ರಾಜಸ್ಥಾನದಲ್ಲಿ ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಮಾಡುತ್ತಿದ್ದ ಇಬ್ಬರು ಹಿಂದೂಗಳ ಬಂಧನ !

ಜಯಪುರ (ರಾಜಸ್ಥಾನ) – ಭಾರತೀಯ ಸೈನ್ಯದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಿ ಗುಪ್ತಚರ ಸಂಸ್ಥೆಯ ಅಧಿಕಾರಿಗಳಿಗೆ ನೀಡುತ್ತಿದ್ದ ಇಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಕುಲದೀಪ ಸಿಂಹ ಶೇಖಾವತ (೨೪ ವರ್ಷ) ಹಾಗೂ ನಾರಾಯಣ ಲಾಲ ಗಡಾರಿ (೨೭ ವರ್ಷ) ಇವು ಅವರ ಹೆಸರುಗಳಾಗಿವೆ. ಈ ಇಬ್ಬರೂ ಭಾರತೀಯ ಸೈನಿಕರೊಂದಿಗೆ ಗೆಳೆತನವನ್ನು ಬೆಳೆಸಿ ಅವರಿಂದ ಗೌಪ್ಯ ಮಾಹಿತಿಯನ್ನು ಪಡೆಯುತ್ತಿದ್ದರು. ಈ ಮಾಹಿತಿಯನ್ನು ಕಳುಹಿಸಿದ ನಂತರ ಅವರಿಗೆ ಆನಲೈನ ಮೂಲಕ ಹಣ ಕಳುಹಿಸಲಾಗುತ್ತಿತ್ತು. ಇವರಿಬ್ಬರೂ ಭೀಲಾವಾಡಾ ಮತ್ತು ಪಾಲಿಯ ನಿವಾಸಿಗಳಾಗಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರ ಮೇಲೆ ನ್ಯಾಯಾಲಯದಲ್ಲಿ ಶೀಘ್ರಗತಿಯಲ್ಲಿ ಖಟ್ಲೆಯನ್ನು ನಡೆಸಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾವು ಪ್ರಯತ್ನಿಸಬೇಕಿದೆ !