ಬುಕರ ಪುರಸ್ಕಾರ ವಿಜೇತೆ ಗೀತಾಂಜಲಿ ಶ್ರೀ ಇವರ ಆಗ್ರಾದ ಕಾರ್ಯಕ್ರಮ ಸ್ಥಗಿತ

ಪುಸ್ತಕದಿಂದ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಲೇಖನ ಬರೆದ ಬಗ್ಗೆ ಪೊಲೀಸರಲ್ಲಿ ದೂರು

ಲೇಖಕಿ ಗೀತಾಂಜಲಿ ಶ್ರೀ

ಆಗ್ರಾ (ಉತ್ತರಪ್ರದೇಶ) : ಅಂತರರಾಷ್ಟ್ರೀಯ ಬುಕರ್ ಪುರಸ್ಕಾರದಿಂದ ಸನ್ಮಾನಿತ ಲೇಖಕಿ ಗೀತಾಂಜಲಿ ಶ್ರೀ ಇವರ ಕಾದಂಬರಿಯಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಬರಹವಿರುವುದರಿಂದ ಅವರ ಸನ್ಮಾನಾರ್ಥ ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಹಿಂದೂಗಳ ವಿರೋಧದ ನಂತರ ಸ್ಥಗಿತಗೊಳಿಸಲಾಯಿತು. ಗೀತಾಂಜಲಿ ಇವರ ವಿರುದ್ಧ ದೂರು ದಾಖಲಿಸಿದ ನಂತರ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಸಾಂಸ್ಕೃತಿಕ ಸಂಘಟನೆ ರಂಗಲೀಲಾ ಮತ್ತು ಆಗ್ರಾ ಥಿಯೇಟರ್ ಕ್ಲಬ್ ಈ ಸಂಘಟನೆಗಳು ಈ ಕಾರ್ಯಕ್ರಮ ಆಯೋಜಿಸಿದ್ದವು.

ರಂಗಲೀಲಾದ ಅನಿಲ ಶುಕ್ಲ ಇವರು ಈ ವಿಷಯದ ಬಗ್ಗೆ ಮಾತನಾಡುವಾಗ, ಗೀತಾಂಜಲಿ ಶ್ರೀ ಇವರು ಶ್ರೀ ಶಂಕರ ಮತ್ತು ಶ್ರೀ ಪಾರ್ವತಿ ಈ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂಬ ಆರೋಪದಿಂದ ಹಾಥರಸದಲ್ಲಿ ಸಂದೀಪ ಕುಮಾರ ಪಾಠಕ ಅವರು ಗೀತಾಂಜಲಿ ಶ್ರೀ ಇವರ ವಿರುದ್ಧ ದೂರು ದಾಖಲಿಸಿದ್ದಾರೆ. ಲೇಖಕಿ ಗೀತಾಂಜಲಿ ಇವರ ಹೇಳಿಕೆಗನುಸಾರ ಅವರನ್ನು ವಿನಾಕಾರಣ ರಾಜಕೀಯ ವಾದವಿವಾದದಲ್ಲಿ ಸಿಲುಕಿಸಲಾಗುತ್ತಿದೆ.

ಸಂಪಾದಕೀಯ ನಿಲುವು

ಹಿಂದೂ ದೇವತೆಗಳನ್ನು ಅವಮಾನಿಸುವವರಿಗೆ ಪುರಸ್ಕಾರ ಸಿಗುತ್ತದೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !
ಇಂತಹವರ ಮೇಲೆ ದೂರು ದಾಖಲಿಸಿ ಕ್ರಮ ಕೈಗೊಳ್ಳಬೇಕು ಆಗಲೇ ಇತರರಲ್ಲಿ ಭಯ ಹುಟ್ಟಬಹುದು.