ಹಣದುಬ್ಬರದ ವಿರುದ್ಧ ದೆಹಲಿಯಲ್ಲಿ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಆಂದೋಲನ

ಪ್ರಹ್ಲಾದ್ ಮೋದಿ ಮತ್ತು ಪ್ರಧಾನಿ ನರೇಂದ್ರ ಮೋದಿ

ಹೊಸ ದೆಹಲಿ – ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಮತ್ತು ‘ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಡೀಲರ್ಸ್ ಫೆಡರೇಶನ’ (ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ) ಉಪಾಧ್ಯಕ್ಷ ಪ್ರಹ್ಲಾದ್ ಮೋದಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರವನ್ನು ವಿರೋಧಿಸಿ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಿದರು. ಈ ವೇಳೆ ಸಂಘಟನೆಯ ಇತರ ಸದಸ್ಯರೂ ಉಪಸ್ಥಿತರಿದ್ದರು.

೧. ಪ್ರಹ್ಲಾದ್ ಮೋದಿಯವರು, ‘ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಡೀಲರ್ಸ್ ಫೆಡರೇಶನ’ನ ಒಂದು ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಿದೆ. ನಮ್ಮ ದೀರ್ಘಾವಧಿಯಿಂದ ಬಾಕಿಯಿರುವ ಬೇಡಿಕೆಗಳ ಪಟ್ಟಿ ಮನವಿ ಒಳಗೊಂಡಿದೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ, ಅಂಗಡಿಗಳನ್ನು ನಡೆಸಲು ಹೆಚ್ಚು ವೆಚ್ಚವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಪಾಲಿಗೆ ಕೆಜಿಗೆ ಕೇವಲ ೨೦ ಪೈಸೆ ಹೆಚ್ಚಿಸಿರುವುದು ಕ್ರೌರ್ಯ. ಕೇಂದ್ರ ಸರಕಾರ ನಮ್ಮ ಮೇಲೆ ಅನುಕಂಪ ತೋರಿಸಿ ನಮ್ಮ ಆರ್ಥಿಕ ಸಂಕಷ್ಟವನ್ನು ತೊಡೆಯುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದರು.

೨. ಕೇಂದ್ರ ಸರಕಾರವು ಅಕ್ಕಿ, ಗೋಧಿ, ಸಕ್ಕರೆಗೆ ನಷ್ಟ ಪರಿಹಾರ ನೀಡಬೇಕು. ಖಾದ್ಯ ತೈಲ ಮತ್ತು ಬೇಳೆಕಾಳುಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಬೇಕು ಮತ್ತು ಉಚಿತ ಆಹಾರಧಾನ್ಯ ವಿತರಣೆಗಾಗಿ ದೇಶಾದ್ಯಂತ ‘ಪಶ್ಚಿಮ ಬಂಗಾಳ ಪಡಿತರ ಮಾದರಿ’ಯನ್ನು ಜಾರಿಗೆ ತರಬೇಕು ಎಂದು ಈ ಸಂಘಟನೆ ಒತ್ತಾಯಿಸಿದೆ.