ಮೇರಠ(ಉತ್ತರಪ್ರದೇಶ)ನಲ್ಲಿ ಮತಾಂಧ ಮುಸಲ್ಮಾನರಿಂದ ಕಾವಡದಲ್ಲಿ ಉಗುಳಿದ ಘಟನೆ !

  • ಯಾತ್ರಿಕರು ಒಬ್ಬ ಮತಾಂಧನನ್ನು ಹಿಡಿದು ಥಳಿಸಿದರು !

  • ಯಾತ್ರಿಕರಿಂದ ರಸ್ತೆ ಬಂದ್ ಆಂದೋಲನ

ಮೇರಠ(ಉತ್ತರಪ್ರದೇಶ) – ಇಲ್ಲಿಯ ಕಂಕರಖೇಡಾದ ರಾಷ್ಟ್ರೀಯ ಹೆದ್ದಾರಿ ೫೮ ರ ಶಿಬಿರದಲ್ಲಿ ಕೆಲವು ಕಾವಡ ಯಾತ್ರಿಕರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಇಬ್ಬರು ಮತಾಂಧ ಮುಸಲ್ಮಾನ ಯುವಕರು ದ್ವಿಚಕ್ರವಾಹನದಿಂದ ಅಲ್ಲಿ ಬಂದರು ಮತ್ತು ಅವರು ಕಾವಡದಲ್ಲಿ ಉಗುಳಿದರು. ಈ ಘಟನೆಯನ್ನು ಕಾವಡ ಯಾತ್ರಿಕರು ನೋಡಿದರು ಮತ್ತು ಅವರಲ್ಲಿ ಒಬ್ಬನನ್ನು ಹಿಡಿದರು, ಆದರೆ ಮತ್ತೊಬ್ಬ ಓಡಿ ಹೋದನು. ಹಿಡಿದ ಮತಾಂಧನನ್ನು ಕಾವಡ ಯಾತ್ರಿಕರು ಥಳಿಸಿದರು ಮತ್ತು ಪೊಲೀಸರ ವಶಕ್ಕೆ ಒಪ್ಪಿಸಿದರು. ತದನಂತರ ಇಲ್ಲಿ ಕಾವಡ ಯಾತ್ರಿಕರು ರಸ್ತೆ ತಡೆ ಆಂದೋಲನ ಮಾಡಿದರು. ಇದರಿಂದ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತು ಮಾಡಲಾಗಿತ್ತು. ತದನಂತರ ಪೊಲೀಸ ಅಧೀಕ್ಷಕರು ಮತ್ತು ಜಿಲ್ಲಾಧಿಕಾರಿಗಳು ಕಾವಡ ಯಾತ್ರಿಕರಿಗೆ ಸಮಾಧಾನಪಡಿಸಿದರು. ಹಾಗೆಯೇ ೪ ಯಾತ್ರಿಕರಿಗೆ ಪುನಃ ಹರಿದ್ವಾರಕ್ಕೆ ಕರೆದೊಯ್ದು ಗಂಗಾಜಲವನ್ನು ತುಂಬಿ ಕೊಡುವ ಆಶ್ವಾಸನೆ ನೀಡಿದರು.

ಸಂಪಾದಕೀಯ ನಿಲುವು

ನೂಪುರ ಶರ್ಮಾ ಇವರ ಪ್ರಕರಣದಲ್ಲಿ ಕ್ರಮ ಕೈಕೊಳ್ಳುವಂತೆ ಮನವಿ ಮಾಡುವ ಮುಸಲ್ಮಾನ, ಜಾತ್ಯತೀತವಾದಿ, ಮುಸ್ಲಿಂ ದೇಶ ಮತ್ತು ಅವರ ಸಂಘಟನೆಗಳು ಈ ಘಟನೆಯ ವಿಷಯದಲ್ಲಿ ಏಕೆ ಮಾತನಾಡುವುದಿಲ್ಲ ? ಮುಸಲ್ಮಾನರಿಗೆ ಧಾರ್ಮಿಕ ಭಾವನೆಯಿದೆ ಮತ್ತು ಹಿಂದೂಗಳಿಗೆ ಇಲ್ಲ, ಎಂದು ಅವರಿಗೆ ಹೇಳುವುದಿದೆಯೇ ?

ದೇಶದಲ್ಲಿ ಈಶ್ವರನ ನಿಂದೆಯ ಪ್ರಕರಣದಲ್ಲಿ ಕಠಿಣ ಕಾನೂನು ಇಲ್ಲದಿರುವುದರಿಂದ ಇಂತಹ ಪ್ರಕರಣಗಳು ಜರುಗಿದರೂ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವುದಿಲ್ಲ. ಸರಕಾರ ಈಗಲಾದರೂ ಇದನ್ನು ಗಾಂಭೀರವಾಗಿ ನೋಡುವುದು, ಎಂದು ಹಿಂದೂಗಳಿಗೆ ಅನಿಸುತ್ತದೆ !