ಗುಜರಾಜ ಗಲಭೆಯ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ೧೧ ಜನರ ಬಿಡುಗಡೆ

ಗುಜರಾತ ಸರಕಾರವು ಕ್ಷಮಾದಾನ ನೀಡಿ ಬಿಡುಗಡೆ ಮಾಡಿತು

ಗೋಧ್ರಾ (ಗುಜರಾತ) – ಇಲ್ಲಿ ೨೦೦೨ ರ ಗಲಭೆಯ ಸಮಯದಲ್ಲಿ ಬಿಲ್ಕಿಸ್ ಬಾನೋ ಸಾಮೂಹಿಕ ಬಲಾತ್ಕಾರ ಮತ್ತು ಆ ಕುಟುಂಬದ ೭ ಜನರ ಹತ್ಯೆ, ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ೧೧ ಜನರ ಬಿಡುಗಡೆ ಮಾಡಲಾಯಿತು. ಗುಜರಾತಿನ ಭಾಜಪ ಸರಕಾರವು ಅವರ ‘ಕ್ಷಮಾ ನೀತಿ’ ಅಡಿಯಲ್ಲಿ ಈ ೧೧ ಜನರ ಬಿಡುಗಡೆಗೆ ಒಪ್ಪಿಗೆ ನೀಡಿತು.

ಜನೇವರಿ ೨೧, ೨೦೦೮ ರಂದು ಮುಂಬಯಿಯ ಸಿಬಿಐಯ ವಿಶೇಷ ನ್ಯಾಯಾಲಯವು ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇಲ್ಲಿಯವರೆಗೆ ಈ ದೋಷಿಗಳು ೧೫ ವರ್ಷಗಳ ಕಾಲ ಶಿಕ್ಷೆಯನ್ನು ಅನುಭವಿಸಿದ್ದಾರೆ. ಇದರಲ್ಲಿ ಒಬ್ಬ ಆರೋಪಿಯು ಸರ್ವೋಚ್ಚ ನ್ಯಾಯಾಲಯದಲ್ಲಿ ಅವರೆಲ್ಲರ ಬಿಡುಗಡೆಗಾಗಿ ಅರ್ಜಿ ದಾಖಲಿಸಿದ್ದನು. ಈ ಬಗ್ಗೆ ನ್ಯಾಯಾಲಯವು ಗುಜರಾತ ಸರಕಾರಕ್ಕೆ ಅವರ ಶಿಕ್ಷೆಯನ್ನು ಕ್ಷಮಿಸುವ ವಿಷಯದಲ್ಲಿ ವಿಚಾರ ಮಾಡುವಂತೆ ಆದೇಶಿಸಿತ್ತು. ತದನಂತರ ಸರಕಾರವು ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯು ಈ ದೋಷಿಗಳನ್ನು ಕ್ಷಮಿಸುವಂತೆ ವರದಿಯನ್ನು ಮಂಡಿಸಿತ್ತು. ಅದರ ಆಧಾರದಲ್ಲಿ ಸರಕಾರವು ಮೇಲಿನ ನಿರ್ಧಾರವನ್ನು ತೆಗೆದುಕೊಂಡಿದೆ.