ನೇಪಾಳ ಗಡಿಯಿಂದ ಭಾರತದೊಳಗೆ ನುಸಳುವ ೩ ಜನರ ಬಂಧನ

ಒಬ್ಬ ಪಾಕಿಸ್ತಾನಿ ಯುವತಿಯ ಸಮಾವೇಶ

ನವ ದೆಹಲಿ – ನೇಪಾಳ ಮೂಲಕ ಭಾರತದೊಳಗೆ ನುಸಳಲು ಪ್ರಯತ್ನ ಮಾಡುವ ಮೂರು ಜನರನ್ನು ಗಡಿ ಭದ್ರತಾ ಪಡೆಯ ಸೈನಿಕರು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಪಾಕಿಸ್ತಾನಿ ಯುವತಿಯ ಸಮಾವೇಶ ಇದ್ದು, ಇತರ ಇಬ್ಬರಲ್ಲಿ ಒಬ್ಬ ಭಾರತೀಯ ಮುಸಲ್ಮಾನ ಮತ್ತು ಒಬ್ಬ ನೇಪಾಳಿ ಯುವಕ ಇದ್ದಾನೆ. ಬಿಹಾರದ ಸಿಮಾಮಢಿ ಜಿಲ್ಲೆಯ ಪರೀಕ್ಷಣ ಕೇಂದ್ರದಲ್ಲಿ ಅವರನ್ನು ಬಂಧಿಸಲಾಗಿದೆ. ಯುವತಿಯ ಹೆಸರು ಖಾದಿಜಾ ನೂರ ಎಂದಾಗಿದೆ. ‘ಈ ಮೂವರು ಗೂಢಾಜಾರ ನಡೆಸಲು ಭಾರತದಲ್ಲಿ ನಸುಳುತ್ತಿದ್ದರು’, ಎಂಬ ಅನುಮಾನವಿದೆ.

ಜೂನು ತಿಂಗಳಲ್ಲಿ ಸೀತಾಮಢಿ ಗಡಿಯಿಂದ ಇಬ್ಬರು ಚೀನಾ ನಾಗರಿಕರನ್ನು ಬಂಧಿಸಲಾಗಿದೆ. ಅವರು ನೇಪಾಳ ಮೂಲಕ ಭಾರತಕ್ಕೆ ಬಂದಿದ್ದರು ನಂತರ ಅವರು ಮತ್ತೆ ನೇಪಾಳ ಮೂಲಕ ಚೀನಾಗೆ ಹೋಗುವಾಗ ಅವರನ್ನು ಬಂಧಿಸಲಾಗಿತ್ತು.