ಬಂಗಾಲದಲ್ಲಿ ಜಾರ್ಖಂಡನ ಕಾಂಗ್ರೆಸ್ಸಿನ ೩ ಶಾಸಕರ ಹತ್ತಿರ ಕೋಟ್ಯಂತರ ರೂಪಾಯಿ ನಗದು ದೊರೆತಿದೆ !

ಕಾಂಗ್ರೆಸ್ಸಿನ ಮೂರು ಶಾಸಕರು ಅಮಾನತು

(ಎಡದಿಂದ ) ಕಾಂಗ್ರೆಸ್ಸಿನ ಆಮದಾರ್ ರಾಜೇಶ್ ಕಶ್ಯಪ್ , ಇರ್ಫಾನ್ ಅನ್ಸಾರಿ ಮತ್ತು ನಮನ ಬಿಕ್ಸಲ್

ಕೊಲ್ಕತ್ತಾ (ಬಂಗಾಲ) – ಬಂಗಾಲದ ಹಾವಡ ಪೊಲೀಸರು ಜಾರ್ಖಂಡದ ಕಾಂಗ್ರೆಸ್ಸಿನ ಶಾಸಕ ಇರ್ಫಾನ್ ಅನ್ಸಾರಿ, ರಾಜೇಶ ಕಶ್ಯಪ, ಮತ್ತು ನಮನ ಬಿಸ್ಕಲ್ ಇವರನ್ನು ಬಂಧಿಸಿದ್ದಾರೆ. ಈ ಶಾಸಕರ ಹತ್ತಿರ ದೊಡ್ಡ ಪ್ರಮಾಣದಲ್ಲಿ ನಗದು ದೊರೆತಿದೆ. ಈ ನಗದು ಎಣಿಸುವುದಕ್ಕಾಗಿ ನೋಟು ಎಣಿಸುವ ಯಂತ್ರ ತರಿಸಲಾಗಿತ್ತು. ಈ ಶಾಸಕರು ಹಾವಡಾದ ವಾಹನದಲ್ಲಿ ಹೋಗುವಾಗ ಅವರನ್ನು ನಿಲ್ಲಿಸಿ ಮತ್ತು ವಾಹನದ ತಪಾಸಣೆ ನಡೆಸಲಾಯಿತು. ಆಗ ಈ ನಗದು ಹಣ ದೊರಕಿದೆ. ಜಾರ್ಖಂಡದ ಶಾಸಕರು ಬಂಗಾಲಕ್ಕೆ ಏಕೆ ಬಂದಿದ್ದರು ? ಅವರು ಇಷ್ಟು ದೊಡ್ಡ ಪ್ರಮಾಣದ ನಗದು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು? ಹೀಗೆ ಅನೇಕ ಪಶ್ನೆಗಳು ಮುಂದೆ ಬಂದಿವೆ. ವಿಚಾರಣೆಯ ನಂತರ ಅದರ ಮಾಹಿತಿ ಸಿಗುವ ಸಾಧ್ಯತೆಯಿದೆ. ಕಾಂಗ್ರೆಸ್ ನಿಂದ ಈ ಶಾಸಕರನ್ನು ಅಮಾನತುಗೊಳಿಸಲಾಗಿದೆ.

 

ಸಂಪಾದಕೀಯ ನಿಲುವು

ಈ ವಿಷಯವಾಗಿ ಜನರಿಗೆ ಆಶ್ಚರ್ಯ ಅನಿಸಲಾರದು ! ದೇಶದ ಬಹುತೇಕ ಜನಪ್ರತಿನಿಧಿಗಳಲ್ಲಿರುವ ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿಯು ಅವರು ಜನಪ್ರತಿನಿಧಿಗಳಾದ ನಂತರ ಸಂಗ್ರಹವಾಗುತ್ತದೆ. ಇದನ್ನು ಜನರು ಕಳೆದ ಅನೇಕ ದಶಕಗಳಿಂದ ನೋಡುತ್ತಿದ್ದಾರೆ, ಎಲ್ಲ ಭ್ರಷ್ಟಾಚಾರಿಗಳು ಸಂಘಟಿತರಾಗಿರುವುದರಿಂದ ಅವರ ಮೇಲೆ ಕೇವಲ ರಾಜಕೀಯ ಸೇಡು ತೀರಿಸಲು ಯಾವಾಗಲಾದರೊಮ್ಮೆ ಕ್ರಮ ಕೈಗೊಳ್ಳಲಾಗುತ್ತದೆ. ದೇಶದ ಭ್ರಷ್ಟಾಚಾರ ನಿಜವಾಗಿಯೂ ಬೇರೆ ಸಮೇತ ನಾಶ ಮಾಡಬೇಕಾದರೆ ಧರ್ಮಚರಣೀ ಜನಪ್ರತಿನಿಧಿಗಳೇ ಬೇಕು.