ಹೊಸ ದೆಹಲಿ – ನೋಟಿಸು ನೀಡದೆ ಕಾನೂನು ಬಾಹಿರ ಗುಡಿಸಿಲಗಳು ಮುಂಜಾನೆ ಅಥವಾ ಸಂಜೆ ತಡವಾಗಿ ತೆರವುಗೊಳಿಸಬಾರದು ಎಂಬ ಆದೇಶ ದೆಹಲಿ ಉಚ್ಚ ನ್ಯಾಯಾಲಯ ನೀಡಿದೆ. ನ್ಯಾಯಾಲಯದಿಂದ ದೆಹಲಿ ವಿಕಾಸ ಪ್ರಾಧಿಕಾರಕ್ಕೆ ‘ಕಾನೂನುಬಾಹಿರ ಕಟ್ಟಡಗಳನ್ನು ತೆರವುಗೊಳಿಸುವಾಗ ಸಂಬಂಧಿತರಿಗೆ ಸಾಕಷ್ಟು ಸಮಯ ನೀಡಬೇಕು, ಏಕೆಂದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗಲಿ’, ಎಂಬ ತೀರ್ಪು ನೀಡಿದೆ. ದೆಹಲಿಯ ಶಕುರಪುರ ಸ್ಲಂ ಯೂನಿಯನ್ ನಿಂದ ಈ ವಿಷಯದಲ್ಲಿ ಮನವಿ ದಾಖಲಿಸಲಾಗಿತ್ತು, ಅದರ ಮೇಲೆ ನ್ಯಾಯಾಲಯ ಈ ತೀರ್ಪು ನೀಡಿದೆ. ಇಲ್ಲಿಯ ೩೦೦ ಗುಡಿಸಿಲಗಳು ಯಾವುದೇ ನೋಟಿಸು ಇಲ್ಲದೆ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದಾಗಿ ಈ ಮನವಿ ದಾಖಲಿಸಲಾಗುತ್ತು.
ಈ ರೀತಿಯ ಕ್ರಮ ಕೈಗೊಳ್ಳುವ ಮೊದಲು ಪ್ರಾಧಿಕಾರ ‘ಶಹರ ಆಶ್ರಯ ಸುಧಾರ್ ಬೋರ್ಡ್’ ಇದರ ಜೊತೆಗೆ ಚರ್ಚೆಸಬೇಕು ಎಂದು ನ್ಯಾಯಾಲಯ ಹೇಳಿದೆ.