ಮಧ್ಯಪ್ರದೇಶದಲ್ಲಿ ನೂಪುರ ಶರ್ಮಾ ಇವರ ಸಮರ್ಥನೆ ಮಾಡಿರುವ ಪ್ರಕರಣ
ಉಜ್ಜೈನ (ಮಧ್ಯಪ್ರದೇಶ) – ರಾಜ್ಯದ ಮಾಲವಾದಲ್ಲಿ ನೂಪುರ ಶರ್ಮಾ ಇವರ ಸಮರ್ಥನೆ ಮಾಡಿರುವುದರಿಂದ ಮತಾಂಧರು ಬಜರಂಗ ದಳದ ಕಾರ್ಯಕರ್ತ ಆಯುಷ್ ಜಾಧವ ಇವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅದರಲ್ಲಿ ಸುರೇಶ ಗಂಭೀರವಾಗಿ ಗಾಯಗೊಂಡಿರುವುದರಿಂದ ಉಪಚಾರಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಅಮಲ, ಅರಬಾಜ, ಆಸೀಫ್, ಸರಫರಾಜ್, ಅಮ್ಮು ಮೇವಾತಿ, ಚಿಕಿ, ಅಮನ, ಸೋಹೆಲ, ಮುನ್ನಾ ಮೇವಾತಿ , ಸಲಮಾನ, ಫಿರದೌಸ್, ಸಮೀರ್, ಮತ್ತು ಸಾಜಿದ್ ಇವರ ವಿರುದ್ಧ ದೂರು ದಾಖಲಿಸಿ ಅದರಲ್ಲಿನ ೮ ಜನರನ್ನು ಬಂಧಿಸಿದ್ದಾರೆ. ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್.ಎಸ್.ಎ) ಅಡಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಜ್ಯದ ಗೃಹಮಂತ್ರಿ ನರೋತ್ತಮ ಮಿಶ್ರಾ ಇವರು ಆರೋಪಿಗಳ ಕಾನೂನುಬಾಹಿರ ಕಾಮಗಾರಿಯ ಮೇಲೆ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ.
Bajrang Dal worker Ayush Jadam attacked by Muslim mob for supporting Nupur: MP https://t.co/mBGOqiKXyZ
— HinduPost (@hindupost) July 22, 2022
ಸಂಪಾದಕೀಯ ನಿಲುವುನೂಪುರ ಶರ್ಮಾ ಪಕರಣದಿಂದ ಮತಾಂಧರು ಹಿಂದೂಗಳನ್ನು ಹಾಗೂ ಅವರ ಕಾರ್ಯಕರ್ತರನ್ನು ಗುರಿ ಮಾಡುತ್ತಿದ್ದಾರೆ. ಇದು ಕಳೆದ ಕೆಲವು ಘಟನೆಗಳಿಂದ ತಿಳಿಯುತ್ತಿದೆ. ಹಿಂದೂಗಳಿಗೆ ಇದು ಅಪಾಯದ ಗಂಟೆ ! ಇಂತಹ ದಾಳಿಯಿಂದ ಸ್ವಂತ ರಕ್ಷಣೆ ಮಾಡಿಕೊಳ್ಳಲು ಹಿಂದೂಗಳಿಗೆ ಸ್ವಸಂರಕ್ಷಣ ಪ್ರಶಿಕ್ಷಣ ಪಡೆಯದೇ ಬೇರೆ ಉಪಾಯವಿಲ್ಲ. |