ಮುಜಫ್ಫರಪೂರ (ಬಿಹಾರ) ಇಲ್ಲಿಯ ಗ್ರಾಮದಲ್ಲಿ ಅಶೋಕ ಚಕ್ರದ ಬದಲು ಚಂದ್ರ ಮತ್ತು ನಕ್ಷತ್ರಗಳು ಇರುವ ರಾಷ್ಟ್ರಧ್ವಜ ಹಾರಿಸಿದರು !

  • ಪೊಲೀಸರಿಂದ ದೂರು ದಾಖಲು

  • ಅಪರಾಧಿಯ ಹೆಸರು ಹೇಳಲು ನಿರಾಕರಣೆ

ಮುಜಫ್ಫರಪೂರ (ಬಿಹಾರ) – ಇಲ್ಲಿಯ ಔರಾಯಿ ಗ್ರಾಮದಲ್ಲಿ ಹಾರಿಸಲಾದ ರಾಷ್ಟ್ರಧ್ವಜದಲ್ಲಿ ಅಶೋಕ ಚಕ್ರದ ಬದಲು ಚಂದ್ರ ಮತ್ತು ನಕ್ಷತ್ರಗಳು ತೋರಿಸಲಾಗಿದೆ. ಜೊತೆಗೆ ಈ ಧ್ವಜದ ಪಕ್ಕದಲ್ಲಿ ಒಂದು ಹಸಿರು ಬಣ್ಣದ ಧ್ವಜ ಕೂಡ ಹಾರಿಸಲಾಗಿದೆ. ಪೊಲೀಸರಿಗೆ ಮಾಹಿತಿ ಸಿಕ್ಕಿದ ನಂತರ ಅವರು ರಾಷ್ಟ್ರಧ್ವಜ ಕೆಳಗಿಳಿಸಿ, ದೂರು ದಾಖಲಿಸಿದ್ದಾರೆ. ಪೊಲೀಸರು ಅಪರಾಧಿಯ ಹೆಸರು ಘೋಷಿಸಲು ನಿರಾಕರಿಸಿದ್ದಾರೆ, ಹಾಗೂ ಪ್ರಸಾರ ಮಾಧ್ಯಮಗಳಿಗೂ ಅದನ್ನು ‘ಘೋಷಿಸಬಾರದೆಂದು’ ಹೇಳಿದ್ದಾರೆ. ಈ ಘಟನೆಯ ಹಿಂದೆ ಮಾಜಿ ಸರಪಂಚ ಮಹಮ್ಮದ್ ಇಸ್ರಾಯಲ ಇರುವುದಾಗಿ ಭಾಜಪ ಶಾಸಕ ಮತ್ತು ಮಾಜಿ ಸಚಿವ ರಾಮಸೂರತ ರಾಯ ಇವರು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಈ ರೀತಿಯ ಧ್ವಜ ಯಾರು ಹಾರಿಸಿದರು, ಇದು ತಿಳಿಯದೆ ಇರುವಷ್ಟು ಹಿಂದೂಗಳು ದಡ್ಡರಲ್ಲ !