ಕೇರಳದಲ್ಲಿ ರಾಮಾಯಣ ಆಧಾರಿತ ಪ್ರಶ್ನಮಂಜುಷಾ ಸ್ಪರ್ಧೆಯಲ್ಲಿ ೨ ಮುಸಲ್ಮಾನ ಯುವಕರಿಗೆ ಯಶಸ್ಸು !

ವಿಜೇತ ಮುಸ್ಲಿಂ ಯುವಕರು

ಮಲಪ್ಪುರಂ (ಕೇರಳ) – ಇಲ್ಲಿ ರಾಮಾಯಣ ಆಧಾರಿತ ‘ಆನ್ಲೈನ್’ ಪ್ರಶ್ನಮಂಜುಷಾ ಸ್ಪರ್ಧೆಯಲ್ಲಿ ೨ ಮುಸಲ್ಮಾನ ಯುವಕರು ಗೆಲುವು ಸಾಧಿಸಿದ್ದರಿಂದ ಎಲ್ಲೆಡೆ ಅವರನ್ನು ಶ್ಲಾಘಿಸಲಾಗುತ್ತಿದೆ. ಒಟ್ಟು ೫ ವಿಜೇತರರ ಪೈಕಿ ಮಹಮ್ಮದ್ ಜಾಬೀರ್ ಪಿಕೆ ಮತ್ತು ಮಹಮ್ಮದ್ ಬಸೀಥ ಎಂ. ಈ ಸ್ಪರ್ಧಿಗಳು ಮುಸಲ್ಮಾನರಾಗಿದ್ದು ಅವರು ‘ಕೆ.ಕೆ.ಹೆಚ್.ಎಂ. ಇಸ್ಲಾಮಿಕ್ ಮತ್ತು ಕಲಾ ಮಹಾವಿದ್ಯಾಲಯ’, ವಲೆನಚೇರಿ ಇಲ್ಲಿ ಪದವಿಯೇತರ ಇಸ್ಲಾಮಿಕ ವ್ಯಾಸಂಗ ಮಾಡುತ್ತಿದ್ದಾರೆ. ಈ ಅಭ್ಯಾಸ ಕ್ರಮದಲ್ಲಿ ಹಿಂದೂ ಧರ್ಮ, ಬೌದ್ಧ, ಜೈನ ಮತ್ತು ಸಿಖ್ ಈ ಧರ್ಮದ ಅಭ್ಯಾಸವು ಇದೆ. ಈ ಸ್ಪರ್ಧೆಯನ್ನು ‘ಡಿಸಿ ಬುಕ್ಸ್’ ಈ ಪ್ರಸಿದ್ಧ ಪ್ರಕಾಶನ ಕಂಪನಿ ಆಯೋಜನೆ ಮಾಡಿತ್ತು.

ಜುಲೈ ಮತ್ತು ಆಗಸ್ಟ್ ಎರಡು ತಿಂಗಳ ಕಾಲಾವಧಿಯಲ್ಲಿ ಆಯೋಜಿಸಲಾಗಿರುವ ಈ ಸ್ಪರ್ಧೆಯಲ್ಲಿ ೧ ಸಾವಿರಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು.

‘ಮಹಾಕಾವ್ಯದ ಅಭ್ಯಾಸ ಮಾಡುವಾಗ, ಎಲ್ಲಾ ಧರ್ಮದ ಜನರು ಪರಸ್ಪರರ ಧಾರ್ಮಿಕ ಪುಸ್ತಕಗಳ ಅಭ್ಯಾಸ ಮಾಡಬೇಕು, ವಿವಿಧ ಧರ್ಮದ ಅಭ್ಯಾಸ ಮಾಡಿದರೆ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆಯನ್ನು ತಡೆಯಲು ಸಹಾಯವಾಗುತ್ತದೆ. ಎಲ್ಲಾ ಧರ್ಮ ನಮ್ಮ ನಮ್ಮಲ್ಲಿ ಪ್ರೇಮ ಮತ್ತು ಗೌರವಿಸುವುದು ಕಲಿಸುತ್ತದೆ’, ಎಂದು ಎರಡನೆಯ ವಿಜೇತ ಮಹಮ್ಮದ್ ಬಸೀಥ ಹೇಳಿದ್ದಾರೆ. ಮಹಮ್ಮದ್ ಬಸೀಥ ಎಂ. ಇವರಿಗೆ ರಾಮಾಯಣದ ಅನೇಕ ಅಧ್ಯಾಯಗಳು ಬಾಯಿಪಾಠ ಆಗಿವೆ.

ರಾಮಾಯಣ ಮತ್ತು ಮಹಾಭಾರತ ಈ ಗ್ರಂಥಗಳ ಅಭ್ಯಾಸ ಮಾಡುವುದು ಮತ್ತು ಅರ್ಥ ಮಾಡಿಕೊಳ್ಳುವುದು ಇದು ನಮ್ಮ ಜವಾಬ್ದಾರಿಯಾಗಿದೆ. ! – ಮಹಮ್ಮದ್ ಜಾಬಿರ್ ಪಿಕೆ

ಮಹಮ್ಮದ ಜಾಬಿರ ಪಿಕೆ ಇವರು, ಎಲ್ಲಾ ಭಾರತೀಯರು ರಾಮಾಯಣ ಮತ್ತು ಮಹಾಭಾರತ ಅಭ್ಯಾಸ ಮಾಡಬೇಕು. ರಾಮಾಯಣ ಮತ್ತು ಮಹಾಭಾರತ ಈ ಗ್ರಂಥ ನಮ್ಮ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸ ಇವುಗಳ ಒಂದು ಮಹತ್ವಪೂರ್ಣ ಭಾಗವಾಗಿದೆ. ಈ ಗ್ರಂಥ ಓದುವುದು ಮತ್ತು ಅರ್ಥಮಾಡಿಕೊಳ್ಳುವುದು ಇದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಎಷ್ಟು ಹಿಂದೂ ಯುವಕರು ಹಿಂದೂಗಳ ಧಾರ್ಮಿಕ ಗ್ರಂಥದ ಅಭ್ಯಾಸ ಮಾಡಿ ಇಂತಹ ಸ್ಪರ್ಧೆಯಲ್ಲಿ ಜಯ ಗಳಿಸುತ್ತಾರೆ ?