ಗುಜರಾತಿನಲ್ಲಿ ಉಚಿತ ವಿದ್ಯುತ್ ಪೂರೈಸುವ ಆಶ್ವಾಸನೆ ನೀಡಿದ ಕೇಜ್ರಿವಾಲ್ !

ಕರ್ಣಾವತಿ (ಗುಜರಾತ) – ಈ ವರ್ಷದ ಕೊನೆಯಲ್ಲಿ ಗುಜರಾತ್ ವಿಧಾನ ಸಭೆಯ ಚುನಾವಣೆ ನಡೆಯುವುದು. ಅದರ ಪ್ರಯುಕ್ತ ರಾಜಕೀಯ ನಾಯಕರು ರಾಜ್ಯದ ಪ್ರವಾಸ ಕೈಗೊಂಡಿದ್ದಾರೆ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇವರು ಈಗಷ್ಟೇ ಗುಜರಾತಿನ ಪ್ರವಾಸಕ್ಕೆ ಬಂದಿದ್ದಾರೆ. ಅವರು ಪ್ರಸ್ತುತ ಬೆಲೆ ಏರಿಕೆ ತುಂಬಾ ಹೆಚ್ಚಾಗಿದ್ದು, ವಿದ್ಯುತ್ ಬೆಲೆ ಕೂಡ ಹೆಚ್ಚಾಗಿದೆ. ನಾವು ಗೆದ್ದರೆ ಯಾವ ರೀತಿ ದೆಹಲಿ ಮತ್ತು ಪಂಜಾಬಿನಲ್ಲಿ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಿದ್ದೇವೆಯೋ, ಅದೇ ರೀತಿ ಗುಜರಾತಿನ ಜನತೆಗೂ ಉಚಿತವಾಗಿ ವಿದ್ಯುತ್ ನೀಡಲಾಗುವುದು.

ಕೇಜ್ರಿವಾಲ್ ಮಾತು ಮುಂದುವರೆಸಿ, ದೆಹಲಿ ಮತ್ತು ಪಂಜಾಬ ನಂತೆಯೇ ವಿದ್ಯುತ್ ಸಂದರ್ಭದಲ್ಲಿ ನಾವು ಮುಂದಿನ ಮೂರು ಕೆಲಸಗಳು ಮಾಡುವೆವು.

೧. ಸರಕಾರ ರಚನೆಯಾದ ೩ ತಿಂಗಳ ನಂತರ ಪ್ರತಿಯೊಂದು ಕುಟುಂಬಕ್ಕೆ ೩೦೦ ಯೂನಿಟ್ ಉಚಿತ ವಿದ್ಯುತ್ ಪೂರೈಸುವೆವು.

೨. ೨೪ ಗಂಟೆ ವಿದ್ಯುತ್ ಪೂರೈಕೆ, ಅದು ಉಚಿತವಾಗಿ ಇರುವುದು. ವಿದ್ಯುತ್ ಕಡಿತ ಮಾಡುವುದಿಲ್ಲ.

೩. ಡಿಸೆಂಬರ್ ೩೧, ೨೦೨೧ ವರೆಗಿನ ಮನೆ ಬಳಕೆ ವಿದ್ಯುತ್ ಬಿಲ್ ಮನ್ನಾ ಮಾಡುವೆವು.

ಸಂಪಾದಕೀಯ ನಿಲುವು

ಇಂದು ದೇಶದಲ್ಲಿ ಪ್ರತಿಯೊಂದು ವಸ್ತು ತುಟ್ಟಿಯಾಗಿದೆ. ಇಂಥದರಲ್ಲಿ ಉಚಿತವಾಗಿ ವಿದ್ಯುತ್ ನೀಡಲು ದೇಶದ ಕೈಗೆಟಕುವ ವಿಷಯವೇ ? ಚುನಾವಣೆಯ ಕಡೆಗೆ ನೋಡುತ್ತಾ ಕೇಜ್ರಿವಾಲ್ ನಂತಹ ಸ್ವಾರ್ಥಿ ಮತ್ತು ಅವಕಾಶವಾದಿ ನಾಯಕರು ಈ ರೀತಿಯ ಅರ್ಥಹೀನ ಆಶ್ವಾಸನೆಗಳು ನೀಡಿ ಜನರ ದಾರಿ ತಪ್ಪಿಸುತ್ತಾರೆ. ಇದನ್ನು ಗಮನದ್ಲಿಟ್ಟುಕೊಳ್ಳಿ !

ಎಲ್ಲಿ ಜನತೆಗೆ ತ್ಯಾಗ ಕಲಿಸುವ ಹಿಂದಿನ ತೇಜಸ್ವಿ ಹಿಂದೂ ರಾಜರು, ಆದರೆ ಈಗ ಜನತೆಗೆ ‘ಇದನ್ನು ಉಚಿತವಾಗಿ ನೀಡುತ್ತೇವೆ’, ‘ಅದನ್ನು ಉಚಿತವಾಗಿ ನೀಡುತ್ತೇವೆ’ ಎಂದು ಆಮಿಷ ತೋರಿಸಿ ಅವರನ್ನು ಸ್ವಾರ್ಥಿಗಳಾಗಿ ಮಾಡುವ ಈಗಿನ ಶಾಸಕರು!