ಹಿಂದೂಗಳ ವಿರೋಧದ ನಂತರ ಸತ್ಯನಾರಾಯಣ ಕೀ ಕಥ ಚಲನಚಿತ್ರದ ಹೆಸರು ಸತ್ಯಪ್ರೇಮ ಕೀ ಕಥಾ ಎಂದು ಬದಲಾಯಿಸಲಾಗಿದೆ !

ದೆಹಲಿ – ಹಿಂದೂಗಳ ವಿರೋಧದ ನಂತರ ಕಾರ್ತಿಕ ಆರ್ಯನ ಮತ್ತು ಕಿಯಾರಾ ಅಡ್ವಾಣಿ ಇವರು ನಟಿಸಿರುವ ಸತ್ಯನಾರಾಯಣ ಕೀ ಕಥಾ ಎಂಬ ಚಲನಚಿತ್ರದ ಹೆಸರನ್ನು ಬದಲಾಯಿಸಿ ಸತ್ಯಪ್ರೇಮ ಕೀ ಕಥಾ, ಎಂದು ಇಡಲಾಗಿದೆ. ಸಾಜಿದ ನಾಡಿಯಾದವಾಲಾ ನಿರ್ಮಿಸಿರುವ ಚಲನಚಿತ್ರದ ‘ಸತ್ಯನಾರಾಯಣ ಕೀ ಕಥಾ’ ಎಂಬ ಹೆಸರಿನ ಪೋಸ್ಟರ್ ಪ್ರಸಾರ ಮಾಡಲಾಗಿತ್ತು. ಅದರ ನಂತರ ಅನೇಕ ಹಿಂದೂ ಸಂಘಟನೆಗಳಿಂದ ಅದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಇದರ ನಂತರ ತಕ್ಷಣ ನಿರ್ದೇಶಕರಾಗಿರುವ ಸಮೀರ್ ವಿದ್ವಾಂಸ ‘ಚಲನಚಿತ್ರದ ಹೆಸರು ಜನರ ಭಾವನೆಗಳಿಗೆ ನೋವುಂಟು ಮಾಡಿದೆ; ನಾವು ಬಹಳ ವಿಚಾರ ಮಾಡಿ ಆ ಹೆಸರು ನೀಡಿದ್ದೆವು, ಆದರೆ ನಾವು ಈಗ ಹೆಸರು ಬದಲಾಯಿಸುತ್ತಿದ್ದೇವೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳು ಸಂಘಟಿತರಾಗಿರುವುದರ ವಿಜಯ ! ಹಿಂದೂಗಳು ಈಗ ಜಾಗೃತರಾಗಿ ದೇವತೆಗಳ ಅವಮಾನದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ, ಇದು ಪ್ರಶಂಸನೀಯ. ಈ ರೀತಿ ಎಲ್ಲೆಡೆಯ ಹಿಂದೂಗಳು ಜಾಗೃತವಾದರೆ ಯಾರೂ ಹಿಂದೂ ಧರ್ಮ, ದೇವತೆ, ಧರ್ಮಗ್ರಂಥ, ಸಂತರು, ರಾಷ್ಟ್ರಪುರುಷ ಮುಂತಾದವರ ಅವಮಾನ ಮಾಡಲು ಧೈರ್ಯ ಮಾಡುವುದೇ ಇಲ್ಲ !