‘ಹರ ಘರ ತಿರಂಗಾ’ ಅಭಿಯಾನಕ್ಕೆ ದೇಶದಾದ್ಯಂತ ಅಪಾರ ಪ್ರತಿಕ್ರಿಯೆ !

ನವದೆಹಲಿ – ಭಾರತದ ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಕೇಂದ್ರ ಸರಕಾರದಿಂದ ಆಗಸ್ಟ೧೩ ರಿಂದ ೧೫ ನ ಸಮಯದಲ್ಲಿ ‘ಹರ ಘರ ತಿರಂಗಾ’ ಎಂಬ ಅಭಿಯಾನವನ್ನು ಆರಂಭಿಸಲಾಯಿತು. ಈ ಅಭಿಯಾನದ ಪ್ರಕಾರ ದೇಶದಲ್ಲಿನ ಪ್ರತಿಯೊಂದು ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಕರೆ ನೀಡಲಾಯಿತು. ಇದಕ್ಕೆ ದೇಶದಾದ್ಯಂತ ಇರುವ ಕೋಟ್ಯಂತರ ನಾಗರೀಕರಿಂದ ಅಪಾರ ಪ್ರತಿಕ್ರಿಯೆ ಲಭಿಸಿದೆ. ದೇಶದಲ್ಲಿನ ನಗರಗಳು ಹಾಗೂ ಊರುಗಳಲ್ಲಿ ಎಲ್ಲಡೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವುದು ಕಂಡುಬರುತ್ತಿದೆ. ಅನೇಕ ಕಡೆಗಳಲ್ಲಿ ಮೆರವಣಿಗೆಗಳನ್ನು ನಡೆಸಲಾಗುತ್ತಿದೆ. ಕೇಂದ್ರೀತ ರಕ್ಷಣಾ ಮಂತ್ರಿ ರಾಜನಾಥಸಿಂಹರವರು ಇಂತಹದೇ ಒಂದು ಮೆರವಣಿಗೆಯಲ್ಲಿ ಸಹಭಾಗಿಯಾಗಿದ್ದರು. ಭಾಜಪದ ಅಧ್ಯಕ್ಷರಾದ ಜಗತಪ್ರಕಾಶ ನಡ್ಡಾರವರು ಮೇರಠನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ವಿವಿಧ ರಾಜ್ಯಗಳಲ್ಲಿ ಅಲ್ಲಿನ ಮಂತ್ರಿಗಳು, ಸರಕಾರಿ ಅಧಿಕಾರಿಗಳು, ಸಾಮಾನ್ಯ ನಾಗರೀಕರು ಈ ನಿಮಿತ್ತವಾಗಿ ಆಯೋಜಿಸಲಾದ ಕಾರ್ಯಕ್ರಮಗಳಲ್ಲಿ ಉತ್ಸಾಹದಿಂದ ಸಹಭಾಗಿಯಾಗುತ್ತಿದ್ದಾರೆ.

ವಿಶ್ವದಾಖಲೆ ಮಾಡಿರುವ ಚಂಡೀಗಡ ವಿದ್ಯಾಪೀಠ !

ಚಂಡೀಗಡ ವಿದ್ಯಾಪೀಠವು ಹಾರಿಸಿರುವ ರಾಷ್ಟ್ರಧ್ವಜವು ಆಕಾರದಲ್ಲಿ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಅಂದರೆ ೫ ಸಾವಿರದ ೮೮೫ ಜನರ ಮಾನವ ಸರಪಳಿಯನ್ನು ಸಿದ್ಧಪಡಿಸಿ ವಿಶ್ವದಾಖಲೆಯನ್ನು ಮಾಡಿದೆ. ಈ ಸಮಯದಲ್ಲಿ ಚಂಡೀಗಡದ ಸರಕಾರ ಹಾಗೂ ಪಂಜಾಬಿನ ರಾಜ್ಯಪಾಲರಾದ ಬನವಾರೀಲಾಲ ಪುರೋಹಿತ, ಕೇಂದ್ರೀಯ ರಾಜ್ಯಮಂತ್ರಿ ಮೀನಾಕ್ಷೀ ಲೇಖಿ, ಚಂಡೀಗಡ ವಿದ್ಯಾಪೀಠದ ಕುಲಗುರುಗಳಾದ ಸತನಾಮ ಸಿಂಹ ಸಂಧೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.