-
ಪೋಷಕರು ಈ ಬಗ್ಗೆ ಪ್ರಶ್ನಿಸಿದಾಗ ಶಾಲೆಯ ಆಡಳಿತ ಮಂಡಳಿ ಕ್ಷಮೆಯಾಚನೆ !
-
ಮಕ್ಕಳಿಗೆ ಅಲರ್ಜಿಯಾಗಬಾರದು; ಎಂದು ಮೆಹಂದಿ ಹಚ್ಚಿಕೊಳ್ಳದಿರುವ ನಿಯಮ !
ಬರೇಲಿ(ಉತ್ತರಪ್ರದೇಶ) – ಇಲ್ಲಿಯ ಕ್ರೈಸ್ತ ಮಿಶನರಿಯ ‘ಸೇಂಟ ಜ್ಯೂಸ ಸ್ಕೂಲ’ ಶಾಲೆಯಲ್ಲಿ ಮೆಹಂದಿ ಹಚ್ಚಿಕೊಂಡು ಹೋಗಿದ್ದ ಮೂರೂವರೆ ವರ್ಷದ ಬಾಲಕಿಗೆ ಬೆದರಿಸಿ ಶಿಕ್ಷಿಸಿದ್ದರಿಂದ ವಿವಾದ ನಿರ್ಮಾಣವಾಯಿತು. ಈ ಪ್ರಕರಣದಲ್ಲಿ ಬಾಲಕಿಯ ಪೋಷಕರು ಶಾಲೆಗೆ ತೆರಳಿದಾಗ ಶಾಲೆಯ ವ್ಯವಸ್ಥಾಪಕರು ಕ್ಷಮೆಯಾಚಿಸಿದರು.
೧. ಆಯುಷ ಅಗ್ರವಾಲರ ಪುತ್ರಿ ಶಾಲೆಯ ದಿನಚರಿಯಲ್ಲಿ ಶಿಕ್ಷಕನು, ಅವಳು ಮೆಹಂದಿಯನ್ನು ಹಚ್ಚಿಕೊಂಡು ಶಾಲೆಗೆ ಬಂದಿದ್ದಳು. ಪುನಃ ಈ ರೀತಿ ಆಗಬಾರದು ಎಂದು ಬರೆಯಲಾಗಿತ್ತು. ಈ ವಿಷಯದಲ್ಲಿ ಪೋಷಕರು ಬಾಲಕಿಯನ್ನು ಕೇಳಿದಾಗ ಬಾಲಕಿಯು ಶಿಕ್ಷಕಿಯು ಬೈದು ಶಿಕ್ಷಿಸಿದ್ದಾಗಿ ಹೇಳಿದಳು.
೨. ತದನಂತರ ಆಯುಷ ಅಗ್ರವಾಲ ಜೊತೆಗೆ ಸ್ಥಳೀಯ ಶಾಸಕ ಸಂಜೀವ ಅಗ್ರವಾಲರ ಸಹೋದರ ಪ್ರದೀಪ ಅಗ್ರವಾಲ ಮತ್ತು ಕೆಲವು ಪೋಷಕರು ಶಾಲೆಗೆ ಹೋದರು. ಅವರು ವ್ಯವಸ್ಥಾಪಕ ರಾಬರ್ಟ ಇವರನ್ನು ಭೇಟಿ ಮಾಡಿದರು. ಆಗ ರಾಬರ್ಟ ಹೇಳಿದರು, ‘ಮಕ್ಕಳಿಗೆ ಅಲರ್ಜಿಯಾಗಬಾರದು; ಎಂದು ನಾವು ಈ ಸಂದರ್ಭದಲ್ಲಿ ನಿಯಮ ಮಾಡಿದ್ದೇವೆ’; ಆದರೆ ಪೋಷಕರಿಗೆ ಇದು ಒಪ್ಪಿಗೆ ಆಗಲಿಲ್ಲ. ಅವರು ವಿರೋಧಿಸಿದಾಗ ರಾಬರ್ಟ ಕ್ಷಮೆ ಯಾಚಿಸಿದರು.
೩. ಇಲ್ಲಿಯ ‘ರುಹೇಲಖಂಡ ಪೋಷಕರ ಸೇವಾ ಸಮಿತಿ’ಯ ಅಧ್ಯಕ್ಷ ವಿಶಾಲ ಮೆಹರೋತ್ರಾ ಇವರು, ಹಬ್ಬದ ಕಾರಣದಿಂದ ಬಾಲಕಿಗೆ ಮೆಹಂದಿಯನ್ನು ಹಚ್ಚಲಾಗಿತ್ತು. ಇದರಲ್ಲಿ ಅವಳ ತಪ್ಪೇನೂ ಇಲ್ಲದಿರುವಾಗ ಅವಳನ್ನು ಶಿಕ್ಷಿಸಲಾಗಿದೆ. ನಾವು ಇದನ್ನು ವಿರೋಧಿಸಿ ಶಿಕ್ಷಣಾಧಿಕಾರಿಗಳಲ್ಲಿ ದೂರು ದಾಖಲಿಸಿದ್ದೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಅಲರ್ಜಿಯ ಹೆಸರಿನಲ್ಲಿ ಹಿಂದೂಗಳ ಪರಂಪರೆಯನ್ನು ವಿರೋಧಿಸುವ ಕ್ರೈಸ್ತ ಮಿಶನರಿ ಶಾಲೆಯ ಪದ್ಧತಿಯಾಗಿದೆ, ಎನ್ನುವುದು ತಿಳಿಯದೇ ಇರುವಷ್ಟು ಹಿಂದೂಗಳು ದಡ್ಡರಲ್ಲ ! |