ಹೊಸದಿಲ್ಲಿ – ರಾಷ್ಟ್ರೀಯ ತನಿಖಾ ದಳ (‘ಎನ್.ಐ.ಎ.’ಯ) ಮೂಲಗಳ ಪ್ರಕಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ (‘ಪಿ.ಎಫ್.ಐ.’ಗೆ) ಸೌದಿ ಅರೇಬಿಯಾ, ಕತಾರ್, ಕುವೈತ್, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹರೀನ್‌ನಿಂದ ಪ್ರತಿವರ್ಷ ೫೦೦ ಕೋಟಿ ರೂಪಾಯಿಗಳು ಸಿಗುತ್ತದೆ. ಈ ಹಣವನ್ನು ವೆಸ್ಟರ್ನ್ ಯೂನಿಯನ್ ಮೂಲಕ ಕುಟುಂಬದ ಖರ್ಚುವೆಚ್ಚಗಳ ಹೆಸರಿನಲ್ಲಿ ವಿವಿಧ ಖಾತೆಗಳಿಗೆ ಕಳುಹಿಸಲಾಗುತ್ತದೆ. ಇದಕ್ಕಾಗಿ ಪಿ.ಎಫ್.ಐ.ನ ಸದಸ್ಯರ ೧ ಲಕ್ಷ ಬ್ಯಾಂಕ್ ಖಾತೆಗಳು ಮತ್ತು ಅವರ ಸಂಬಂಧಿಕರು ಮತ್ತು ಪರಿಚಯಸ್ಥರ ೨ ಲಕ್ಷ ಬ್ಯಾಂಕ್ ಖಾತೆಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಮೊತ್ತವು ಪ್ರತಿ ತಿಂಗಳು ಬೇರೆ ಬೇರೆ ಖಾತೆಗಳಿಂದ ಬರುತ್ತದೆ. ಇಷ್ಟು ದೊಡ್ಡ ಹಣವನ್ನು ಎಲ್ಲಿ ಖರ್ಚು ಮಾಡಲಾಗುತ್ತಿದೆ ?, ಇದನ್ನು ಎನ್.ಐ.ಎ. ತನಿಖೆ ನಡೆಸುತ್ತಿದೆ. ಇದುವರೆಗಿನ ತನಿಖೆಯಿಂದ, ಪಿ.ಎಫ್.ಐ. ಈ ಹಣವನ್ನು ಯುವಕರ ಬ್ರೈನ್‌ವಾಶ್ ಮಾಡಿ ಅವರಿಗೆ ಇಸ್ಲಾಮಿ ಕಟ್ಟರವಾದವನ್ನು ಕಲಿಸುವ ಸಂಸ್ಥೆಗಳಿಗೆ ನೀಡುತ್ತದೆ ಎಂಬುದು ಗಮನಕ್ಕೆ ಬಂದಿದೆ.
ಈ ವರ್ಷದ ಜೂನ್‌ನಲ್ಲಿ, ಜಾರಿ ನಿರ್ದೇಶನಾಲಯವು (‘ಇಡಿ’)ಯು ಪಿ.ಎಫ್.ಐ. ಮತ್ತು ಅದರ ಸಹಸಂಸ್ಥೆ ‘ರೆಹಬ್ ಇಂಡಿಯಾ ಫೌಂಡೇಶನ್’ನ ವಿರುದ್ಧ ಆರ್ಥಿಕ ಅವ್ಯವಹಾರದ ಪ್ರಕರಣವನ್ನು ದಾಖಲಿಸುತ್ತಾ ೩೩ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿತ್ತು. ಅವರ ಖಾತೆಗಳಲ್ಲಿ ಅನುಕ್ರಮವಾಗಿ ೬೦ ಕೋಟಿ ಮತ್ತು ೫೮ ಕೋಟಿ ಜಮೆಯಾಗಿತ್ತು. ತನಿಖೆಯಿಂದ ತಪ್ಪಿಸಲು ಖಾತೆಗಳಿಂದ ಮೊತ್ತವನ್ನು ತೆಗೆಯಲಾಗಿದೆ. ‘ಇಡಿ’ ಕ್ರಮ ಕೈಗೊಂಡಾಗ ಖಾತೆಗಳಲ್ಲಿ ಕೇವಲ ೬೮ ಲಕ್ಷ ರೂಪಾಯಿ ಇತ್ತು.
ಮುಸಲ್ಮಾನರ ವಿರುದ್ಧವಿರುವ ಮತ್ತು ಸರಕಾರದ ನೀತಿಗೆ ವಿರುದ್ಧದ ಆಂದೋಲನಗಳಿಗಾಗಿ ಖರ್ಚು !
ಪಿ.ಎಫ್.ಐ. ಮುಸಲ್ಮಾನರ ವಿರುದ್ಧವಾದ ಮತ್ತು ಸರಕಾರದ ನೀತಿಗಳ ವಿರುದ್ಧದ ಪ್ರತಿಭಟನೆಗಳಿಗೆ ಹೆಚ್ಚು ಖರ್ಚು ಮಾಡುತ್ತದೆ. ಬಂದಿಗಳಾಗಿರುವ ಮುಸಲ್ಮಾನರಿಗೂ ಕಾನೂನು ನೆರವು ನೀಡಲಾಗುತ್ತದೆ. ಪಿ.ಎಫ್.ಐ.ಯು ‘ಸೋಷಿಯಲಿಸ್ಟ್ ಡೆಮಾಕ್ರಟಿಕ್ ಫ್ರಂಟ್ ಆಫ್ ಇಂಡಿಯಾ’, ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ಮುಂತಾದ ಸಂಘಟನೆಗಳನ್ನು ಸ್ಥಾಪಿಸಿದೆ. ಗುಪ್ತಚರ ಅಧಿಕಾರಿಯೊಬ್ಬರು ಮಾಹಿತಿ ನೀಡಿದ ಪ್ರಕಾರ, ಪಿ.ಎಫ್.ಐ.ಯು ನಿಷೇಧಿತ ಸಂಘಟನೆ ‘ಸಿಮಿ’ ಮಾಡಿದ ತಪ್ಪುಗಳನ್ನೇ ಈ ಸಂಘಟನೆಯೂ ಪುನರಾವರ್ತಿಸುತ್ತಿದೆ. ಸಿಮಿಯ ಕಾರ್ಯಕರ್ತರು ಪಿ.ಎಫ್.ಐ.ನಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ.
ಪಿ.ಎಫ್.ಐ. ಮೇಲೆ ನಿಷೇಧ ಸಾಧ್ಯತೆ !
ಪಿ.ಎಫ್.ಐ. ವಿದೇಶದಿಂದ ಬಂದ ಹಣವನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸುತ್ತಿರುವುದು ಸಾಬೀತಾದರೆ ನಿಷೇಧ ಹೇರುವ ಸಾಧ್ಯತೆ ಇದೆ. ಹಲವಾರು ರಾಜ್ಯಗಳ ಗುಪ್ತಚರ ಸಂಸ್ಥೆಗಳು ಪಿ.ಎಫ್.ಐ. ಅನ್ನು ಶಂಕಿತ ಎಂದು ಗುರುತಿಸಿವೆ. ಜಾರ್ಖಂಡವು ಈ ಸಂಘಟನೆಯ ಮೇಲೆ ನಿರ್ಬಂಧಗಳನ್ನು ಹೇರಿದೆ; ಆದರೆ ನಂತರ ಅದನ್ನು ಉಚ್ಚ ನ್ಯಾಯಾಲಯವು ರದ್ದುಪಡಿಸಿತ್ತು.
ಇಸ್ಲಾಮಿಕ್ ಸಂಘಟನೆಂಯಿಂದ ಪಿ.ಎಫ್.ಐ. ನಿಷೇಧಿಸಲು ಆಗ್ರಹ
‘ಆಲ್ ಇಂಡಿಯಾ ಸೂಫಿ ಸಜ್ಜದನಶಿನ್ ಕೌನ್ಸಿಲ್’ ಆಯೋಜಿಸಿದ್ದ ಪರಿಷತ್ತಿನಲ್ಲಿ ಪಿ.ಎಫ್.ಐ.ನಂತಹ ಸಂಘಟನೆಗಳನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದೆ. ಈ ಪರಿಷತ್ತಿನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊವಲ್ ಕೂಡ ಉಪಸ್ಥಿತರಿದ್ದರು. ಕೌನ್ಸಿಲ್ ಅಧ್ಯಕ್ಷ ಹಜರತ್ ಸೈಯದ್ ನಸ್ರುದ್ದೀನ್ ಚಿಶ್ತಿ ಇವರು ಕಟ್ಟರವಾದಿ ಸಂಘಟನೆಗಳ ಮೇಲೆ ನಿರ್ಬಂಧ ಹಾಕಬೇಕೆಂದು ಬೇಡಿಕೆಯನ್ನಿಟ್ಟಿದ್ದಾರೆ.
ಸಂಪಾದಕೀಯ ನಿಲುವು
|