ದೇವರು ನಮಗೆ ಸ್ವಾತಂತ್ರ‍್ಯದ ೭೫ನೇ ವಾರ್ಷಿಕೋತ್ಸವವನ್ನು ನೋಡುವ ಮಹಾಭಾಗವ್ಯವನ್ನು ನೀಡಿದ್ದಾರೆ ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಪ್ರಧಾನಮಂತ್ರಿ ನರೇಂದ್ರ ಮೋದಿ

ನವದೆಹಲಿ – ಭಾರತಕ್ಕೆ ಸ್ವಾತಂತ್ರ‍್ಯ ದೊರೆತಿರುವ ಘಟನೆಯು ೭೫ ವರ್ಷಗಳನ್ನು ಪೂರೈಸುತ್ತಿದೆ. ನಾವೆಲ್ಲರೂ ಈ ಅದ್ಭುತ ಹಾಗೂ ಐತಿಹಾಸಿಕ ಕ್ಷಣದ ಸಾಕ್ಷಿದಾರರಾಗಲಿದ್ದೇವೆ. ದೇವರು ನಮಗೆ ಮಹಾಭಾಗ್ಯವನ್ನು ನೀಡಿದ್ದಾರೆ. ನಾವು ಗುಲಾಮಗಿರಿಯ ಕಾಲದಲ್ಲಿ ಜನಿಸಿದ್ದರೆ, ನಮಗೆ ‘ಈ ದಿನ ಹೇಗಿರುತ್ತದೆ ?’ ಎಂಬುದರ ಕಲ್ಪನೆ ಮಾಡುವುದೂ ಕಠಿಣವಾಗಿತ್ತು. ‘ಆ ಕಾಲದಲ್ಲಿ ಸ್ವಾತಂತ್ರ‍್ಯದ ಬಂಧನದಿಂದ ಮುಕ್ತರಾಗಲು ಎಷ್ಟೊದು ಮಹತ್ತರ ಅಸ್ವಸ್ಥತೆ ಇದ್ದಿರಬಹುದು ಎಂಬುದರ ಬಗ್ಗೆ ವಿಚಾರ ಮಾಡಿ, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ‘ಮನ ಕೀ ಬಾತ್‌’ನ ೯೧ನೇ ಕಾರ್ಯಕ್ರಮದಲ್ಲಿ ಜುಲೈ ೩೧, ರವಿವಾರದಂದು ಪ್ರತಿಪಾದಿಸಿದರು. ಆಗಸ್ಟ ೧೫, ೧೯೪೭ರಂದು ಭಾರತಕ್ಕೆ ಸ್ವಾತಂತ್ರ‍್ಯ ದೊರೆಯಿತು. ಈ ಬರುವ ಆಗಸ್ಟ ೧೫ ರಂದು ಈ ಐತಿಹಾಸಿಕ ಘಟನೆಗೆ ೭೫ ವರ್ಷಗಳು ಪೂರ್ಣವಾಗುತ್ತಿವೆ. ಈ ನಿಮಿತ್ತ ಪ್ರಧಾನಮಂತ್ರಿಗಳು ಮಾತನಾಡುತ್ತಿದ್ದರು.

ಪ್ರಧಾನಮಂತ್ರಿ ಮೋದಿಯವರು ಮಾತನಾಡುತ್ತ, ಸ್ವಾತಂತ್ರ‍್ಯದ ಅಮೃತ ಮಹೋತ್ಸವಕ್ಕೆ ಜನಾಂದೋಲನದ ಸ್ವರೂಪ ಬರುತ್ತಿದೆ. ಮೇಘಾಲಯದಲ್ಲಿ ಹುತಾತ್ಮರಾದ ಟಿರೋಟ ಸಿಂಹರವರು ಖಾಸಿ ಗುಡ್ಡದ ಮೇಲಿನ ಬ್ರಿಟೀಷರ ನಿಯಂತ್ರಣವನ್ನು ತೀವೃವಾಗಿ ವಿರೋಧಿಸಿದ್ದರು. ಅವರು ಈ ಚಳುವಳಿಯನ್ನು ನಾಟಕದ ಮೂಲಕ ಮಂಡಿಸಿದರು ಹಾಗೂ ಇತಿಹಾಸವನ್ನು ಜೀವಂತಗೊಳಿಸಿದರು. ಕರ್ನಾಟಕದಲ್ಲಿ ವೈಶಿಷ್ಟ್ಯಪೂರ್ಣ ಅಭಿಯಾನವನ್ನು ನಡೆಸಲಾಯಿತು. ೭೫ ಕಡೆಗಳಲ್ಲಿ ಭವ್ಯ ಕಾರ್ಯಕ್ರಮಗಳು ನಡೆದವು. ಈ ಸಮಯದಲ್ಲಿ ಕರ್ನಾಟಕದ ಸ್ವಾತಂತ್ರ‍್ಯಸೈನಿಕರನ್ನು ಸ್ಮರಿಸಲಾಯಿತು, ಎಂದು ಪ್ರಧಾನ ಮಂತ್ರಿಗಳು ಹೇಳಿದರು.

ಅಮೃತ ಮಹೋತ್ಸವದ ನಿಮಿತ್ತ ‘ಆಝಾದಿ ಕೀ ರೇಲ ಗಾಡಿ’ ಕಾರ್ಯಕ್ರಮ !

ಈ ತಿಂಗಳಲ್ಲಿ ‘ಆಝಾದಿ ಕೀ ರೇಲ ಗಾಡಿ’ ಎಂಬ ಹೆಸರಿನ ಹೊಸ ಉಪಕ್ರಮವನ್ನು ಆರಂಭಿಸಲಾಯಿತು. ಸ್ವಾತಂತ್ರ‍್ಯ ಚಳುವಳಿಯಲ್ಲಿನ ರೈಲುಗಳ ಭೂಮಿಕೆಯು ಜನರಿಗೆ ತಿಳಿಯಬೇಕು, ಎಂಬುದು ಇದರ ಹಿಂದಿನ ಉದ್ದೇಶವಾಗಿದೆ ! ಝಾರಖಂಡನ ಗೋಮೋ ಜಂಕ್ಶನನ್ನು ‘ನೇತಾಜೀ ಸುಭಾಷಚಂದ್ರ ಭೋಸ ಜಂಕ್ಶನ’ ಎಂದು ಗುರುತಿಸಲಾಗುತ್ತದೆ. ಈ ನಿಲ್ದಾಣದಲ್ಲಿ ‘ಕಾಲಕಾ ಮೇಲ’ ಮೇಲೆ ಹತ್ತಿ ಬ್ರಿಟೀಷ ಅಧಿಕಾರಿಗಳಿಗೆ ಚಳ್ಳೇ ಹಣ್ಣು ತಿನ್ನಿಸಲು ನೇತಾಜಿಯವರು ಯಶಸ್ವಿಯಾಗಿದ್ದರು. ಲಕ್ಷ್ಮಣಪುರಿ (ಲಖನೌ) ಬಳಿ ಇರುವ ‘ಕಾಕೋರಿ’ಯ ಹೆಸರನ್ನೂ ನೀವು ಕೇಳಿರಬಹುದು. ರಾಮಪ್ರಸಾದ ಬಿಸ್ಮಿಲ್‌, ಅಶ್ಫಾಕುಲ್ಲಾಹ ಖಾನ ಮುಂತಾದ ಶೂರವೀರರ ಹೆಸರನ್ನೂ ಇದರೊಂದಿಗೆ ಜೋಡಿಸಲಾಗಿದೆ. ದೇಶದಾದ್ಯಂತ ಇರುವ ೨೪ ರಾಜ್ಯಗಳಲ್ಲಿರುವ ೭೫ ರೈಲು ನಿಲ್ದಾಣಗಳ ಸ್ವಾತಂತ್ರ‍್ಯ ಚಳುವಳಿಯೊಂದಿಗೆ ಸಂಬಂಧವಿದೆ. ಅವುಗಳನ್ನು ಅಲಂಕರಿಸಲಾಗುವುದು ಎಂಬ ಮಾಹಿತಿಯನ್ನೂ ಪ್ರಧಾನಮಂತ್ರಿಯವರು ರಾಷ್ಟ್ರವನ್ನು ಸಂಬೋಧಿಸುವಾಗ ನೀಡಿದರು.
‘ನೀವು ಸಮಯ ತೆಗೆದು ಇಂತಹ ಹತ್ತಿರದ ಐತಿಹಾಸಿಕ ನಿಲ್ದಾಣಗಳಿಗೆ ಭೇಟಿ ನೀಡಬೇಕು. ನಿಮಗೆ ಅವುಗಳ ಇತಿಹಾಸ ತಿಳಿಯುವುದು. ಶಾಲೆಗೆ ಹೋಗುವ ಮಕ್ಕಳಿಗೂ ಇಂತಹ ನಿಲ್ದಾಣಕ್ಕೆ ಒಯ್ಯಬೇಕು’, ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಕರೆ ನೀಡಿದರು.

ಸ್ವಂತದ ಮನೆಯಲ್ಲಿ ತ್ರಿವರ್ಣವನ್ನು ಹಾರಿಸಬೇಕು ! – ಪ್ರಧಾನಮಂತ್ರಿ

’೧೩ ರಿಂದ ೧೫ ಆಗಸ್ಟನ ಸಮಯದಲ್ಲಿ ‘ಹರ ಘರ ತಿರಂಗಾ’ ಎಂಬ ವಿಶೇಷ ಅಭಿಯಾನವನ್ನು ಆಯೋಜಿಸಲಾಗಿದೆ. ನೀವೂ ಮನೆಯಲ್ಲಿ ತ್ರಿವರ್ಣವನ್ನು ಹಾರಿಸಿ ! ತ್ರಿವರ್ಣವು ನಮ್ಮನ್ನು ಒಗ್ಗೂಡಿಸುತ್ತದೆ ಮತ್ತು ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಪ್ರೇರಣೆಯನ್ನು ನೀಡುತ್ತದೆ. ಆಗಸ್ಟ ೨ರಂದು ರಾಷ್ಟ್ರಧ್ವಜದ ರಚನೆ ಮಾಡುವ ಪಿಂಗಲೀ ವ್ಯಂಕಯ್ಯಾರವರ ಜಯಂತಿಯಿದೆ. ಮಹಾನ ಕ್ರಾಂತಿಕಾರಿ ಮೇಡಮ ಕಾಮಾರವರು ರಾಷ್ಟ್ರಧ್ವಜಕ್ಕೆ ಆಕಾರ ನೀಡಿದ್ದಾರೆ’, ಎಂದು ಪ್ರಧಾನಮಂತ್ರಿಗಳು ಹೇಳಿದ್ದರು.