ಮಹಂತ ಬಜರಂಗ ಮುನಿಯವರಿಗೆ ಸಂಚಾರವಾಣಿಯಿಂದ ‘ಸರ ತನ್ ಸೆ ಜುದಾ’ ಬೆದರಿಕೆ !

ಉತ್ತರಪ್ರದೇಶದ ಸೀತಾಪೂರದಲ್ಲಿನ ಘಟನೆ

(ಸರ ತನ್ ಸೆ ಜುದಾ, ಅಂದರೆ ಶಿರಚ್ಛೇದ)

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಸೀತಾಪೂರ ಜಿಲ್ಲೆಯ ‘ಬಡಿ ಸಂಗತ’ ಸಂಪ್ರದಾಯದ ಮಹಂತ ಬಜರಂಗ ಮುನಿಯವರಿಗೆ ಸಂಚಾರವಾಣಿಯಿಂದ ‘ಸಿರ ತನ್ ಸೆ ಜುದಾ’ ಬೆದರಿಕೆ ಕರೆ ಸಿಕ್ಕಿದೆ. ಮಹಂತರು ನೀಡಿರುವ ಮಾಹಿತಿಯನುಸಾರ ವ್ಹಾಟ್ಸ್ ಅಪ್ ಮೂಲಕ ಸಂಪರ್ಕ ಮಾಡಲಾಗಿತ್ತು. ಬೆದರಿಕೆ ನೀಡುವವರ ಹೆಸರು ಮೌಲಾನಾ ಮುಶ್ತಾಕ ಖಾನ ಎಂದಿದ್ದು, ಅಗಸ್ಟ ೩ ರಂದು ಮಹಂತರಿಗೆ ಬೆದರಿಕೆ ಹಾಕಲಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ದೂರು ದಾಖಲಿಸಿದ್ದು, ಆರೋಪಿಯನ್ನು ಹುಡುಕುತ್ತಿದ್ದಾರೆ.

ಮಹಂತ ಬಜರಂಗ ಮುನಿಯವರು ನೀಡಿರುವ ದೂರಿನಲ್ಲಿ,

೧. ನಾನು ಸ್ಥಳೀಯ ಕ್ಷೇತ್ರದಲ್ಲಿ ಮುಸಲ್ಮಾನರಿಂದ ಹಿಂದೂಗಳ ಮೇಲೆ ನಡೆಯುವ ದಾಳಿಯ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ.

೨. ಇದರಿಂದ ೧ ವರ್ಷದ ಹಿಂದೆ ಕೆಲವು ಮುಸಲ್ಮಾನರು ನನ್ನ ಮೇಲೆ ಶಸ್ತ್ರಾಸ್ತ್ರಗಳಿಂದ ಆಕ್ರಮಣ ಮಾಡಿದ್ದರು. ನನ್ನ ಮೇಲೆ ಈಗಲೂ ಚಿಕಿತ್ಸೆ ಮುಂದುವರಿದಿದ್ದು, ನನಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ.

೩. ಕೆಲವು ತಿಂಗಳುಗಳ ಹಿಂದೆ ‘ಅಲ್ಟ್ ನ್ಯೂಸ’ ನ ಮಹಮ್ಮದ ಜುಬೇರ ನನ್ನ ವಿರುದ್ಧ ಟೀಕಿಸುತ್ತಾ ಜಗತ್ತಿನಾದ್ಯಂತ ನನ್ನ ಅಪಕೀರ್ತಿ ಮಾಡಿದ್ದರು. ನನಗೆ ಅವನು ‘ಹೇಟ ಮಾಂಗರ್ಸ’ (ದ್ವೇಷ ಹಬ್ಬಿಸುವ ವ್ಯಕ್ತಿ) ಎಂದು ಹೀಯಾಳಿಸಿದ್ದ.

೪. ದೇಶದಲ್ಲಿ ‘ಸಿರ ತನ್ ಸೆ ಜುದಾ’ ಸಂಬಂಧಿಸಿದಂತೆ ಘಟನೆಗಳು ಪ್ರಾರಂಭವಾದಾಗಿನಿಂತ ನನ್ನ ಜೀವಕ್ಕೂ ಅಪಾಯ ನಿರ್ಮಾಣವಾಗಿದೆ.

೫. ಮಹಂತರು ತಮ್ಮ ಮಾಹಿತಿಯಲ್ಲಿ, ಯಾವ ಸಂಖ್ಯೆಯಿಂದ ‘ವಾಟ್ಸ್ ಅಪ್ ಕರೆ ಬಂದಿತ್ತೋ, ಅದರ ಮೇಲೆ ‘ಮಕ್ಕಾ-ಮದೀನಾ’ದ ‘ಡಿಪಿ’ – (ಡಿಸ್ಪ್ಲೆ ಫೋಟೊ ಅಂದರೆ ವ್ಯಕ್ತಿಯ ಗುರುತು ತೋರಿಸುವ ಛಾಯಾಚಿತ್ರದ ಸ್ಥಾನ) ಇದೆ.

ಸಂಪಾದಕೀಯ ನಿಲುವು

  • ಈಗ ಕೇವಲ ಹಿಂದುತ್ವನಿಷ್ಠರು ಅಥವಾ ಅವರ ಬೆಂಬಲಿಗರಷ್ಟೇ ಅಲ್ಲ, ಬದಲಾಗಿ ಹಿಂದೂಗಳ ಸಂತ-ಮಹಂತರನ್ನು ಕೂಡ ಗುರಿ ಮಾಡಲಾಗುತ್ತಿದೆ. ಹಿಂದೂ ಸಂತರಿಗೆ ಕೆಟ್ಟದ್ದಾಗುವ ಮೊದಲೇ ಹಿಂದೂಗಳೇ, ಈಗಲಾದರೂ ಒಟ್ಟಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಿರಿ !
  • ‘ಉದಯಪೂರ, ಅಮರಾವತಿ, ಬೆಳ್ಳಾರೆ, ಭೋಪಾಳ ಮುಂತಾದ ಸ್ಥಳಗಳಲ್ಲಿ ನಡೆದ ಹಿಂದೂಗಳ ಹತ್ಯೆಯ ಬಳಿಕ ಇನ್ನೂ ಎಷ್ಟು ಹಿಂದೂಗಳ ಹತ್ಯೆಯಾದನಂತರ ಸರಕಾರ ಎಚ್ಚೆತ್ತುಕೊಳ್ಳುವುದು ?’ ಎಂಬ ಯಕ್ಷ ಪ್ರಶ್ನೆ ನೊಂದ ಹಿಂದೂಗಳಲ್ಲಿ ಮೂಡಿದೆ !