ಸರಕಾರಿ ಕಚೇರಿಗಳಲ್ಲಿ ದೂರವಾಣಿ ಮತ್ತು ಸಂಚಾರವಾಣಿಯ ಮೂಲಕ ‘ಹಲೋ’ ಬದಲು ‘ವಂದೇ ಮಾತರಂ’ ಎಂದು ಹೇಳಲು ರಝಾ ಅಕಾಡೆಮಿಯ ವಿರೋಧ !

ಸಂಸ್ಕೃತಿ ಸಚಿವ ಸುಧೀರ ಮುನಗಂಟಿವಾರ

ಮುಂಬಯಿ – ನೂತನವಾಗಿ ಆಯ್ಕೆಯಾಗಿರುವ ಸಂಸ್ಕೃತಿ ಸಚಿವ ಸುಧೀರ ಮುನಗಂಟಿವಾರ ಅವರು, ಸರಕಾರಿ ಕಚೇರಿಗಳಲ್ಲಿ ದೂರವಾಣಿ ಮತ್ತು ಸಂಚಾರವಾಣಿಗಳಲ್ಲಿ ‘ಹಲೋ’ ಬದಲು ‘ವಂದೇ ಮಾತರಂ’ ಹೇಳುವಂತೆ ಆದೇಶ ನೀಡಿದ್ದಾರೆ. ಇದಕ್ಕೆ ಮುಸ್ಲಿಂ ಸಂಘಟನೆ ‘ರಝಾ ಅಕಾಡೆಮಿ’ ವಿರೋಧ ವ್ಯಕ್ತಪಡಿಸಿದೆ. ಆಗಸ್ಟ್ ೧೪ ರಂದು ಮಹಾರಾಷ್ಟ್ರದ ಸರಕಾರವು ಸಂಪುಟದಲ್ಲಿ ಖಾತೆಗಳ ಹಂಚಿಕೆಯನ್ನು ಘೋಷಿಸಿತು ಮತ್ತು ಭಾಜಪ ನಾಯಕ ಸುಧೀರ ಮುನಗಂಟಿವಾರ ಅವರಿಗೆ ಸಾಂಸ್ಕೃತಿಕ ಖಾತೆಯನ್ನು ಹಸ್ತಾಂತರಿಸಿದಾಗ ಅವರು ಈ ಮೇಲಿನ ಆದೇಶವನ್ನು ಘೋಷಿಸಿದ್ದರು.

ಸಂಪಾದಕೀಯ ನಿಲುವು

  • ಪ್ರತಿಯೊಂದು ಕೃತಿಯನ್ನು ಮತಾಂಧ ದೃಷ್ಟಿಕೋನದಿಂದ ನೋಡುವ ರಝಾ ಅಕಾಡೆಮಿಯ ಮತಾಂಧತೆಯನ್ನು ತಿಳಿಯಿರಿ !
  • ಆಜಾದ್ ಮೈದಾನದ ಗಲಭೆಗೆ ಕಾರಣರಾದ ಮತ್ತು ಇದೇ ಗಲಭೆಯಲ್ಲಿ ಅಮರಜ್ಯೋತಿಯನ್ನು ಧ್ವಂಸ ಮಾಡಿದ ರಝಾ ಅಕಾಡೆಮಿ ‘ವಂದೇ ಮಾತರಂ’ ಹೇಳಲು ನಿರಾಕರಿಸುವುದರಲ್ಲಿ ಆಶ್ಚರ್ಯವೇನು ?