ದೆಹಲಿಯ ಬಾಟ್ಲಾ ಹೌಸ್ ಪ್ರದೇಶದಿಂದ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕನ ಬಂಧನ

ಅಫ್ಘಾನಿಸ್ತಾನ್ ಮತ್ತು ಸಿರಿಯಾದ ಭಯೋತ್ಪಾದಕರಿಗೆ ಧನ ಸಹಾಯ ಮಾಡುತ್ತಿದ್ದ !

ನವದೆಹಲಿ – ರಾಷ್ಟ್ರೀಯ ತನಿಖಾ ದಳದಿಂದ (‘ಎನ್.ಐ.ಎ’) ಇಲ್ಲಿಯ ಬಾಟ್ಲಾ ಹೌಸ್ ಪ್ರದೇಶದಿಂದ ಮೋಹಸಿನ್ ಅಹಮದ್ ಈ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕನನ್ನು ಬಂದಿಸಲಾಗಿದೆ. ಮೋಹಸಿನ್ ಇವನು ಅಫ್ಘಾನಿಸ್ತಾನ್ ಮತ್ತು ಸಿರಿಯಾ ದೇಶದ ಅವರ ನಾಯಕರಿಗೆ ಭಾರತದಿಂದ ‘ಕ್ರಿಪ್ಟೋ ಕರೆನ್ಸಿ’ಯ ಮೂಲಕ (‘ನಕಲಿ ನೋಟುಗಳ’) ಧನಸಹಾಯ ಮಾಡುತ್ತಿದ್ದನು. ಜೊತೆಗೆ ಅವನು ಇಲ್ಲಿಯ ಜಾಮಿಯಾ ಮಿಲಿಯ ಇಸ್ಲಾಮಿಯಾ ವಿಶ್ವವಿದ್ಯಾಲಯದ ಮುಸಲ್ಮಾನ ವಿದ್ಯಾರ್ಥಿಗಳನ್ನು ಬ್ರೈನ್ ವಾಷ್ ಮಾಡಲು ಪ್ರಯತ್ನಿಸುತ್ತಿದ್ದನು.

ಈ ವಿದ್ಯಾರ್ಥಿಗಳು ನೀಡಿರುವ ಮಾಹಿತಿಯ ಮೇರೆಗೆ ಮೋಹಸೀನ್‌ನನ್ನು ಬಂಧಿಸಲಾಯಿತು. (ಈ ವಿದ್ಯಾರ್ಥಿಗಳು ಈ ಮಾಹಿತಿ ನೀಡದೆ ಇದ್ದಲ್ಲಿ ರಾಷ್ಟ್ರೀಯ ತನಿಖಾ ದಳದವರು ಮೋಹಸಿನ್ ಇವನ ಚಟುವಟಿಕೆಗಳ ಬಗ್ಗೆ ಯಾವ ಮಾಹಿತಿ ದೊರೆಯುತ್ತಿರಲಿಲ್ಲ ಮತ್ತು ಅವನು ಈ ವಿದ್ಯಾರ್ಥಿಗಳಲ್ಲಿ ಹೊಸ ಭಯೋತ್ಪಾದಕನನ್ನು ನಿರ್ಮಿಸುತ್ತಿದ್ದನು ! ಪೊಲೀಸರಿಗೆ ಅಥವಾ ತನಿಖಾ ದಳಕ್ಕೆ ತಿಳಿಯದೇ ದೇಶದಲ್ಲಿ ಇಂತಹ ಇನ್ನು ಎಷ್ಟು ಮೋಹಸಿನ್ ಇರುವರು ಎಂಬುದರ ಬಗ್ಗೆ ಕಲ್ಪನೆ ಮಾಡಲು ಸಾಧ್ಯವಿಲ್ಲ ! – ಸಂಪಾದಕರು)