ಇದು ಮುಸಲ್ಮಾನರ ಅಪ್ಪನ ಜಾಗವಲ್ಲ; ಶಾಂತಿಯಿಂದ ಇರಿ ಇಲ್ಲದಿದ್ದರೆ ಪಾಕಿಸ್ತಾನಕ್ಕೆ ಹೊರಟುಹೋಗಿರಿ !

ಸ್ವಾತಂತ್ರ್ಯವೀರ ಸಾವರಕರ ಫಲಕವನ್ನು ವಿರೋಧಿಸಿರುವ ಪ್ರಕರಣದಲ್ಲಿ ಕರ್ನಾಟಕದಲ್ಲಿನ ಭಾಜಪದ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಈಶ್ವರಪ್ಪರವರಿಂದ ಎಚ್ಚರಿಕೆ

ಮಾಜಿ ಮಂತ್ರಿ ಈಶ್ವರಪ್ಪ

ಶಿವಮೊಗ್ಗ (ಕರ್ನಾಟಕ) – ಇಲ್ಲಿ ಸ್ವಾತಂತ್ರ್ಯದಿನದ ನಿಮಿತ್ತವಾಗಿ ವಿವಿಧ ಕಡೆಗಳಲ್ಲಿ ಸ್ವಾತಂತ್ರ್ಯವೀರ ಸಾವರಕರರವರ ಛಾಯಾಚಿತ್ರವಿರುವ ಫಲಕಗಳನ್ನು ಹಾಕಲಾಗಿತ್ತು. ಅದಕ್ಕೆ ಸ್ಥಳೀಯ ಮುಸಲ್ಮಾನರು ವಿರೋಧಿಸುತ್ತ ಇಲ್ಲಿ ಟಿಪ್ಪು ಸುಲ್ತಾನ ಹಾಗೂ ಮಹಂಮದ ಜಿನ್ನಾರವರ ಚಿತ್ರವನ್ನು ಹಾಕಲು ಪ್ರಯತ್ನಿಸಿದರು. ಇದರಿಂದಾಗಿ ಇಲ್ಲಿ ವಾದ ನಿರ್ಮಾಣವಾಯಿತು. ಮತಾಂಧರು ಇಬ್ಬರು ಹಿಂದೂಗಳ ಮೇಲೆ ಮಾರಣಾಂತಿಕ ಹಲ್ಲೆಯನ್ನೂ ಮಾಡಿದರು. ಈ ಪ್ರಕರಣದ ಬಗ್ಗೆ ಪ್ರಸಾರಮಾಧ್ಯಮಗಳೊಂದಿಗೆ ಮಾತನಾಡುವಾಗ ಭಾಜಪದ ಸ್ಥಳೀಯ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ಈಶ್ವರಪ್ಪರವರು ಎಚ್ಚರಿಕೆ ನೀಡಿದ್ದಾರೆ. ಅವರು ಮಾತನಾಡುತ್ತ ‘ನಮಗೆ ಬೇಕಾದ ಕಡೆಗಳಲ್ಲಿ ನಾವು ಫಲಕಗಳನ್ನು ಹಾಕುತ್ತೇವೆ. ಈ ಜಾಗವು ಮುಸಲ್ಮಾನರ ಅಪ್ಪನದ್ದಲ್ಲ. ಶಾಂತಿಯಿಂದ ಇರಬೇಕಾದರೆ ಇರಿ ಹಾಗೂ ದೇಶವನ್ನು ವಿರೋಧಿಸುವವರು ಪಾಕಿಸ್ತಾನಕ್ಕೆ ಹೋಗಿ’ ಎಂದು ಹೇಳಿದರು.

ಈಶ್ವರಪ್ಪಾರವರು ಮಾತನಾಡುತ್ತ, ಸದ್ಯ ಇಲ್ಲಿನ ಸ್ಥಿತಿಯು ನಿಯಂತ್ರಣದಲ್ಲಿದೆ; ಆದರೆ ಈ ಹಿಂಸಾಚಾರಕ್ಕೆ ಇಲ್ಲಿನ ಕಾಂಗ್ರೆಸ್‌ ನಗರಸೇವಕರು ಜವಾಬ್ದಾರರಾಗಿದ್ದಾರೆ. ‘ಕಾಂಗ್ರೆಸ್‌ ರಾಷ್ಟ್ರದ್ರೋಹವನ್ನು ಸಮರ್ಥಿಸುತ್ತದೆ’, ಎಂದು ನಾನು ನೇರವಾಗಿ ಹೇಳಬಲ್ಲೆನು. ಈ ಹಿಂಸಾಚಾರ, ಅಂದರೆ ಶೇ. ೧೦೦ರಷ್ಟು ಷಡ್ಯಂತ್ರವಾಗಿದೆ. ವಿಶೇಷವೆಂದರೆ ೨೪ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ’, ಎಂದು ಹೇಳಿದರು.

ಉಡುಪಿಯಲ್ಲಿ ಫಲಕದ ಮೇಲೆ ‘ಜಯ ಹಿಂದೂ ರಾಷ್ಟ್ರ’ ಎಂದು ಬರೆದಿರುವುದಕ್ಕೆ ಕಾಂಗ್ರೆಸ್ಸಿನಿಂದ ವಿರೋಧ

ಉಡುಪಿಯಲ್ಲಿನ ಬ್ರಹ್ಮಗಿರಿ ಚೌಕಿಯಲ್ಲಿ ಹಾಕಲಾದ ಸ್ವಾತಂತ್ರ್ಯವೀರ ಸಾವರಕರ ಹಾಗೂ ನೇತಾಜಿ ಸುಭಾಷಚಂದ್ರ ಭೋಸರವರ ಫ್ಲೆಕ್ಸ ಫಲಕದ ಮೇಲೆ ‘ಜಯ ಹಿಂದೂ ರಾಷ್ಟ್ರ’ ಎಂದು ಬರೆಯಲಾಗಿದೆ. ಇದನ್ನು ಕಾಂಗ್ರೆಸ್‌ ವಿರೋಧಿಸಿದೆ. ‘ಈ ಫಲಕವನ್ನು ತೆಗೆಯದಿದ್ದರೆ, ದೊಡ್ಡ ಆಂದೋಲನವನ್ನು ಮಾಡುವೆವು’, ಎಂದು ಕಾಂಗ್ರೆಸ್‌ ಎಚ್ಚರಿಕೆ ನೀಡಿದೆ. ಕಾಂಗ್ರೆಸ್ಸಿನ ಆರೋಪವು ಹೀಗಿದೆ, ಈ ಫ್ಲೆಕ್ಸ್‌ನ್ನು ಅನುಮತಿಯ ಹೊರತು ಹಚ್ಚಲಾಗಿದೆ. ಪ್ರತ್ಯಕ್ಷದಲ್ಲಿ ಈ ಫಲಕಕ್ಕಾಗಿ ಆಗಸ್ಟ್‌ ೧೮ರವ ವರೆಗೆ ಮಹಾನಗರಪಾಲಿಕೆಯಿಂದ ಕಾನೂನುಬದ್ಧವಾಗಿ ಅನುಮತಿಯನ್ನು ಪಡೆಯಲಾಗಿದೆ. (ಧೂರ್ತ ಕಾಂಗ್ರೆಸ್‌ ! – ಸಂಪಾದಕರು)

 

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿಗೆ ಇಲ್ಲಿ ‘ಜಯ ಪಾಕಿಸ್ತಾನ’ ಅಥವಾ ‘ಜಯ ಇಸ್ಲಾಮಿಸ್ತಾನ’ ಎಂದು ಬರೆಯಲಾಗಿದ್ದರೆ, ಅದು ತಪ್ಪು ಎಂದು ಅನಿಸುತ್ತಿರಲಿಲ್ಲ ಎಂಬುದನ್ನು ಗಮನದಲ್ಲಿಡಿ !