ಆಮ್ ಆದ್ಮಿ ಪಕ್ಷ ಒಡೆದು ಭಾಜಪ ಸೇರಿದರೆ ಎಲ್ಲಾ ಕೇಸುಗಳನ್ನು ಹಿಂಪಡೆಯುತ್ತೇವೆ !

ಭಾಜಪದಿಂದ ಪಸ್ತಾಪ ಬಂದಿರುವುದಾಗಿ ದೆಹಲಿಯ ಉಪಮುಖ್ಯಮಂತ್ರಿ ಮನೀಷ ಸಿಸೊದಿಯಾ ಇವರ ಹೇಳಿಕೆ

ದೆಹಲಿಯ ಉಪಮುಖ್ಯಮಂತ್ರಿ ಮನೀಷ ಸಿಸೊದಿಯಾ

ನವ ದೆಹಲಿ – ಆಮ್ ಆದ್ಮಿ ಪಕ್ಷ ಬಿಟ್ಟು ಭಾಜಪದಲ್ಲಿ ಸೇರಿಕೊಳ್ಳಿ, ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಯ ಎಲ್ಲಾ ಪ್ರಕರಣಗಳನ್ನು ಮುಚ್ಚಲಾಗುವುದು, ಎಂದು ನನಗೆ ಪ್ರಸ್ತಾಪ ನೀಡಲಾಗಿದೆ; ಆದರೆ ನಾನು ಮಹಾರಾಣಾ ಪ್ರತಾಪ ಇವರ ವಂಶಸ್ಥ, ನಾನು ರಾಜಪೂತ ಆಗಿದ್ದೇನೆ. ನಾನು ಭ್ರಷ್ಟರು ಮತ್ತು ಕುತಂತ್ರಿಗಳಿಗೆ ತಲೆಬಾಗುವುದಿಲ್ಲ. ನನ್ನ ವಿರುದ್ಧದ ಎಲ್ಲಾ ಪ್ರಕರಣಗಳು ಸುಳ್ಳಾಗಿದೆ. ನಿಮಗೆ ಏನು ಮಾಡಬೇಕೋ ಅದನ್ನು ಮಾಡಿ, ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಇವರು ಟ್ವೀಟ್ ಮಾಡಿದ್ದಾರೆ.

೨ ದಿನಗಳ ಹಿಂದೆ ಸಿಸೋದಿಯಾ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿ ಅವರ ವಿರುದ್ಧ ಅಬಕಾರಿ ಸುಂಕ ಪ್ರಕರಣ ದಾಖಲಿಸಿತ್ತು. ಸಿಸೋದಿಯಾ ಅವರ ಈ ಹೇಳಿಕೆಗೆ ಭಾಜಪದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋದಿಯಾ ಅವರು ಕರ್ಣಾವತಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಅದರಲ್ಲಿ ಸಿಸೋದಿಯಾ ಅವರು ಈ ಮೇಲಿನ ದಾವೆ ಮಾಡಿದ್ದಾರೆ.