ಹಾಗೂ ನರಸಿಂಗಡಿ ಜಿಲ್ಲೆಯ ಫಲಾಶ ಉಪಜಿಲ್ಲೆಯಲ್ಲಿ ಹಿಂದೂ ವ್ಯಾಪಾರಿಗಳ ೪ ಅಂಗಡಿಗಳಿಗೂ ಮತಾಂಧರು ಬೆಂಕಿ ಹಚ್ಚಿದ್ದಾರೆ. ಈಗ ಇಲ್ಲಿಯ ಹಿಂದೂಗಳು ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ, ಎಂದು ‘ದಿ ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂ’ ಮಾಹಿತಿ ನೀಡಿದೆ.