ಇಂಡೋ-ಟಿಬೇಟ ಗಡಿಭದ್ರತಾ ಪೊಲೀಸರ ಬಸ್ಸು ಕಂದಕದಲ್ಲಿ ಉರುಳಿ ೭ ಸೈನಿಕರ ಸಾವು

ಪಹಲಗಾಮ (ಜಮ್ಮೂ-ಕಾಶ್ಮೀರ) – ಇಲ್ಲಿ ಇಂಡೋ-ಟಿಬೇಟ ಗಡಿಭದ್ರತಾ ಪೊಲೀಸರನ್ನು ಕರೆದುಕೊಂಡು ಹೋಗುತ್ತಿದ್ದ ಒಂದು ಬಸ್ಸು ಬ್ರೇಕ್ ವಿಫಲವಾಗಿದ್ದರಿಂದ ೧೦೦ ಅಡಿ ಕಂದಕದಲ್ಲಿ ಉರುಳಿ ಜರುಗಿದ ಅಪಘಾತದಲ್ಲಿ ೭ ಸೈನಿಕರು ಮರಣ ಹೊಂದಿದರೇ ಇನ್ನುಳಿದ ಸೈನಿಕರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಸ್ಸಿನಲ್ಲಿ ಒಟ್ಟು ೩೭ ಸೈನಿಕರು ಮತ್ತು ೨ ಪೊಲೀಸರು ಇದ್ದರು. ಅಮರನಾಥ ಯಾತ್ರೆಯ ಪ್ರಾರಂಭ ಕೇಂದ್ರವಾಗಿರುವ ಚಂದನವಾಡಿಯಿಂದ ಸೈನಿಕರನ್ನು ಕರೆದುಕೊಂಡು ಈ ಬಸ್ಸು ಮರಳಿ ಬರುತ್ತಿತ್ತು. ಆ ಸಂದರ್ಭದಲ್ಲಿ ಈ ಘಟನೆ ಜರುಗಿತು.