ಉದಯ ಲಳಿತ ಇವರು ದೇಶದ ೪೯ ನೇ ಮುಖ್ಯ ನ್ಯಾಯಾಧೀಶರು !

ನವದೆಹಲಿ – ನ್ಯಾಯಮೂರ್ತಿ ಉದತ ಲಳಿತ ಇವರು ದೇಶದ ೪೯ ನೇ ಮುಖ್ಯ ನ್ಯಾಯಾಧೀಶರಾಗುವರು. ಪ್ರಸ್ತುತ ಮುಖ್ಯ ನ್ಯಾಯಾಧೀಶರಾದ ಎನ್.ವಿ. ರಮಣ ಇವರು ಆಗಸ್ಟ್ ೪ ರಂದು ದೇಶದ ೪೯ ನೇ ಮುಖ್ಯ ನ್ಯಾಯಾಧೀಶರಂದು ನ್ಯಾಯಮೂರ್ತಿ ಉದಯ ಲಳಿತ ಇವರ ಹೆಸರು ಶಿಫಾರಸು ಮಾಡಿದ್ದಾರೆ. ಎನ್.ವಿ. ರಮಣ ಇವರು ಆಗಸ್ಟ್ ೨೬ ರಂದು ಮುಖ್ಯ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತರಾಗುವರು. ಅವರ ನಂತರ ಉದಯ ಲಳಿತ ಮುಖ್ಯ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸುವರು. ನ್ಯಾಯಮೂರ್ತಿ ಲಳಿತ ಇವರು ನವೆಂಬರ್ ೮, ೨೦೨೨ ವರೆಗೆ ಮುಖ್ಯ ನ್ಯಾಯಾಧೀಶ ಹುದ್ದೆಯಲ್ಲಿ ಇರುವರು.

ನ್ಯಾಯಮೂರ್ತಿ ಉದಯ ಲಳಿತ ಇವರ ಸಂಕ್ಷಿಪ್ತ ಪರಿಚಯ

ನ್ಯಾಯಮೂರ್ತಿ ಉದಯ ಲಳಿತ ಇವರು ಮೂಲತಃ ಕೋಂಕಣದ ಸಿಂಧುದುರ್ಗ ಜಿಲ್ಲೆಯವರಾಗಿದ್ದು ದೇವಗಡ ತಾಲೂಕಿನ ಕೋಠಾರವಾಡಿ ಇದು ಅವರ ಮೂಲ ಗ್ರಾಮವಾಗಿದೆ. ವಿಶೇಷ ಎಂದರೆ ಲಳಿತ ಕುಟುಂಬ ತಲತಲಾಂತರದಿಂದ ವಕೀಲ ವೃತ್ತಿಯಲ್ಲಿದ್ದಾರೆ. ಉದಯ ಲಳಿತ ಇವರು ಅದೇ ವ್ಯವಸಾಯ ಆಯ್ಕೆ ಮಾಡಿದರು. ಮುಂಬಯಿಯಲ್ಲಿ ಲಾ ಶಿಕ್ಷಣ ಪಡೆದ ನಂತರ ೧೯೮೩ ರಲ್ಲಿ ಅವರು ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಪ್ರಾರಂಭಿಸಿದರು. ಅದರ ನಂತರ ಜನವರಿ ೧೯೮೬ ರಲ್ಲಿ ಅವರು ದೆಹಲಿಗೆ ವರ್ಗಾವಣೆಯಾದರು. ಅಲ್ಲಿ ಅವರು ಅನೇಕ ವರ್ಷಗಳ ಕಾಲ ಸರ್ವೋಚ್ಚ ನ್ಯಾಯಾಲಯದಲ್ಲಿ ತಮ್ಮ ವಕೀಲ ವೃತ್ತಿ ಮುಂದುವರೆಸಿದರು. ಆಗಸ್ಟ್ ೧೩, ೨೦೧೪ ರಲ್ಲಿ ಲಳಿತ ಇವರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು.