ಬಿಹಾರದಲ್ಲಿ ರಾಮ ಜಾನಕಿ ಮಂದಿರದ ಅರ್ಚಕರ ಶಿರಚ್ಛೇದ

ಬೇತಿಯಾ (ಬಿಹಾರ) – ರಾಜ್ಯದ ಪಶ್ಚಿಮ ಚಂಪರಣ ಜಿಲ್ಲೆಯ ಗೋಪಾಲಪೂರದಲ್ಲಿ ಬಕುಲಹರ ಮಠದಲ್ಲಿದ್ದ ರಾಮ ಜಾನಕಿ ಮಂದಿರದ ಅರ್ಚಕರ ಶಿರಚ್ಛೇದ ಮಾಡಿರುವ ಆಕ್ರೋಶಕಾರಿ ಘಟನೆ ಬಹಿರಂಗಗೊಂಡಿದೆ. ಆಗಸ್ಟ್ ೧೦ ರ ಬೆಳಿಗ್ಗೆ ರಾಮ ಜಾನಕಿ ಮಂದಿರದಲ್ಲಿ ಅವರ ಶರೀರವು ರಕ್ತದ ಮಡುವಿನಲ್ಲಿ ಕಂಡು ಬಂದಿತು, ಕೆಲವು ಅಂತರದಲ್ಲಿರುವ ಕಾಳಿ ಮಂದಿರದಲ್ಲಿ ಒಂದು ಜೋಳಿಗೆಯಲ್ಲಿ ರುಂಡ ಸಿಕ್ಕಿತು. ರುದಲ ಪ್ರಸಾದ ವರ್ಣವಾಲ ಅವರ ಹೆಸರಾಗಿದ್ದು, ಅವರು ೫೫ ವರ್ಷದವರಾಗಿದ್ದರು. ಕಳೆದ ೪೦ ವರ್ಷಗಳಿಂದ ಅವರು ಮಂದಿರದಲ್ಲಿ ಪೂಜೆ ಮಾಡುತ್ತಿದ್ದರು.

ಈ ಹತ್ಯಾಕಾಂಡದಿಂದ ಪರಿಸರದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಪ್ರಕರಣದ ತನಿಖೆಯನ್ನು ಮಾಡಲಾಗುತ್ತಿದೆ. ಪೊಲೀಸರು ನೀಡಿರುವ ಮಾಹಿತಿಗನುಸಾರ ಅರ್ಚಕರು ಮಲಗಿದ್ದಾಗ ಅವರ ಶಿರಚ್ಛೇದ ಮಾಡಲಾಯಿತು. ಈ ಹತ್ಯೆಯ ಹಿಂದೆ ನೈಜ ಕಾರಣ ಇದುವರೆಗೂ ಸ್ಪಷ್ಟವಾಗಿಲ್ಲ.

ಸಂಪಾದಕೀಯ ನಿಲುವು

ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಸಂತ-ಮಹಂತರು, ಅರ್ಚಕರ ಹತ್ಯೆಯಾಗುವುದು ಹಿಂದೂಗಳಿಗೆ ನಾಚಿಕೆಗೇಡು. ಈ ಸ್ಥಿತಿ ಬದಲಾಗಲು ಹಿಂದೂ ರಾಷ್ಟ್ರವೇ ಬೇಕು !

ಕ್ರಿಶ್ಚಿಯನ್ ಅಥವಾ ಮುಸಲ್ಮಾನರ ದೇಶಗಳಲ್ಲಿ ಅವರ ಧಾರ್ಮಿಕ ಅಧಿಕಾರಿ ವ್ಯಕ್ತಿಗಳ ಮೇಲೆ ಎಂದಾದರೂ ಆಕ್ರಮಣಗಳಾಗುತ್ತವೆಯೇ?