‘ಗೆಸ್ಟ ಹೌಸ’ನಲ್ಲಿ ನಕಲಿ ಪೊಲೀಸ ಠಾಣೆಯ ಮಾಧ್ಯಮದಿಂದ ಹಫ್ತಾ ವಸೂಲಿ !

ಬಿಹಾರನಲ್ಲಿ ಮತ್ತೆ ಜಂಗಲರಾಜ !

  • ೫೦೦ ರೂಪಾಯಿ ದಿನಗೂಲಿಯ ಮೇಲೆ ನಕಲಿ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದರು !

  • ಮಹಿಳಾ ಪೊಲೀಸ ಅಧಿಕಾರಿ ನಕಲಿ ಆಗಿದ್ದಳು !

ಪಾಟಲಿಪುತ್ರ (ಬಿಹಾರ) – ಬಿಹಾರನ ಬಾಂಕಾ ಜಿಲ್ಲೆಯಲ್ಲಿ ‘ಅನುರಾಗ ಗೇಸ್ಟ ಹೌಸ’ ನಲ್ಲಿ ನಕಲಿ ಪೊಲೀಸ ಠಾಣೆ ನಡೆಸಲಾಗುತ್ತಿತ್ತು. ಇಲ್ಲಿ ಕೆಲವು ಜನರನ್ನು ಪೊಲೀಸರೆಂದು ೫೦೦ ರೂಪಾಯಿ ದಿನಗೂಲಿಯ ಮೇಲೆ ಕೆಲಸಕ್ಕೆ ಇಡಲಾಗಿತ್ತು. ಪೊಲೀಸ ಮುಖ್ಯಸ್ಥರಿಂದ ಉಪ ಅಧೀಕ್ಷಕ ಹುದ್ದೆಯ ವರೆಗಿನ ನೇಮಕಾತಿಯನ್ನು ಇಲ್ಲಿ ಮಾಡಲಾಗಿತ್ತು. ಪೊಲೀಸ ಅಧಿಕಾರಿಯೆಂದು ಒಬ್ಬ ಮಹಿಳೆಯಿದ್ದರು. ಈ ಪೊಲೀಸ ಠಾಣೆಯ ಮೂಲಕ ಸಾಮಾನ್ಯ ಜನರಿಂದ ಹಪ್ತಾ ವಸೂಲಿ ಮಾಡಲಾಗುತ್ತಿತ್ತು. ಈ ಪ್ರಕರಣದಲ್ಲಿ ಪೊಲೀಸರು ೨ ಮಹಿಳೆಯರೊಂದಿಗೆ ೪ ಜನರನ್ನು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯಲ್ಲಿ, ಅವರು ಝಾರಖಂಡ ಮುಖ್ಯಮಂತ್ರಿ ಹೇಮಂತ ಸೊರೆನ ಇವರು ತಮ್ಮನ್ನು ನೇಮಕ ಮಾಡಿದ್ದಾರೆಂದು ಹೇಳಿದ್ದಾರೆ.

೧. ಬಾಂಕಾ ಪೊಲೀಸ ಅಧೀಕ್ಷಕ ಡಾ. ಸತ್ಯಪ್ರಕಾಶ ಇವರು ಮಾತನಾಡುತ್ತಾ, ಗಸ್ತಿನ ಸಮಯದಲ್ಲಿ ಪೊಲೀಸ ಸಮವಸ್ತ್ರ ಧರಿಸಿರುವ ಒಬ್ಬ ಮಹಿಳೆ ಕಂಡು ಬಂದಳು, ಅವಳ ವಿಚಾರಣೆಗಾಗಿ ತಡೆದು ನಿಲ್ಲಿಸಿದಾಗ ಅವಳು ಓಡತೊಡಗಿದಳು. ಅವಳನ್ನು ಬೆನ್ನುಹತ್ತಿ ಹಿಡಿಯಲಾಯಿತು. ಈ ಆರೋಪಿಯು ‘ಸ್ಕ್ಯಾಟ ಪೊಲೀಸ ಟೀಮ ಪಟಣಾ’ ಹೆಸರಿನ ಒಂದು ನ್ಯಾಸ್‌ಅನ್ನು ಸ್ಥಾಪಿಸಿದ್ದರು. ತನ್ಮೂಲಕ ಅವರು ಪೊಲೀಸರೆಂದು ಜನರನ್ನು ಭರ್ತಿ ಮಾಡುತ್ತಿದ್ದರು. ಬಂಧಿಸಿರುವ ಮಹಿಳೆಯ ಹೆಸರು ಅನಿತಾ ಕುಮಾರಿ ಮತ್ತು ಜೂಲಿ ಕುಮಾರಿ ಆಗಿದ್ದು ಇನ್ನಿತರೆ ಇಬ್ಬರು ಆರೋಪಿಗಳ ಹೆಸರು ರಮೇಶ ಕುಮಾರ ಮತ್ತು ಆಕಾಶ ಕುಮಾರ ಆಗಿದೆ. ಮುಖ್ಯ ಆರೋಪಿ ಭೋಲಾ ಯಾದವ ಪರಾರಿಯಾಗಿದ್ದಾನೆ.

೨. ಅನುರಾಗ ಗೆಸ್ಟ ಹೌಸನ ಸಂಚಾಲಕರಾದ ರೋಹಿತ ಕುಮಾರ ಮಂಡಲ ಇವರು, ಈ ೫ ಜನರು ಕಳೆದ ಎರಡೂವರೆ ವರ್ಷಗಳಿಂದ ಪ್ರತಿ ತಿಂಗಳು ೩ ಸಾವಿರ ರೂಪಾಯಿಗಳನ್ನು ಕೊಟ್ಟು ವಾಸವಿದ್ದರು. ಅಲ್ಲಿ ಅವರು ತಾವು ಗುತ್ತಿಗೆದಾರರೆಂದು ಹೇಳಿಕೊಂಡಿದ್ದರು.