ಆಗಸ್ಟ್ ೫ ರಿಂದ ೧೫ ರವರೆಗೆ ದೇಶದಾದ್ಯಂತ ಸರಕಾರಿ ಸ್ಮಾರಕಗಳು ಮತ್ತು ವಸ್ತುಸಂಗ್ರಹಾಲಯಗಳಿಗೆ ಪ್ರವೇಶ ಉಚಿತ !

‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮದಡಿ ಕೇಂದ್ರ ಸರಕಾರದ ನಿರ್ಧಾರ

ತಾಜ್ ಮಹಲ್ ಮತ್ತು ಕೆಂಪು ಕೋಟೆ

ಹೊಸ ದೆಹಲಿ – ಭಾರತದ ಸ್ವಾತಂತ್ರ್ಯಕ್ಕೆ ೭೫ ವರ್ಷಗಳ ಪೂರ್ಣವಾಗಿರುವ ದೃಷ್ಟಿಯಿಂದ ಆಗಸ್ಟ್ ೫ ರಿಂದ ೧೫ ರವರೆಗೆ ಭಾರತೀಯ ಪುರಾತತ್ವ ಇಲಾಖೆಯಡಿ ಬರುವ ದೇಶದಾದ್ಯಂತವಿರುವ ಎಲ್ಲ ಸ್ಮಾರಕಗಳು, ವಸ್ತುಸಂಗ್ರಹಾಲಯಗಳು ಮತ್ತು ಪುರಾತತ್ತ್ವ ಸ್ಥಳಗಳಿಗೆ ಜನರು ಉಚಿತ ಪ್ರವೇಶ ಕಲ್ಪಿಸಲಾಗಿದೆ. ‘ಆಜಾದಿ ಕಾ ಅಮೃತ್ ಮಹೋತ್ಸವ’ ಕಾರ್ಯಕ್ರಮದಡಿ ಕೇಂದ್ರ ಸರಕಾರ ಈ ಘೋಷಣೆ ಮಾಡಿದೆ.

ದೇಶದಾದ್ಯಂತ ‘ಹರ್ ಘರ್ ತಿರಂಗಾ ಅಭಿಯಾನ’ ಆರಂಭಿಸಲಾಗಿದೆ. ಇದರಡಿಯಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿಸಲಾಗಿದೆ. ಇದರೊಂದಿಗೆ, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ‘ಡಿಪಿ’ (’ಡಿಸ್ಪ್ಲೇ ಪಿಕ್ಚರ್’ ಅಂದರೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಗುರುತನ್ನು ತೋರಿಸಲು ಹಾಕುವ ಚಿತ್ರ) ಗಾಗಿ ರಾಷ್ಟ್ರಧ್ವಜದ ಛಾಯಾಚಿತ್ರವನ್ನು ಉಪಯೋಗಿಸಲು ನಾಗರಿಕರಿಗೆ ಕರೆ ನೀಡಲಾಗಿದೆ.