ನಾಗರಿಕ ಸೇವೆ ಪರೀಕ್ಷೆಯ ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶನ ಮಾಡುವ ಹಿಂದೂದ್ವೇಷಿ ನ್ಯಾಯವಾದಿ ಅವಧ ಪ್ರತಾಪ ಓಝಾ ಇವರಿಂದ ಭಗವಾನ್ ಶ್ರೀ ಕೃಷ್ಣನ ಮೇಲೆ ಅಶ್ಲೀಲ ಟೀಕೆ !

ಹೊಸ ದೆಹಲಿ – ಕೇಂದ್ರ ಲೋಕ ಸೇವಾ ಆಯೋಗದ (ಯುಪಿಎಸ್ಸಿ) ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಪ್ರಸಿದ್ಧ ನ್ಯಾಯವಾದಿ ಅವಧ ಪ್ರತಾಪ ಓಝಾ ಇವರ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಅವರು ಭಗವಾನ್ ಶ್ರೀ ಕೃಷ್ಣ ಮತ್ತು ಬಲರಾಮರ ಮೇಲೆ ಟೀಕೆ ಮಾಡಿದ್ದಾರೆ. “ಬಲರಾಮ ಒಂದು ಬಾರಿ ಶ್ರೀ ಕೃಷ್ಣನಿಗೆ ಹೇಳಿದನಂತೆ ‘ಯಾದವರು ನಿನ್ನನ್ನು ಹಿಡಿದು ಕೊಲ್ಲುವರು’ ಎಂದು. ಆಗ ಶ್ರೀ ಕೃಷ್ಣ ಅವನಿಗೆ ಏಕೆ ಎಂದು ಕೇಳಿದಾಗ ಬಲರಾಮನು ‘ನೀನು ಅವರ ಪತ್ನಿಯರ ಜೊತೆ ಕುಣಿಯುತ್ತೀ, ಹಾಗಾದರೆ ಹೊಡೆಯದೇ ಇರುವವರೇ?’, ಆಗ ಶ್ರೀ ಕೃಷ್ಣ ಹೇಳುತ್ತಾನೆ ‘ನೀನು ಒತ್ತಡ ಮಾಡಿಕೊಳ್ಳಬೇಡ. ನಾನೆಲ್ಲವೂ ನಿಭಾಯಿಸುತ್ತೇನೆ’. ಅದರ ನಂತರ ಒಂದು ದಿನ ಬೃಂದಾವನದಲ್ಲಿ ನೆರೆ ಬಂದಾಗ ಶ್ರೀ ಕೃಷ್ಣ ಗೋವರ್ಧನ ಪರ್ವತ ಎತ್ತುತ್ತಾನೆ ಅದನ್ನು ನೋಡಿ ಯಾದವರು ಹೇಳುತ್ತಾರೆ ನೀನು ನಮ್ಮ ಪತ್ನಿಯರ ಜೊತೆಗೆ ಕುಣಿಯುತ್ತಿದ್ದೆ, ಈಗ ನೀನು ಭಾವ ಮೈದುನರ ಜೊತೆಯೂ ಕುಣಿಯಬಹುದು, ನಮಗೇನೂ ಅಭ್ಯಂತರವಿಲ್ಲ” ಎಂದು ನ್ಯಾಯವಾದಿಯ ಅಸಭ್ಯ ಉದಾಹಾರಣೆ ಇದು.

ಇಸ್ಲಾಮನ್ನು ಹೊಗಳಿದ ನ್ಯಾಯವಾದಿ !

ಕೆಲವು ದಿನಗಳ ಹಿಂದೆ ಓಝಾ ಇವರು ಇಸ್ಲಾಮನ್ನು ಹೊಗಳಿದ ಒಂದು ವೀಡಿಯೋ ಬೆಳಕಿಗೆ ಬಂದಿದೆ. ಇದರಲ್ಲಿ ಇಸ್ಲಾಂ ಮಹಾನವೆಂದು ಸಂಭೋಧಿಸುತ್ತಾ ಬ್ರಾಹ್ಮಣರ ಬಗ್ಗೆ ಮಾತ್ರ ಟೀಕಿಸಿದ್ದಾರೆ. ಅದರಲ್ಲಿ ಅವರು ಬ್ರಿಟಿಷರಿಂದ ಹೊಡಿಸಿಕೊಂಡವರು ಈಗ ಗರ್ವದಿಂದ ತಿರುಗುತ್ತಿದ್ದಾರೆ ಎಂದು ಹೇಳಿದ್ದಾರೆ, ಹಾಗೆ ಯಾರೆಲ್ಲಾ ನೆಹರೂರವನ್ನು ಟೀಕಿಸುತ್ತಾರೆಯೋ ಅವರೆಲ್ಲರೂ ಮೂರ್ಖರೆಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಹಿಂದೂ ದೇವತೆಗಳ ಅವಮಾನ ಮಾಡುವವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಇಲ್ಲದೇ ಇರುವುದರಿಂದ ಯಾರೇ ಬಂದು ಹಿಂದೂ ದೇವತೆಗಳ ಅವಮಾನ ಮಾಡುತ್ತಾರೆ ! ಇದು ಹಿಂದೂಗಳಿಗೆ ನಾಚಿಕೆಗೇಡು! ಸರಕಾರ ಇಂತಹವರನ್ನು ಜನ್ಮಪೂರ್ತಿ ಜೈಲಿಗಟ್ಟಬೇಕೆಂಬುದೇ ಹಿಂದೂಗಳ ಬೇಡಿಕೆ !
ಇಂತಹ ಹಿಂದೂದ್ವೇಷಿ ಶಿಕ್ಷಕರು ಎಂದಾದರು ನೀತಿವಂತ ವಿದ್ಯಾರ್ಥಿಗಳನ್ನು ಸೃಷ್ಟಿಸುವರೆ ?