ವರ್ಗಾವಣೆಗಾಗಿ ಆಂದೋಲನ ಮಾಡುತ್ತಿರುವ ಕಾಶ್ಮೀರಿ ಹಿಂದೂ ನೌಕರರ ವೇತನ ಸ್ಥಗಿತ !

ಜಮ್ಮುವಿನಲ್ಲಿ 90 ದಿನಗಳಿಂದ ಮುಂದುವರೆದಿರುವ ಆಂದೋಲನಕ್ಕೆ ಪ್ರತಿಸ್ಪಂದಿಸದ ಸರಕಾರ!

ಜಮ್ಮೂ – `ಪಿ.ಎಂ. ಪ್ಯಾಕೇಜ’ ಅಡಿಯಲ್ಲಿ ನೌಕರಿ ಪಡೆದಿರುವ ಕಾಶ್ಮೀರಿ ಹಿಂದೂಗಳ ಧರಣಿ ಆಂದೋಲನ ಮುಂದುವರಿದು ಈಗ 3 ತಿಂಗಳು ಆಗಿವೆ. ಎಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಜಿಹಾದಿಗಳು ಅನೇಕ ಕಾಶ್ಮೀರಿ ಹಿಂದೂಗಳನ್ನು ಹತ್ಯೆ ಮಾಡಿದ ಬಳಿಕ 5 ಸಾವಿರಕ್ಕಿಂತ ಅಧಿಕ ಹಿಂದೂ ನೌಕರರು ತಮ್ಮ ಕಾಶ್ಮೀರಿ ಕಣಿವೆಯ ಹೊರಗೆ ವರ್ಗಾಯಿಸುವಂತೆ ಕೋರಿ ಜಮ್ಮುವಿಗೆ ಬಂದು ಧರಣಿ ಆಂದೋಲನ ಮಾಡುತ್ತಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ 5 ಸಾವಿರ ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ `ಪಿ.ಎಂ. ಪ್ಯಾಕೇಜ’ ಅಡಿಯಲ್ಲಿ ನೌಕರಿಯನ್ನು ನೀಡಲಾಗಿತ್ತು. ಇದರಲ್ಲಿ ಬಹುತೇಕ ನೌಕರರು ಹಣಕಾಸು ಸಂಸ್ಥೆ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಯೋಜನಾ ಇಲಾಖೆಯಲ್ಲಿದ್ದಾರೆ.

1. ಕೆಲವು ನೌಕರರನ್ನು ಕಾಶ್ಮೀರದಲ್ಲಿಯೇ ವರ್ಗಾವಣೆಗೊಳಿಸಲಾಗಿದೆ. ಈ ನೌಕರರು ತಮ್ಮ ವರ್ಗಾವಣೆಗೊಂಡ ಸ್ಥಳಕ್ಕೆ ಹಾಜರಾಗಿರುವುದಿಲ್ಲ. ಇದರಿಂದ ಅವರಿಗೆ ಈಗ ವೇತನ ದೊರೆಯುತ್ತಿಲ್ಲ.

2. 13 ಮೇರಂದು ಸರಕಾರಿ ನೌಕರ ರಾಹುಲ ಭಟ್ ಹತ್ಯೆಯ ಬಳಿಕ ಬಹುತೇಕ ಹಿಂದೂ ನೌಕರರು ಕಾಶ್ಮೀರ ಕಣಿವೆಯನ್ನು ಬಿಟ್ಟು ಜಮ್ಮುವಿಗೆ ಬಂದಿದ್ದಾರೆ.

3. ಹಿಂದೂ ನೌಕರರು `ಜಮ್ಮುವಿನಲ್ಲಿ ಪುನರ್ವಸತಿ ಆಯುಕ್ತರ ಕಚೇರಿ’ಯ ಹೊರಗೆ ಧರಣಿ ಆಂದೋಲನ ಮಾಡುತ್ತಿದ್ದಾರೆ. 10 ಅಗಸ್ಟರಂದು ಆಂದೋಲನದಲ್ಲಿ ಭಾಗಿಯಾಗಿರುವ ನೌಕರ ಯೋಗೇಶ ಪಂಡಿತರು, “ಹಿಂದೂಗಳ ಸರಣಿ ಹತ್ಯೆಯಿಂದ ಕಂಡು ಬರುವುದೇನೆಂದರೆ, ಇಲ್ಲಿ ಕಾಶ್ಮೀರಿ ಹಿಂದೂಗಳು ಸುರಕ್ಷಿತವಾಗಿಲ್ಲ. ಕಣಿವೆಯಲ್ಲಿ ಶೇ. 80 ರಷ್ಟು ಹಿಂದೂ ನೌಕರರು ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಮನೆಮಾಲೀಕರು ಬಾಡಿಗೆಗೆ ದೂರವಾಣಿ ಮಾಡುತ್ತಿದ್ದಾರೆ; ಆದರೆ ನಮಗೆ ಎರಡು ತಿಂಗಳಿನಿಂದ ವೇತನ ಸಿಗುತ್ತಿಲ್ಲ, ಇದು ವಸ್ತುಸ್ಥಿತಿಯಾಗಿದೆ’’ ಎಂದು ಹೇಳಿದರು.

ಕಾಶ್ಮೀರಿ ಹಿಂದೂಗಳು ಪ್ರಜಾಪ್ರಭುತ್ವದ ಹೊಸ `ಅಸ್ಪ್ರಶ್ಯರು’ ಆಗಿದ್ದಾರೆ!- ಡಾ. ಅಗ್ನಿಶೇಖರ

ಅಂದೋಲನ ನಡೆಸುತ್ತಿರುವ ನೌಕರರ ಮುಖಂಡ ಡಾ. ಅಗ್ನಿಶೇಖರ ಇವರು ಹೇಳುವುದೇನೆಂದರೆ, ನಮಗೆ `ಪಿ.ಎಂ.ಪ್ಯಾಕೇಜ’ ಇದು ಶಿಕ್ಷೆಯ `ಪ್ಯಾಕೇಜ’ ಆಗಿದೆ. ನಾವು ಪ್ರಜಾಪ್ರಭುತ್ವದ ಹೊಸ `ಅಸ್ಪ್ರಶ್ಯರು’ ಆಗಿದ್ದೇವೆ. ನಮ್ಮ ಜೀವ ಅಪಾಯದಲ್ಲಿದ್ದರೂ, 90 ದಿನಗಳಿಂದ ನಾವು ಧರಣಿ ಆಂದೋಲನ ಮಾಡುತ್ತಿದ್ದೇವೆ. ಯಾರೂ ನಮ್ಮನ್ನು ವಿಚಾರಿಸುತ್ತಿಲ್ಲ.

ಸಂಪಾದಕೀಯ ನಿಲುವು

ಸರಕಾರವು ಕಾಶ್ಮೀರದಲ್ಲಿರುವ ಜಿಹಾದಿ ಭಯೋತ್ಪಾದಕತೆಯನ್ನು ನಷ್ಟಗೊಳಿಸಿ ಹಿಂದೂಗಳಿಗೆ ಭಯಮುಕ್ತ ಮತ್ತು ಸುರಕ್ಷಿತ ವಾತಾವರಣವನ್ನು ನಿರ್ಮಾಣ ಮಾಡಿದ್ದಲ್ಲಿ ಹಿಂದೂಗಳೂ ಈ ರೀತಿ ಆಂದೋಲನ ಮಾಡಬೇಕಾಗುವುದಿಲ್ಲ. ಸರಕಾರವು ಅದಕ್ಕಾಗಿ ದಿಟ್ಟ ಹೆಜ್ಜೆಗಳನ್ನು ಇಡಬೇಕು.