ನನ್ನನ್ನು ಮುಸಲ್ಮಾನ ಬಹುಸಂಖ್ಯಾತ ಪರಿಸರದಿಂದ ಪಲಾಯನ ಮಾಡಲು ಅನಿವಾರ್ಯ ಮಾಡಲಾಗುತ್ತಿದೆ ! – ಸಂತ್ರಸ್ತ ಮನೀಶ್ ಶುಕ್ಲ ಇವರಿಂದ ಪೊಲೀಸರಲ್ಲಿ ದೂರು

ಮನೆಯ ಹೊರಗೆ ನಿಲ್ಲಿಸಿರುವ ನಾಲ್ಕು ಚಕ್ರವಾಹನದ ಗಾಜುಗಳನ್ನು ಒಡೆಡು ಮನೆಯ ಮೇಲೆ ಕಲ್ಲು ತೂರಾಟ !

ಕಾನಪೂರ (ಉತ್ತರಪ್ರದೇಶ) – ಇಲ್ಲಿಯ ರಾವತಪೂರ ಗ್ರಾಮದ ರಹಮತನಗರದ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಿಂದ ನನಗೆ ಪಲಾಯನ ಮಾಡಲು ಅನಿವಾರ್ಯ ಪಡಿಸಲಾಗುತ್ತಿದೆ, ಎಂದು ಸಂತ್ರಸ್ತ ಮನೀಶ ಶುಕ್ಲಾ ಇವರು ಆರೋಪ ಮಾಡಿದ್ದಾರೆ. ಈ ಕುರಿತು ಶುಕ್ಲಾ ಇವರು ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನಲ್ಲಿ, ನನ್ನ ಮನೆಯ ಹೊರಗೆ ನಿಂತಿರುವ ನನ್ನ ಚತುಶ್ಚಕ್ರ ವಾಹನದ ಗಾಜುಗಳನ್ನು ಒಡೆಯುವುದು, ಮನೆಯ ಮೇಲೆ ಕಲ್ಲು ತೂರಾಟ ಮಾಡುವುದು ಮುಂತಾದ ಮಾಧ್ಯಮಗಳಿಂದ ನನ್ನನ್ನು ಹಿಂಸಿಸಲಾಗುತ್ತಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ನಾನು ಈ ಪರಿಸರದಿಂದ ಮನೆ ಮಠ ಬಿಟ್ಟು ಪಲಾಯನ ಮಾಡಬೇಕಾಗುತ್ತದೆ ಎಂದು ಹೇಳಿದರು.
ಈ ಬಗ್ಗೆ ಪೊಲೀಸರು ಆರೋಪಿಗಳ ವಿರುದ್ಧ ದೂರದ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ‘ಈ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಬಂಧಿಸಿ ಅವರನ್ನು ಕಾರಾಗೃಹಕ್ಕೆ ಅಟ್ಟಲಾಗುವುದೆಂದು ಕಲ್ಯಾಣಪುರದ ಪೊಲೀಸ್ ಆಯುಕ್ತರಾದ ದಿನೇಶ ಶುಕ್ಲಾ ಇವರು ಭರವಸೆ ನೀಡಿದ್ದಾರೆ.

ಸಂಪಾದಕೀಯ ನಿಲುವು

  • ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳು ಅಸುರಕ್ಷಿತ ! ಹಿಂದೂಗಳ ಮೇಲೆ ಈ ಪರಿಸ್ಥಿತಿ ಬರಲು ಕಾನಪುರ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿ !
  • ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಮನೆ ನಿರಾಕರಿಸಿದಾಗ ಆಕಾಶ ಪಾತಾಳ ಒಂದು ಮಾಡುವ ಕಾಂಗ್ರೆಸ್ಸಿಗರು, ಪ್ರಗತಿ(ಅಧೋಗತಿ)ಪರರು, ಕಮ್ಯುನಿಸ್ಟರು, ಜಾತ್ಯಾತೀತರು, ಹಿಂದೂ ದ್ವೇಷಿ ಪ್ರಸಾರ ಮಾಧ್ಯಮಗಳು ಮುಂತಾದವು ಈಗ ಮೌನವೇಕೆ ?