ಗಯಾದಲ್ಲಿರುವ ವಿಷ್ಣುಪದ ದೇವಸ್ಥಾನದಲ್ಲಿ ಬಿಹಾರದ ಮುಸಲ್ಮಾನ ಮಂತ್ರಿಯ ಪ್ರವೇಶ !

  • ಮುಖ್ಯಮಂತ್ರಿ ನಿತೀಶ ಕುಮಾರರೊಂದಿಗೆ ನೇರವಾಗಿ ಗರ್ಭಗೃಹಕ್ಕೆ ಹೋದರು

  • ಗಂಗಾಜಲದಿಂದ ಅಹಿಂದೂಗಳ ಪ್ರವೇಶವನ್ನು ನಿಷೇಧಿಸಿರುವ ವಿಷ್ಣುಪದ ದೇವಸ್ಥಾನದ ಶುದ್ಧಿ !

ಗಯಾ (ಬಿಹಾರ) – ಇಲ್ಲಿನ ಪ್ರಸಿದ್ಧ ವಿಷ್ಣುಪದ ದೇವಸ್ಥಾನದಲ್ಲಿ ಅಹಿಂದೂಗಳ ಪ್ರವೇಶಕ್ಕೆ ನಿಷೇಧವಿದ್ದರೂ ರಾಜ್ಯದ ಮಾಹಿತಿ ಹಾಗೂ ತಂತ್ರಜ್ಞಾನ ಮಂತ್ರಿಗಳಾದ ಮಹಂಮದ ಇಜರಾಯಿಲಯವರು ಮುಖ್ಯಮಂತ್ರಿ ನಿತೀಶಕುಮಾರರವರೊಂದಿಗೆ ನೇರವಾಗಿ ದೇವಸ್ಥಾನದ ಗರ್ಭಗೃಹದಲ್ಲಿ ಪ್ರವೇಶಿಸಿದರು. ಹಿಂದೂಗಳು ಇದನ್ನು ತೀವೃವಾಗಿ ವಿರೋಧಿಸಿದ್ದು ನಿತೀಶಕುಮಾರವರ ಮೇಲೆ ಹಿಂದೂಗಳ ಶ್ರದ್ಧೆಯನ್ನು ಕಾಲಿನಿಂದ ಹೊಸಕಿರುವ ಆರೋಪಮಾಡಲಾಗುತ್ತಿದೆ. ಇಜರಾಯಿಲರವರ ಪ್ರವೇಶದಿಂದಾಗಿ ಸಂಪೂರ್ಣ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧಗೊಳಿಸಲಾಯಿತು.

೧. ನಿತೀಶ ಕುಮಾರವರು ಗಯಾ ಜಿಲ್ಲೆಯ ಪ್ರವಾಸದಲ್ಲಿರುವಾಗ ಪೂಜೆ ಮಾಡಲು ವಿಷ್ಣುಪದ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದ ಹೊರಗೆ ‘ಅಹಿಂದೂಗಳಿಗೆ ಪ್ರವೇಶವಿಲ್ಲ’ ಎಂಬ ಸ್ಪಷ್ಟವಾದ ಸೂಚನಾಫಲಕ ಹಚ್ಚಲಾಗಿದ್ದರೂ ರಾಜ್ಯದ ಮಂತ್ರಿಗಳಾದ ಇಜರಾಯಿಲರವರು ದೇವಸ್ಥಾನವನ್ನು ಪ್ರವೇಶಿಸಿದರು. ಈ ಸಮಯದಲ್ಲಿ ಅವರೊಂದಿಗೆ ಇದ್ದ ರಾಜ್ಯದ ಮುಖ್ಯ ಸಚಿವರಾದ ಆಮಿರ ಸುಹಾನಿರವರಿಗೆ ಈ ನಿಯಮದ ಬಗ್ಗೆ ತಿಳಿದಿದ್ದರಿಂದ ಅವರು ದೇವಸ್ಥಾನದ ಹೊರಗೆ ನಿಂತಿದ್ದರು.

೨. ಅನಂತರ ಇಜರಾಯಿಲರವರು ಪ್ರಸಾರ ಮಾಧ್ಯಮಗಳೊಂದಿಗೆ ಮಾತನಾಡುವಾಗ ‘ವಿಷ್ಣುಪದ ದೇವಸ್ಥಾನದ ಗರ್ಭಗೃಹಕ್ಕೆ ಹೋಗುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವೇ ಆಗಿದೆ’ ಎಂಬ ಹೇಳಿಕೆ ನೀಡಿದರು. ಇದರಿಂದ ಹಿಂದೂಗಳು ಸಿಟ್ಟಾಗಿ ನಿತೀಶಕುಮಾರರನ್ನು ಟೀಕಿಸಿದ್ದಾರೆ. ಓರ್ವ ಹಿಂದೂವು ‘ನಿತೀಶ ಕುಮಾರರವರು ಜಾಮಾ ಮಸೀದಿಗೆ ಹೋಗಿ ಹವನ ಮಾಡಿ ತೋರಿಸಬೇಕು’ ಎಂದು ಹೇಳಿದ್ದಾರೆ.

ದೇವಸ್ಥಾನದ ನೂರಾರು ವರ್ಷಗಳ ಪರಂಪರೆಯು ಭಗ್ನವಾಯಿತು – ದೇವಸ್ಥಾನ ಸಮಿತಿ

ಈ ಘಟನೆಯು ಎದುರಿಗೆ ಬರುತ್ತಲೇ ದೇವಸ್ಥಾನ ಸಮಿತಿ ಹಾಗೂ ಅರ್ಚಕರೂ ತೀವೃವಾಗಿ ಪ್ರತಿಕ್ರಿಯಿಸಿದ್ದಾರೆ. ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶಂಭು ಲಾಲ ವಿಠ್ಠಲರವರು ಭಗವಾನ ಶ್ರೀವಿಷ್ಣುವಿನ ಬಳಿ ಕ್ಷಮಾಯಾಚನೆ ಮಾಡಿದ್ದು ಗರ್ಭಗೃಹ ಹಾಗೂ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧಗೊಳಿಸಿದ್ದಾರೆ. ವಿಠ್ಠಲರವರು ಮಾತನಾಡುತ್ತ, ‘ಮುಸಲ್ಮಾನನ ಪ್ರವೇಶದಿಂದ ದೇವಸ್ಥಾನದ ನೂರಾರು ವರ್ಷಗಳ ಪರಂಪರೆಯು ಭಗ್ನವಾಗಿದೆ. ನಮಗೆ ಮುಖ್ಯಮಂತ್ರಿಗಳೊಂದಿಗೆ ಯಾರು ಇರಲಿದ್ದಾರೆ ? ಎಂಬುದು ತಿಳಿದಿರಲಿಲ್ಲ. ಆದುದರಿಂದ ನಾನು ಕೇವಲ ಭಗವಂತನಲ್ಲಿ ಮಾತ್ರವಲ್ಲ ಹಿಂದೂ ಸಮಾಜದ ಬಳಿಯೂ ಕ್ಷಮಾಯಾಚನೆ ಮಾಡುತ್ತೇನೆ. ಈ ಘಟನೆಯಿಂದಾಗಿ ಹಿಂದೂಗಳ ಭಾವನೆಗೆ ನೋವಾಗಿದೆ’, ಎಂದು ಹೇಳಿದರು.

 

ಸಂಪಾದಕೀಯ ನಿಲುವು

  • ಇದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸುವ ಪ್ರಯತ್ನವಲ್ಲವೇ ?, ಎಂಬುದರ ಬಗ್ಗೆಯೂ ವಿಚಾರಣೆ ನಡೆಸಬೇಕು !
  • ಇದೇ ರೀತಿಯಲ್ಲಿ ಹಿಂದೂಗಳು ಎಲ್ಲಿಯಾದರೂ ಇತರ ಪಂಥದವರ ಶ್ರದ್ಧಾಸ್ಥಾನಗಳಿಗೆ ಸಂಬಂಧಿಸಿದ ನಿಷೇಧಿತ ಸ್ಥಳವನ್ನು ಪ್ರವೇಶಿಸಿದ್ದರೆ ಪುರೋಗಾಮಿಗಳು ‘ಇದು ಹಿಂದೂಗಳ ದಂಗೆಗಳನ್ನು ಮಾಡುವ ಷಡ್ಯಂತ್ರವಾಗಿದೆ, ಎಂದು ಆರೋಪಿಸಲು ಹಿಂದೇಟು ಹಾಕುತ್ತಿರಲಿಲ್ಲ !, ಆದರೆ ಈಗ ಮಾತ್ರ ಅವರಿಗೆ ಸರ್ವಧರ್ಮ ಸಮಭಾವನೆಯ ನೆನಪಾಗುತ್ತದೆ !