ದೇಶದ ೧೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರು ಒಬ್ಬರಿಗಿಂತ ಹೆಚ್ಚು ಪುರುಷರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುತ್ತಾರೆ !

ಕೇಂದ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಮೀಕ್ಷೆ

ನವದೆಹಲಿ – ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ’ ನಡೆಸಲಾಯಿತು. ಇದರಲ್ಲಿ ‘೧೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪುರುಷರ ತುಲನೆಯಲ್ಲಿ ಶೇ. ೦.೫ ರಷ್ಟು ಮಹಿಳೆಯರು ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಲೈಂಗಿಕ ಸಂಬಂಧ ಇಡುತ್ತಾರೆ’, ಎಂಬ ಮಾಹಿತಿ ಬಹಿರಂಗವಾಗಿದೆ. ಹಾಗೆಯೇ ಶೇ. ೪ ರಷ್ಟು ಪುರುಷರು ತಮ್ಮ ಪತ್ನಿ ಅಲ್ಲದ ಇಂತಹ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುತ್ತಾರೆ ಮತ್ತು ಒಟ್ಟಿಗೆ ಇರುತ್ತಾರೆ. ೧ ಲಕ್ಷ ೧೦ ಸಾವಿರ ಮಹಿಳೆಯರು ಮತ್ತು ೧ ಲಕ್ಷ ಪುರುಷರಲ್ಲಿ ಈ ಸಮೀಕ್ಷೆಯನ್ನು ನಡೆಸಲಾಯಿತು. ಈ ಸಮೀಕ್ಷೆ ಜಮ್ಮೂ-ಕಾಶ್ಮೀರ, ಲಡಾಖ, ಹರಿಯಾಣಾ, ಚಂಡಿಗಡ, ಆಸ್ಸಾಂ, ರಾಜಸ್ಥಾನ, ಮಧ್ಯಪ್ರದೇಶ, ಕೇರಳ, ಲಕ್ಷದ್ವೀಪ, ಪುದುಚೇರಿ ಮತ್ತು ತಮಿಳುನಾಡು ಈ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಯಿತು.

೧. ರಾಜಸ್ಥಾನದಲ್ಲಿ ಒಬ್ಬರಿಗಿಂತ ಹೆಚ್ಚು ಪುರುಷರೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದು ಶೇ. ೩.೧ ರಷ್ಟಿದ್ದರೆ, ಪುರುಷರ ಸಂಖ್ಯೆ ೧.೮ ರಷ್ಟಿದೆ.

೨. ನಗರಗಳ ಮಹಿಳೆಯರಿಗಿಂತ ಗ್ರಾಮೀಣ ಪ್ರದೇಶಗಳ ಮಹಿಳೆಯರ ಶೇಕಡಾವಾರು ಅಧಿಕ ಕಂಡು ಬಂದಿದೆ. ನಗರದ ಮಹಿಳೆಯರ ಶೇ. ೧.೫ ರಷ್ಟು ಇದ್ದರೆ, ಗ್ರಾಮೀಣ ಪ್ರದೇಶದ ಮಹಿಳೆಯರ ಸಂಖ್ಯೆ ಶೇ. ೧.೮ ರಷ್ಟಿದೆ.

೩. ವಿವಿಧ ರಾಜ್ಯಗಳ ಮಹಿಳೆಯರ ಶೇಕಡಾವಾರು ಅನುಗುಣವಾಗಿ ಉತ್ತರಪ್ರದೇಶದಲ್ಲಿ ೨.೨, ಹರಿಯಾಣದಲ್ಲಿ ೧.೮, ದೆಹಲಿಯಲ್ಲಿ ೧.೧, ಆಸ್ಸಾಂನಲ್ಲಿ ೨.೧, ಮಧ್ಯಪ್ರದೇಶದಲ್ಲಿ ೨.೫ ಮತ್ತು ತಮಿಳುನಾಡಿನಲ್ಲಿ ೨.೪ ರಷ್ಟು ಪ್ರಮಾಣದಲ್ಲಿ ಮಹಿಳೆಯರು ಒಬ್ಬರಿಗಿಂತ ಹೆಚ್ಚು ಪುರುಷರೊಂದಿಗೆ ಸಂಬಂಧ ಇಡುತ್ತಾರೆ.

ಸಂಪಾದಕೀಯ ನಿಲುವು

ಧರ್ಮಾಚರಣೆಯ ಕೊರತೆಯಿಂದಾಗಿ ಭಾರತದಲ್ಲಿ ಪಾಶ್ಚಿಮಾತ್ಯ ದೇಶಗಳಂತೆ ಶೀಘ್ರವಾಗಿ ಆಗುತ್ತಿರುವ ನೈತಿಕ ಅಧಃಪತನ !