ಧರ್ಮಾಪುರಿ (ತಮಿಳುನಾಡು)ಯಲ್ಲಿ ಕ್ರೈಸ್ತರೆಂದು ಹೇಳಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿದ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಿ !

ಮುಖ್ಯೋಪಾಧ್ಯಾಯನಿ ತಮಿಳಸೆಲ್ವಿ

ಧರ್ಮಾಪುರಿ (ತಮಿಳುನಾಡು) – ಇಲ್ಲಿಯ ಒಂದು ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯನಿ ತಮಿಳಸೆಲ್ವಿ ಇವರು ಧಾರ್ಮಿಕ ಪರಂಪರೆಯೆನ್ನುತ್ತಾ ಸ್ವಾತಂತ್ರ್ಯ ದಿನದಂದು ಶಾಲೆಯಲ್ಲಿ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿತ್ತಿರುವ ಅವರ ಒಂದು ವಿಡಿಯೋ ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಧರ್ಮಾಪುರಿಯ ಮುಖ್ಯ ಶೈಕ್ಷಣಿಕ ಅಧಿಕಾರಿಗೆ ದೂರು ನೀಡಲಾಗಿದೆ. ಸ್ವಾತಂತ್ರ್ಯ ದಿನದಂದು ಸಮಾರಂಭದ ಸಮಯದಲ್ಲಿ ಶಿಕ್ಷಕಿ ರಜೆ ಪಡೆದಿರುವುದಾಗಿಯೂ ದೂರಿನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲದೆ ಈ ರೀತಿಯ ಘಟನೆ ಅನೇಕ ವರ್ಷಗಳಿಂದ ನಡೆಯುತ್ತಿರುವುದು ಕೂಡ ಇದರಲ್ಲಿ ನಮೂದಿಸಲಾಗಿದೆ. ತಮಿಳಸೆಲ್ವಿ ಈ ವರ್ಷ ನಿವೃತ್ತರಾಗಲಿದ್ದಾರೆ.

ಸಂಪಾದಕೀಯ ನಿಲುವು

ಇಲ್ಲಿಯವರೆಗೆ ದೇಶದ ಒಬ್ಬ ಹಿಂದೂವಾದರೂ ತಾನು ಹಿಂದೂ ಎಂದು ಹೇಳಿ ರಾಷ್ಟ್ರಧ್ವಜ ಹಾರಿಸಲು ಮತ್ತು ಅದಕ್ಕೆ ವಂದಿಸಲು ನಿರಾಕರಿಸಿದ್ದಾರೆಯೇ? ಆದರೆ ಇತರ ಧರ್ಮೀಯರಿಂದ ಬಹಳಷ್ಟು ಬಾರಿ ವಿರೋಧ ವ್ಯಕ್ತಪಡಿಸುವ ಜೊತೆಗೆ ಅದರ ಅವಮಾನ ಮಾಡಿರುವ ಘಟನೆ ನಡೆದಿದೆ ಮತ್ತು ನಡೆಯುತ್ತಿದೆ. ಇದರಿಂದ ಈ ದೇಶವನ್ನು ಯಾರು ಪ್ರೀತಿಸುತ್ತಾರೆ ಮತ್ತು ಯಾರು ದ್ವೇಷಿಸುತ್ತಾರೆ ಇದು ತಿಳಿಯುತ್ತದೆ !