ಉತ್ತರ ಪ್ರದೇಶ ಪೊಲೀಸರಿಂದ ವಿಶ್ವ ಹಿಂದೂ ಪರಿಷತಿನ ಜಿಲ್ಲಾ ಸಚಿವರಿಗೆ ಅಮಾನುಷವಾಗಿ ಥಳಿತ !

ವಿಶ್ವ ಹಿಂದೂ ಪರಿಷತ್ತಿನ ಆರೋಪ

ಹರದೋಯಿ (ಉತ್ತರಪ್ರದೇಶ) – ಇಲ್ಲಿ ೨ ಯುವಕರಲ್ಲಿ ವಾದ ಬಗೆಹರಿಸುವುದಕ್ಕಾಗಿ ಆಗಸ್ಟ್ ೩ ರಂದು ರಾತ್ರಿ ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಸಚಿವ ಅಮನ ಸಿಂಹ ಚೌಹಾಣ ಇವರು ಇಲ್ಲಿಯ ಪೊಲೀಸ ಠಾಣೆಗೆ ಹೋಗಿದ್ದರು. ಎರಡು ಗುಂಪಿನ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವಾಗ ಪೊಲೀಸರು ಚೌಹಾಣ ಇವರಿಗೆ ಅಮಾನುಷವಾಗಿ ಥಳಿಸಿದ್ದಾರೆ. ಆದ್ದರಿಂದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಎಷ್ಟು ಅಮಾನುಷವಾಗಿ ಥಳಿಸಿದ್ದಾರೆ ಎಂದರೆ ಅವರನ್ನು ಲಕ್ಷ್ಮಣಪುರಿಯ ಆಸ್ಪತ್ರೆಗೆ ವರ್ಗಾಯಿಸಬೇಕಾಯಿತು ಎಂದು ವಿಶ್ವ ಹಿಂದೂ ಪರಿಷತ್ತಿನ ಹರದೋಯಿ ಜಿಲ್ಲಾ ಸಚಿವ ಡಾ. ಆಶಿಷ್ ಮಾಹೇಶ್ವರೀ ಅರೋಪಿಸಿದರು.

ಡಾ. ಮಾಹೇಶ್ವರೀ ಇವರು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯ ಶಹಬಾದಿನಲ್ಲಿ ರಾಜ ಮತ್ತು ಆಶು ಇವರಿಬ್ಬರಲ್ಲಿ ವಾದ ನಡೆಯಿತು. ಈ ಪ್ರಕರಣದಲ್ಲಿ ಹಿಂದೂ ಆಗಿರುವುದರಿಂದ ರಾಜ ಪರವಾಗಿ ನಿಂತಿರುವುದರಿಂದ ಚೌಹಾಣ ಪೊಲೀಸ ಠಾಣೆಗೆ ಹೋಗಿದ್ದರು ಆದರೆ ಅಲ್ಲಿಯ ಪೊಲೀಸ ನಿರೀಕ್ಷರು ಮತ್ತು ಸಿಬ್ಬಂದಿ ಚೌಹಾಣ ಇವರಿಗೆ ಅಮಾನುಷವಾಗಿ ಹೊಡೆದರು.

ಇನ್ನೊಂದು ಕಡೆಗೆ ಪೊಲೀಸ್ ಅಧೀಕ್ಷಕರು ದುರ್ಗೇಶ ಕುಮಾರ ಸಿಂಹ ಇವರು ರಾಜುವಿನ ಪರ ನಿಂತಿರುವುದರಿಂದ ಚೌಹಾಣ ಇವರ ಮತ್ತೊಂದು ಕಡೆಯವರ ಜೊತೆ ಹೊಡೆದಾಟ ನಡೆದಿದೆ. ಇದರಲ್ಲಿ ಚೌಹಾಣ ಗಾಯಗೊಂಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಮಾಡಿರುವ ಆರೋಪದ ಬಗ್ಗೆ ಸಿಂಹ, ಆರೋಪಗಳ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಸಂಪಾದಕೀಯ ನಿಲುವು

  • ವಿಶ್ವ ಹಿಂದೂ ಪರಿಷತ್ತಿನ ಆರೋಪದಲ್ಲಿ ಏನಾದರೂ ಸತ್ಯ ಕಂಡು ಬಂದರೆ, ಆಗ ಸಂಬಂಧಿತ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು !
  • ಯಾವಾಗಲೂ ಮುಸಲ್ಮಾನರ ಧರ್ಮಗುರು ಅಥವಾ ನಾಯಕರು ಇವರ ಮುಂದೆ ಮಂಡಿ ಊರುವ ಪೊಲೀಸರು ಹಿಂದುತ್ವನಿಷ್ಠ ನಾಯಕರ ವಿರುದ್ಧ ಮಾತ್ರ ಕಠಿಣ ಕ್ರಮ ಕೈಗೊಳ್ಳುತ್ತಾರೆ, ಇದನ್ನು ನೆನಪಿಟ್ಟುಕೊಳ್ಳಿ !