ಹೊಸ ದೆಹಲಿ – ಇಲ್ಲಿಯ ಜಹಾಂಗೀರಪುರಿ ಭಾಗದಲ್ಲಿ ಏಪ್ರಿಲ್ ೧೬ ರಂದು ಹನುಮಾನ ಜಯಂತಿಯ ಸಮಯದಲ್ಲಿ ನಡೆದಿರುವ ಹಿಂಸಾಚಾರದ ಆರೋಪಿ, ತಲೆಮರೆಸಿಕೊಂಡಿದ್ದ ಸವರ್ ಮಲಿಕ್ ಅಲಿಯಾಸ್ ಅಕ್ಬರ್ ಅಲಿಯಾಸ್ ಕಾಲಿಯಾ ಇವನನ್ನು ಬಂಧಿಸಲು ಜಹಾಂಗೀರಪುರಿ ಭಾಗಕ್ಕೆ ಹೋಗಿರುವಾಗ ಸ್ಥಳೀಯ ಮುಸಲ್ಮಾನರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದರಲ್ಲಿ ಓರ್ವ ಪೊಲೀಸ ಹವಾಲ್ದಾರ್ ಗಾಯಗೊಂಡಿದ್ದಾರೆ. ಅದರ ನಂತರ ಪೊಲೀಸರು ಅಕ್ಬರ್ ಇವನನ್ನು ಬಂಧಿಸಿದ್ದಾರೆ. ಅವನನ್ನು ಹಿಡಿದು ಕೊಡುವವರಿಗೆ ೨೫ ಸಾವಿರ ರೂಪಾಯಿಗಳ ಬಹುಮಾನ ನೀಡುವುದಾಗಿ ಪೊಲೀಸರು ಘೋಷಣೆ ಮಾಡಿದ್ದರು. ಈ ದಂಗೆಯ ಪ್ರಕರಣದಲ್ಲಿ ೮ ಜನ ಪೊಲೀಸರು ಗಾಯಗೊಂಡಿದ್ದರು. ಇಲ್ಲಿಯವರೆಗೆ ಈ ಪ್ರಕರಣದಲ್ಲಿ ೩೫ ಜನರ ಸಹಿತ ೩ ಅಪ್ರಾಪ್ತ ಹುಡುಗರನ್ನು ಬಂಧಿಸಲಾಗಿದೆ.
दिल्ली पुलिस की अपराध शाखा ने जहांगीरपुरी सांप्रदायिक हिंसा के सिलसिले में एक व्यक्ति को गिरफ्तार किया है-#DelhiNews #Jahangirpuri #DelhiPolicehttps://t.co/ZAqcLlUkvG
— ABP News (@ABPNews) August 3, 2022
ಸಂಪಾದಕೀಯ ನಿಲುವುಮುಸಲ್ಮಾನ ಬಾಹುಳ್ಯವಿರುವ ಭಾಗದಲ್ಲಿ ಮತಾಂಧ ಆರೋಪಿಯನ್ನು ಬಂಧಿಸಲು ಹೋಗಿರುವ ಪೊಲೀಸರ ಮೇಲೆ ಯಾವಾಗಲೂ ದಾಳಿ ನಡೆಯುತ್ತದೆ, ಇದು ಈಗ ಹೊಸದೇನು ಅಲ್ಲ! ಆದರೆ ಈ ವಿಷಯದಲ್ಲಿ ಭಾರತದ ತಾಥಾಕಥಿತ ಜಾತ್ಯತೀತರು ಮತ್ತು ಪ್ರಗತಿಪರರು ಉತ್ತರ ನೀಡುವರೇ ? |