ಶಿವಮೊಗ್ಗದಲ್ಲಿ ಸ್ವಾತಂತ್ರ್ಯವೀರ ಸಾವರಕರ ಅವರ ಫಲಕ ತೆಗೆದು ಟಿಪ್ಪು ಸುಲ್ತಾನನ ಫಲಕವನ್ನು ಹಾಕಿದ್ದರಿಂದ ಉದ್ಭವಿಸಿದ ವಿವಾದ

  • ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿ

  • ಇಬ್ಬರು ಹಿಂದೂ ಯುವಕರ ಮೇಲೆ ಮತಾಂಧರಿಂದ ಚಾಕುವಿನಿಂದ ಮಾರಣಾಂತಿಕ ಹಲ್ಲೆ

ಶಿವಮೊಗ್ಗ – ಸ್ವಾತಂತ್ರ್ಯ ದಿನಾಚರಣೆಯಂದು ಅಂದರೆ ಆಗಸ್ಟ್ ೧೫ ರಂದು ಇಲ್ಲಿ ಹಾಕಿದ್ದ ಸ್ವಾತಂತ್ರ್ಯವೀರ ಸಾವರಕರ ಅವರ ಫಲಕವನ್ನು ತೆಗೆದುಹಾಕುವ ಮತ್ತು ಟಿಪ್ಪು ಸುಲ್ತಾನ್‌ನ ಫಲಕವನ್ನು ಹಾಕಿದ್ದರಿಂದ ಉದ್ಭವಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಇಬ್ಬರು ಹಿಂದೂ ಯುವಕರ ಮೇಲೆ ಮತಾಂಧರು ಚಾಕುವಿನಿಂದ ಹಲ್ಲೆ ನಡೆಸಿ ಮತಾಂಧರು ಪರಾರಿಯಾಗಿದ್ದಾರೆ. ಇದರಲ್ಲಿ ಪ್ರೇಮ ಸಿಂಗ್ (೨೦ ವರ್ಷ) ಮತ್ತು ಪ್ರವೀಣ (೨೭ ವರ್ಷ ಇವರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯ ನಂತರ ಪೊಲೀಸರು ನಗರದಲ್ಲಿ ಕರ್ಫ್ಯೂ ಹೇರಿದ್ದಾರೆ. ಈ ಪ್ರಕರಣದಲ್ಲಿ ೪ ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಒಬ್ಬನನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಆತನು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದುದರಿಂದ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಇದರಿಂದ ಆತ ಗಾಯಗೊಂಡಿದ್ದಾನೆ. ಬಂಧಿತರಲ್ಲಿ ಇಬ್ಬರನ್ನು ನದೀಮ್ (೨೫ ವರ್ಷ) ಮತ್ತು ಅಬ್ದುಲ್ ರಹಮಾನ್ (೨೫ ವರ್ಷ) ಎಂದು ಗುರುತಿಸಲಾಗಿದೆ. ಘಟನೆಯ ನಂತರ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಬಗ್ಗೆ ನಿಗಾ ವಹಿಸುವಂತೆ ಆದೇಶ ನೀಡಿದ್ದಾರೆ.

೧. ನಗರದ ಅಮೀರ್ ಅಹಮದ್ ವೃತ್ತದಲ್ಲಿ ಹಿಂದುತ್ವವಾದಿ ಸಂಘಟನೆಗಳು ಸ್ವಾತಂತ್ರ್ಯವೀರ ಸಾವರಕರರ ಫಲಕವನ್ನು ಹಾಕಿದ್ದರು. ಸ್ವಲ್ಪ ಸಮಯದ ನಂತರ ಕೆಲವು ಮತಾಂಧ ಯುವಕರು ಟಿಪ್ಪು ಸುಲ್ತಾನನ ಫಲಕದೊಂದಿಗೆ ಅಲ್ಲಿಗೆ ತಲುಪಿದರು. ಈ ಯುವಕರು ಸಾವರಕರರ ಫಲಕ ತೆಗೆಯಲು ಯತ್ನಿಸಿದರು. ಇದರಿಂದ ಹಿಂದೂಗಳು ಮತ್ತು ಮತಾಂಧ ಯುವಕರ ನಡುವೆ ತೀವ್ರ ವಾಗ್ವಾದವಾಯಿತು. ಸ್ಥಳದಲ್ಲಿದ್ದ ಪೊಲೀಸರು ಮೊದಲು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು, ನಂತರ ವೃತ್ತಗಳಲ್ಲಿ ಹಾಕಲಾಗಿದ್ದ ಸಾವರಕರರ ಫಲಕಗಳನ್ನು ತೆಗೆದುಹಾಕಿದರು.

೨. ಸಾವರಕರರ ಫಲಕ ತೆರವು ವಿರೋಧಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಉದ್ವಿಗ್ನತೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಪೊಲೀಸರು ತಕ್ಷಣವೇ ಶಿವಮೊಗ್ಗದಲ್ಲಿ ಸೆಕ್ಷನ್ ೧೪೪ (ಗುಂಪು ನಿಷೇಧ) ಜಾರಿಗೊಳಿಸಿದರು ಮತ್ತು ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಅನ್ನು ಮಾಡಿದರು. ಇದರೊಂದಿಗೆ ಮಂಗಳೂರಿನ ಸುರತ್ಕಲ್ ಕ್ರಾಸ್‌ರೋಡ್‌ಗೆ ಸಾವರಕರರ ಹೆಸರನ್ನು ನೀಡಿದ ಫಲಕಗಳನ್ನೂ ಪೊಲೀಸರು ತೆಗೆದಿದ್ದಾರೆ. ನಂತರ ಸ್ವಲ್ಪ ದೂರದಲ್ಲಿ ಮತಾಂಧರು ಪ್ರೇಮ ಸಿಂಗ್ ಮತ್ತು ಪ್ರವೀಣ ಮೇಲೆ ಹಲ್ಲೆ ನಡೆಸಿದರು.

ಹಿಂದೂ ಎಚ್ಚೆತ್ತುಕೊಂಡರೆ ಇಂತಹ ಘಟನೆ ಮರುಕಳಿಸಲಾರದು ! – ಭಾಜಪದ ಸ್ಥಳಿಯ ಶಾಸಕ ಈಶ್ವರಪ್ಪ

‘ಅಂಗಡಿ ಮುಚ್ಚುತ್ತಿದ್ದಾಗ ಒಬ್ಬ ಹಿಂದೂ ಯುವಕನನ್ನು ಆ ಜನರು (ಮತಾಂಧರು) ಚಾಕುವಿನಿಂದ ಹಲ್ಲೆ ಮಾಡಿದರು. ಇದರಿಂದ ಶಿವಮೊಗ್ಗ ನಾಗರಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಮ್ಮ ಸಮುದಾಯದ ಹಿರಿಯರಲ್ಲಿ ಮನವಿ ಮಾಡುವುದೇನೆಂದರೆ ನಿಮ್ಮ ಯುವಕರು ದೇಶ ವಿರೋಧಿ ಕೆಲಸ ಮಾಡುತ್ತಿದ್ದಾರೆ. ನೀವು ಅದರ ಬಗ್ಗೆ ಮಾತನಾಡಬೇಕು ಇಲ್ಲದಿದ್ದರೆ ಹಿಂದೂ ಸಮಾಜ ಮತ್ತು ಪೊಲೀಸ ಇಲಾಖೆಗೆ ಅವರಿಗೆ ಹೇಗೆ ಪಾಠ ಕಲಿಸಬೇಕೆಂದು ತಿಳಿದಿದೆ ಮತ್ತು ನಾವು ಅದನ್ನು ಸಂದರ್ಭೋಚಿತವಾಗಿ ಕಲಿಸುತ್ತೇವೆ. ಹಿಂದೂ ಸಮಾಜ ಎಚ್ಚೆತ್ತುಕೊಂಡರೆ ದೇಶವಿರೋಧಿ ಚಟುವಟಿಕೆಗಳು ನಡೆಯುವುದಿಲ್ಲ.

(ಸೌಜನ್ಯ : Tv9 Kannada)

ಎಲ್ಲರೂ ಶಾಂತಿಯಿಂದ ಇರಬೇಕು. ಪ್ರಧಾನಿ ನರೇಂದ್ರ ಮೋದಿಯವರು, ಹಿಂದೂಗಳು ಮತ್ತು ಮುಸ್ಲಿಮರು ಶಾಂತಿಯಿಂದ ಬದುಕಬೇಕು ಎಂದು ಹೇಳಿದ್ದಾರೆ ಮತ್ತು ನಾವು ಅವರನ್ನು ಅನುಸರಿಸುತ್ತಿದ್ದೇವೆ; ಆದರೆ ಗೂಂಡಾಗಿರಿ ಯಾರು ನಡೆಸುತ್ತಿದ್ದಾರೆ ? ಅದರ ಬಗ್ಗೆ ಏನು ಮಾಡಬೇಕಿದೆಯೋ ಪೊಲೀಸರು ಮಾಡುತ್ತಾರೆ,’ ಎಂದು ಶಿವಮೊಗ್ಗದ ಭಾಜಪ ಶಾಸಕ ಮತ್ತು ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯಿಸಿದರು.

ಸಂಪಾದಕೀಯ ನಿಲುವು

ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಕಳೆದ ೨ ದಿನಗಳಿಂದ ಇಲ್ಲಿ ಸ್ವಾತಂತ್ರ್ಯವೀರ ಸಾವರಕರ ಮತ್ತು ಟಿಪ್ಪು ಸುಲ್ತಾನ್ ಅವರ ಫಲಕಗಳ ವಿವಾದ ನಡೆಯುತ್ತಿದ್ದು, ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಹಾಗೆ ಮಾಡಿದ್ದರೆ ಹಿಂದೂಗಳ ಮೇಲೆ ಹಲ್ಲೆ ನಡೆಯುತ್ತಿರಲಿಲ್ಲ. ರಾಜ್ಯದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಬೇಜವಾಬ್ದಾರಿತನ ನಡೆಯಬಾರದು ಎಂಬುದು ಹಿಂದೂಗಳಿಗೆ ಅನಿಸುತ್ತದೆ !

ಕರ್ನಾಟಕದಲ್ಲಿ, ಟಿಪ್ಪು ಸುಲ್ತಾನನ ವಂಶಸ್ಥರಿಗೆ ಕಡಿವಾಣ ಹಾಕಲು ಸರಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು !