ಕಾನಪೂರದಿಂದ ಜೈಶ-ಎ-ಮಹಂಮದನ ಭಯೋತ್ಪಾದಕನ ಬಂಧನ

ಕಾನಪೂರ (ಉತ್ತರಪ್ರದೇಶ) – ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ಜೈಶ-ಎ-ಮಹಂಮದ ಎಂಬ ಜಿಹಾದಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕನಾದ ಹಬೀಬುಲ ಇಸ್ಲಾಮನನ್ನು ಇಲ್ಲಿಂದ ಬಂಧಿಸಿದೆ. ಕೆಲವು ದಿನಗಳ ಹಿಂದೆಯೇ ನದೀಮ ಎಂಬ ಹೆಸರಿನ ಭಯೋತ್ಪಾದಕನನ್ನು ಬಂಧಿಸಲಾಗಿತ್ತು. ಅವನು ನೂಪುರ ಶರ್ಮಾರವರ ಹತ್ಯೆಯ ಸಂಚನ್ನು ರೂಪಿಸಿದ್ದನು. ಅವನ ವಿಚಾರಣೆಯ ಸಮಯದಲ್ಲಿ ಹಬೀಬುಲನ ಮಾಹಿತಿ ದೊರೆತಾಗ ಅವನನ್ನು ಬಂಧಿಸಲಾಯಿತು. ಹಬೀಬುಲನು ವಿವಿಧ ಸಾಮಾಜಿಕ ಮಾಧ್ಯಮಗಳಿಂದ ಆಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿನ ಜಿಹಾದಿ ಭಯೋತ್ಪಾದಕರೊಂದಿಗೆ ಸಂಪರ್ಕದಲ್ಲಿದ್ದನು.

ಸಂಪಾದಕೀಯ ನಿಲುವು

ಜಿಹಾದಿ ಭಯೋತ್ಪಾಕರು ತುಂಬಿರುವ ಭಾರತ ! ಇಂತಹವರಿಗೆ ಗಲ್ಲು ಶಿಕ್ಷೆ ನೀಡಬೇಕು!