ಹಿಂದೂದ್ವೇಷದ ಕಾಮಾಲೆಯಾಗಿರುವ ಕಾಂಗ್ರೆಸ್ !
ಕೊಝಿಕೊಡ (ಕೇರಳ) – ಕೆಲವು ದಿನಗಳ ನಂತರ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಲಾದ ‘ಬಾಲಗೋಕುಲಮ್’ ಕಾರ್ಯಕ್ರಮದಲ್ಲಿ ಇಲ್ಲಿಯ ಮಹಾಪೌರ ಬಿನಾ ಫಿಲಿಪ ಇವರು ಉಪಸ್ಥಿತರಿದ್ದರಿಂದ ಕೇರಳದಲ್ಲಿ ವಿವಾದ ನಿರ್ಮಾಣವಾಗಿದೆ. ಈ ಬಗ್ಗೆ ವಿರೋಧ ಪಕ್ಷ ಕಾಂಗ್ರೇಸ್ ‘ಇದರಿಂದ ಆಠಳಿತಾರೂಢ ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ ಇವರಲ್ಲಿ ಯುತಿ ಆಗಿರುವುದು ತಿಳಿಯುತ್ತದೆ’, ಎಂದು ಟೀಕಿಸಿದ್ದಾರೆ.
#Kozhikode #mayor Beena Philip’s presence in RSS event sparks row.@MSKiranPrakash https://t.co/AwUFhlUnNk@NewIndianXpress
— TNIE Kerala (@xpresskerala) August 9, 2022
ಈ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ, “ಉತ್ತರ ಭಾರತದಲ್ಲಿ ಮಕ್ಕಳ ಕಾಳಜಿ ಎಷ್ಟು ಚೆನ್ನಾಗಿ ತೆಗೆದುಕೊಳ್ಳಲಾಗುತ್ತದೆಯೋ ಅಷ್ಟು ಒಳ್ಳೆಯ ರೀತಿ ಕಾಳಜಿ ಕೇರಳದಲ್ಲಿ ತೆಗೆದುಕೊಳ್ಳಲಾಗುವುದಿಲ್ಲ, ಕಡಿಮೆ ಮೃತ್ಯುದರ ಇರುವದರ ಅರ್ಥ ‘ಬಾಲ ಸಂಗೋಪನೆ ಒಳ್ಳೆಯ ರೀತಿ ನಡೆಯುತ್ತದೆ’, ಎಂದು ಆಗುವುದಿಲ್ಲ. ನಾವು ನಮ್ಮ ಮಕ್ಕಳ ಮೇಲೆ ಉತ್ತರ ಭಾರತೀಯರಂತೆ ಪ್ರೀತಿ ಮಾಡಲು ಕಲಿಯಬೇಕು. ಕೇರಳದ ಜನರು ಅವರ ವಿಷಯದಲ್ಲಿ ಸ್ವಾರ್ಥಿಯಾಗಿದ್ದಾರೆ ಮತ್ತು ಬೇರೆ ಮಕ್ಕಳ ಜೊತೆಗೆ ಬೇರೆ ರೀತಿಯಲ್ಲಿ ವರ್ತಿಸುತ್ತಾರೆ; ಆದರೆ ಉತ್ತರ ಭಾರತದಲ್ಲಿ ಪ್ರತಿಯೊಂದು ಮಗುವನ್ನು ಸಮಾನವಾಗಿ ಕಾಳಜಿ ತೆಗೆದುಕೊಳ್ಳಲಾಗುತ್ತದೆ.” ಎಂದು ಹೇಳಿದರು.
ಆಢಳಿತಾರೂಢ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ಮಹಾಪೌರರು ಈ ಹೇಳಿಕೆಯನ್ನು ಖಂಡಿಸಿದರು.