ತಾಜಮಹಲಿನ ಹಿಂದಿನ ಭಾಗದಲ್ಲಿ ಹಿಂದೂ ಮಹಾಸಭೆಯಿಂದ ಜಲಾಭಿಷೇಕ : ೧೮ ಕಾರ್ಯಕರ್ತರ ಬಂಧನ

ಆಗ್ರಾ (ಉತ್ತರಪ್ರದೇಶ) – ಶ್ರಾವಣ ಸೋಮವಾರದಂದು ತಾಜಮಹಲಿಗೆ ಪ್ರದಕ್ಷಣೆ ಹಾಕಿ ಹಿಂದಿನ ಭಾಗದಲ್ಲಿ ಜಲಾಭಿಷೇಕ ಮಾಡುವ ಘೋಷಣೆ ಮಾಡಿರುವ ಹಿಂದೂ ಮಹಾಸಭೆಯ ೧೮ ಕಾರ್ಯಕರ್ತರನ್ನು ಆಗ್ರಾ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಹಿಂದೂ ಮಹಾಸಭೆಯ ನಾಯಕರು ‘ಜಲಾಭಿಷೇಕ ಮಾಡುವುದು ಅಪರಾಧವಲ್ಲ. ಪೊಲೀಸರು ಈ ರೀತಿಯ ಜಲಾಭಿಷೇಕವನ್ನು ತಡೆಯುವುದು ತಪ್ಪಾಗಿದೆ’ ಎಂದು ಪ್ರತಿಕ್ರಯಿಸಿದ್ದಾರೆ.

ಇದು ತಾಜಮಹಲ್ ಅಲ್ಲ ,ಇದು ತೇಜೋಮಹಾಲಯ ಮಂದಿರ ಎಂದು ಹಿಂದೂ ಮಹಾಸಭೆಯ ಓರ್ವ ಕಾರ್ಯಕರ್ತರು ಹೇಳಿದರು. ಅದಕ್ಕಾಗಿ ನಾವು ನಮ್ಮ ಹೋರಾಟ ಮುಂದುವರಿಸುವೆವು.